ರೈತ ಸಂಘದಿಂದ ತುಂಗಭದ್ರೆಗೆ ಬಾಗಿನ


ಲೋಕದರ್ಶನ ವರದಿ

ಬಳ್ಳಾರಿ20: ಕನರ್ಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಸಮಿತಿಯು ತುಂಗಭದ್ರಾ ಜಲಾಶಯಕ್ಕೆ ಇಂದು ಬಾಗೀನ ಹಪರ್ಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜೆ.ಕಾತರ್ಿಕ್ ರವರು ಮಾತನಾಡಿ ತುಂಗಭದ್ರಾ ಜಲಾಶಯ ತುಂಬಿದ್ದು, ಮೂರು ಜಿಲ್ಲೆಗಳ ರೈತರಿಗೆ ಸಂತಸವಾಗಿದೆ. ಜಲಾಶಯ ನಿಮರ್ಾಣವಾದಾಗಿನಿಂದಲೂ ಇದು ಮೂರನೇ ಬಾರಿಗೆ ಬಹುಬೇಗನೆ ತುಂಬಿದ್ದು "ಮೊದಲನೇ ಬಾರಿಗೆ 1982, ಎರಡನೇ ಬಾರಿ 1993 ಹಾಗೂ ಮೂರನೇ ಬಾರಿಯಾಗಿ 2018"ರಲ್ಲಿ ಜುಲೈ ತಿಂಗಳೊಳಗಾಗಿಯೆ ತುಂಬಿದ್ದು ರೈತರಿಗೆ ಹರ್ಷದಾಯಕವಾಗಿರುತ್ತದೆ.  

ಔಟ್ಪ್ಲೋ 70 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಗಡೆ ಬಿಡಲಾಗುತ್ತಿದ್ದು,  ಈ ನೀರು ನದಿಯ ಮೂಲಕ ಸಮುದ್ರದ ಪಾಲಾಗುವುದರಿಂದ ಈ ನೀರನ್ನು ಸದ್ಬಳಿಕೆ ಮಾಡುವಂತಹ ಕೆಲಸಕ್ಕೆ ಈ ಮೂರು ಜಿಲ್ಲೆಗಳ ಶಾಸಕರು ಆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರತಕ್ಕಂತಹ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಮುಂದಾಗಬೇಕು  ಆಗ ಆ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಮತ್ತು ಪ್ರಾಣಿ ಪಕ್ಷಿಗಳಿಗೂ, ಧನ ಕರುಗಳಿಗೂ ಕುಡಿಯಲು ನೀರು ಸಿಗುತ್ತವೆ.  ಈಗಾಗಲೇ ತುಂಗಭದ್ರ ಜಲಾಶಯದಲ್ಲಿ ತುಂಬಿರುವ 30 ಟಿ.ಎಂ.ಸಿ. ಹೂಳನ್ನು ತೆಗೆಯುವುದರಲ್ಲಿ ಸಕರ್ಾರವೂ ಗಮನಹರಿಸಿ ಮುಂದಿನ ಬಜೆಟ್ನಲ್ಲಾದರೂ ಹಣ ಮೀಸಲಿಡಬೇಕು. 

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರೈತಮುಖಂಡರುಗಳಾದ ಪಿ.ನಾರಾಯಣ ರೆಡ್ಡಿ, ಜಿಲ್ಲಾ ಮುಖ್ಯ ಕಾರ್ಯದಶರ್ಿ ಬಿ.ವಿ.ಗೌಡ, ಜಿಲ್ಲಾ ಕಾರ್ಯದಶರ್ಿ ಎಸ್ ರುದ್ರಪ್ಪ ತಾಲೂಕು ಪ್ರಧಾನ ಕಾರ್ಯದಶರ್ಿ ಎಲ್.ಎಸ್. ರುದ್ರಪ್ಪ, ತಾಲೂಕು ಕಾರ್ಯದಶರ್ಿ ಚಿನ್ನದೊರೈ, ಅಧ್ಯಕ್ಷರು ಹೊಸಪೇಟೆ ನಗರ ಘಟಕ ರೇವಣಸಿದ್ದಪ್ಪ, ಕಾಯರ್ಾಧ್ಯಕ್ಷರು, ಹೊಸಪೇಟೆ ನಗರ ಘಟಕ ಹೇಮರೆಡ್ಡಿ, ಗ್ರಾಮ ಘಟಕ ಅಧ್ಯಕ್ಷರು, ಧರ್ಮಸಾಗರ ಗಾಳಿ ಶಿವಪ್ಪ, ಬಾಬಣ್ಣ, ನಾಗೇನಹಳ್ಳಿ ಚಂದ್ರಶೇಖರ್, ಇನ್ನೂ ಹಲವಾರು ರೈತರ ಮುಖಂಡರು ಹಾಗೂ ಆಂಧ್ರ ಬೋಡರ್್ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.