ಉಗರಗೋಳ(ತಾ.ಸವದತ್ತಿ) 19: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಶುಕ್ರವಾರ ದವನದ ಹುಣ್ಣಿಮೆ ಆಚರಿಸಲಾಯಿತು. ಕನರ್ಾಟಕ, ಮಹಾರಾಷ್ಟ್ರ, ಗೋವಾ, ತಮಿಳನಾಡು, ಕೇರಳ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬಂದು, ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮಪರ್ಿಸಿದರು.
ಯಲ್ಲಮ್ಮ ದೇವಾಲಯದ ಆವರಣದಲ್ಲಿ ಭಕ್ತರದಟ್ಟಣೆ ಅಧಿಕವಾಗಿತ್ತು. ಅತ್ಯಧಿಕ ಪ್ರಮಾಣದಲ್ಲಿ ಬಂದಿದ್ದ ರೈತರು, ಮಳೆ, ಬೆಳೆ ಸಮೃದ್ಧವಾಗಿ ಬರಲೆಂದು ಪ್ರಾಥರ್ಿಸಿದರು. ಸುಡು ಬಿಸಿಲಲ್ಲೂ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಸರದಿ ಸಾಲಿನಲ್ಲಿ ನಿಂತ ಭಕ್ತಾಧಿಗಳು, 'ಎಲ್ಲರ ಅಮ್ಮ ಯಲ್ಲಮ್ಮ ದೇವಿಯ ದರ್ಶನ, ಆಶೀವರ್ಾದ ಪಡೆದು ಕೃತಾರ್ಥರಾದರು.
ಗುಡ್ಡದ ವಿಶಾಲವಾದ ಪರಿಸರದಲ್ಲಿ ಒಲೆ ಹೂಡಿ ನೈವೇದ್ಯ ತಯಾರಿಸಿದ ಭಕ್ತಾಧಿಗಳು, ತಮ್ಮ ಶಕ್ತ್ಯಾನುಸಾರ ಯಲ್ಲಮ್ಮ ದೇವಿಗೆ ಪೂಜೆ ಸಲ್ಲಿಸಿ ಕೃತಾರ್ಥರಾದರು. ವಿವಿಧ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು.
ವಿಶೇಷ ಪೂಜೆ ವೇಳೆ, ರೇಣುಕಾ ಯಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನೆ ಸಮಿತಿ ಅಧ್ಯಕ್ಷ ರಾಮನಗೌಡ ತಿಪರಾಶಿ, ಯಲ್ಲಮ್ಮ ದೇವಸ್ಥಾನದ ಕಾರ್ಯನಿವರ್ಾಹಕ ಅಧಿಕಾರಿ ರವಿ ಕೋಟಾರಗಸ್ತಿ, ಸಹಾಯಕ ಕಾರ್ಯನಿವರ್ಾಹಕ ಅಧಿಕಾರಿ ಬಸವರಾಜ ಜೀರಗ್ಯಾಳ, ಮಹಾರಾಜಗೌಡ ಪಾಟೀಲ, ಅಲ್ಲಮಪ್ರಭು ಪ್ರಭುನವರ, ಸದಾನಂದ ಈಟಿ, ಎಂ.ಬಿ.ತೊರಗಲ್ಲಮಠ, ಆರ್.ಎಚ್.ಸವದತ್ತಿ ಮತ್ತಿತರರು ಇದ್ದರು.
ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಜೋಗುಳಬಾವಿ ಮಾರ್ಗದಲ್ಲಿ ವಾಹನದಟ್ಟಣೆ ಅಧಿಕವಾಗಿತ್ತು. ಸವದತ್ತಿ ಪೊಲೀಸ್ ಠಾಣೆಯ ಸಿಬ್ಬಂದಿ ಟ್ರಾಫಿಕ್ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದರು. ಸಾರಿಗೆ ಸಂಸ್ಥೆಯು ಭಕ್ತರಿಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿತ್ತು. ವ್ಯಾಪಾರ ಚಟುವಟಿಕೆಗಳು ಗರಿಗೆದರಿದ್ದವು. ಹಲವು ಜಾನಪದ ಮತ್ತು ಸಾಂಪ್ರದಾಯಿಕ ಕಲೆಗಳು ಕಣ್ಮನ ಸೆಳೆದವು. ಬೆಳಗ್ಗೆಯಿಂದ ಸಂಜೆಯವರೆಗೂ ಗುಡ್ಡದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿತ್ತು.
=========
ಸತತ 10 ವರ್ಷಗಳಿಂದ ಬರದ ಪರಿಸ್ಥಿತಿ ಎದುರಾಗಿದೆ. ಮಳೆ ಬಾರದ್ದರಿಂದ ಬದುಕು ನಡೆಸುವುದೇ ಕಷ್ಟವಾಗಿದೆ. ಈ ವರ್ಷವೂ ಅಂಥದ್ದೇ ಪರಿಸ್ಥಿತಿ ಗೋಚರಿಸುತ್ತಿದೆ. ಯಲ್ಲಮ್ಮ ದೇವಿಯ ಆಶೀವರ್ಾದ ಹಾಗೂ ವರುಣನ ಕೃಪೆಯಿಂದ ಈ ಬಾರಿ ಉತ್ತಮ ಮಳೆಯಾಗಲಿ ಎಂದು ಪ್ರಾಥರ್ಿಸಿದ್ದೇವೆ. ರೈತರ ಬದುಕು ಹಸನಾಗಲಿ ಎಂದು ಯಲ್ಲಮ್ಮನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ.
-ಸಂಜಯ ಸಿಂದಿಗೇರಿ, ಭಕ್ತರು, ಗದಗ.