ಅಥಣಿ 22: ಯಾವುದೆ ವ್ಯಕ್ತಿ ಎಂತಹ ಉನ್ನತ ಸ್ಥಾನ ಮಾನಕ್ಕೆ ಹೋದರೂ ಬಾಲ್ಯದ ಸಹೃದಯಿ ಗೆಳೆಯರನ್ನು ಮರೆಯಬಾರದು. ಪ್ರತಿಯೊಬ್ಬರ ಜೀವನದಲ್ಲಿ ತುಂಬಾ ಅಮೂಲ್ಯವಾದ್ದು ಬೆಲೆಬಾಳುವಂತಹದ್ದು ಗೆಳೆತನ. ಸ್ವಾರ್ಥಕ್ಕಾಗಿ ಗೆಳೆತನ ಮಾಡದೇ ಅದು ನಿಸ್ವಾರ್ಥದಿಂದ ಕೂಡಿರಬೇಕು. ಯುವ ಪ್ರತಿಭೆ ಲಿಂ. ಅನಿಲ ಭೂಷಣ್ಣವರ ನಮ್ಮನ್ನು ದೈಹಿಕವಾಗಿ ಅಗಲಿರಬಹುದು. ಆದರೆ ಮಾನಸಿಕವಾಗಿ ಎಲ್ಲರೊಂದಿಗೆ ಇದ್ದಾರೆ. ಅವರನ್ನು ಹೆತ್ತ ತಂದೆ ತಾಯಿಗಳು ಪುಣ್ಯಶಾಲಿಗಳೆಂದು ರಬಕವಿ-ಬನಹಟ್ಟಿಯ ಆಥರ್ೋಪಿಡಿಕ ವೈದ್ಯ ಡಾ ವಿನೋದ ಮೇತ್ರಿ ಹೇಳಿದರು.
ತಾಲೂಕಿನ ಸತ್ತಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಲಿಂ. ಅನಿಲ ರಾಮಪ್ಪ ಭೂಷಣ್ಣವರ ಸ್ಮರಣಾರ್ಥವಾಗಿ ಅವರ ಗೆಳೆಯರ ಬಳಗದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಾ ನವೋದಯ ಶಾಲೆಯಲ್ಲಿ ಕಲಿಯುತ್ತಿದ್ದಾಗ ಅನಿಲ ಅವರಿಗೆ ಅಪಾರವಾದ ಗೆಳೆಯರ ಬಳಗವಿತ್ತು. ಅವರು ಹೊಂದಿದ್ದ ಸಹಾಯ ಸಹಕಾರದ ಗುಣಗಳು ಎಂದಿಗೂ ಮರೆಯಲು ಸಾಧ್ಯವಿಲ್ಲವೆಂದು ಅವರು ಹೇಳಿದರು.
ಮುಖ್ಯಾಪಾಧ್ಯಾಪಕಿ ಎ.ಬಿ. ಪಾಟೀಲ ಮಾತನಾಡಿ ಡಾ. ವಿನೋದ ಮೇತ್ರಿ ಅವರು ಕಳೆದ ಐದು ವರ್ಷಗಳಿಂದ ನಮ್ಮ ಪ್ರೌಢ ಶಾಲೆಗೆ ಆಗಮಿಸಿ ಲಿಂ. ಅನಿಲ ಭೂಷಣ್ಣವರ ಅವರ ಸ್ಮರಣಾರ್ಥ ಎಸ್.ಎಸ್.ಎಲ್. ಸಿ ಯಲ್ಲಿ ಪ್ರಥಮ, ದ್ವಿತಿಯ ಹಾಗೂ ತೃತಿಯ ಸ್ಥಾನ ಪಡೆದ ಬಡ ಪ್ರತಿಭಾನ್ವಿತ ವಿಧ್ಯಾಥರ್ಿಗಳಿಗೆ ನಗದು ಸಹಾಯ ಮಾಡುತ್ತಿರುವ ರಬಕವಿಯ ಡಾ. ವಿನೋದ ಮೇತ್ರಿ ಹಾಗೂ ಅವರ ಗೆಳೆಯರ ಬಳಗಕ್ಕೆ ಏಷ್ಟು ಕೃತಜ್ಞೆತೆ ಹೇಳಿದರೂ ಕಡಿಮೆಯಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯ ಶ್ರೀಶೈಲ ಗಸ್ತಿ, ತಾ.ಪಂ. ಸದಸ್ಯ ಜಡೆಪ್ಪ ಕುಂಬಾರ, ಗ್ರಾ.ಪಂ. ಅಧ್ಯಕ್ಷೆ ಲಲಿತಾ ಬಾಡಗಿ, ಬಸವರಾಜ ಭೂಷಣ್ಣವರ, ಮುಖ್ಯಾಪಾಧ್ಯಾಪಕಿ ಎ.ಬಿ.ಪಾಟೀಲ, ಸತ್ತಿ ವಲಯದ ಸಿ.ಆರ್.ಪಿ ರವೀಂದ್ರ ಹಳ್ಳೊಳ್ಳಿ, ಪುಲಿಕೇಶ ದೊಡಮನಿ, ರಾಮಣ್ಣ ಸಿಂಧೂರ, ಬಿ.ಎಂ. ಸಿಂದಗಿ, ಎಚ್.ಬಿ.ತೆಲಸಂಗ, ಗ್ರಾ.ಪಂ. ಸದಸ್ಯರು ಹಾಗೂ ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಶಿಕ್ಷಕರಾದ ಎಸ್. ಜಿ. ಚನಗೌಡರ ನಿರೂಪಿಸಿ ವಂದಿಸಿದರು. ಗೆಳೆಯನ ನೆನಪುಗಳ ಕುರಿತು ಮಾತನಾಡುವಾಗ ಡಾ. ವಿನೋದ ಮೇತ್ರಿ ಗೆಳೆಯನ ನೆನೆದು ಭಾವುಕರಾಗಿ ಗದ್ಗದಿತರಾದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಇವರ ಸ್ನೇಹದ ಮಹತ್ವ ಅರಿತು ಕಣ್ಣಂಚಲ್ಲಿ ನೀರು ತುಂಬಿದವು.