ಕ್ರೀಡೆಯಿಂದ ವಿದ್ಯಾರ್ಥಿ ಶಿಕ್ಷಕರ ಮಧ್ಯ ಸೌಹಾರ್ಧತೆ

ಧಾರವಾಡ ಡಿ  13 " ಗುರುಗಳು ಗೆಳೆಯರಾದರು ಗೆಳೆಯರು ಗುರುಗಳಾದರು" ಹೀಗಾಗುವ ಸಂದರ್ಭ ಪಠ್ಯೇತರ ಚಟುವಟಿಕೆಗಳಿಂದ ಮಾತ್ರ ಸಾದ್ಯ. ವೀಷೇಶವಾಗಿ ಮೇಲಾಟಗಳ ಕ್ರೀಡೆಗಳ ಸಂದರ್ಭದಲ್ಲಿ ಸಹಪಾಠಿಗಳೊಂದಿಗೆ ಶಿಕ್ಷಕರು ಕೂಡಾ ವಿದ್ಯಾರ್ಥಿ ಗಳಂತೆ ಜೊತೆಗೂಡಿ ಆಟವಾಡುವದರಿಂದ ವಿದ್ಯಾಥರ್ಿ ಶಿಕ್ಷಕರ ಮದ್ಯದಲ್ಲಿ ಸೌಹಾರ್ಧ ಭಾವನೆ ಬೆಳೆಯುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹೀರೆಮಠ ಶ್ಲಾಘೀಸಿದರು.

ಸ್ಥಳೀಯ ಮಾಳಮಡ್ಡಿ ಕೆ. ಇ. ಬೋಡರ್ಿನ ಪ್ರೌಢ ಶಾಲೆಯ ವಾಷರ್ಿಕ ಕ್ರೀಡಾಕೂಟವನ್ನು  ಉದ್ಘಾಟಿಸಿ ಅವರು ಮಾತನಾಡಿದರು.  ಆತ್ಮ ವಿಶ್ವಾಸ ಹಾಗೂ ಬರವಸೆ ವಯಕ್ತಿಕ ಆಟಗಳಲ್ಲಿ ಗೆಲುವು ಸಾಧಿಸಿದರೆ, ಒಗ್ಗಟ್ಟು ಹಾಗೂ ತಂತ್ರಗಾರಿಕೆ ಗುಂಪು ಆಟಗಳಲ್ಲಿ ಗೆಲುವು ತರುವದು ಹೀಗಾಗಿ ಮಕ್ಕಳು ವಯಕ್ತಿಕ ಗೆಲುವಿನೊಂದಿಗೆ ಗುಂಪಿನ ಗೆಲುವಿಗೂ ಶ್ರಮಿಸಬೇಕು. ನಿಮ್ಮ ಶಿಸ್ತು ಮನಸ್ಸಿಗೆ ಆನಂದ ನೀಡುವದರೊಂದಿಗೆ  ನನ್ನ ಶಾಲಾದಿನಗಳನ್ನು ನೆನಪಿಸಿತು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

 ಅಥಿತಿಗಳಾಗಿ ಆಗಮಿಸಿದ ಧಾರವಾಡ ನಗರ ಸಹಾಯಕ  ಪೋಲಿಸ್ ಆಯುಕ್ತರಾದ ಎಮ್. ಎನ್. ರುದ್ರಪ್ಪ ಅವರು ಮಾತನಾಡಿ ಸೋಲು ಗೆಲುವು ಕ್ರೀಡೆಗಳಲ್ಲಿ ಸಾಮಾನ್ಯ. ಗೆದ್ದವರು ಬರೀ ಸಂಭ್ರಮಿಸದೆ ಗೆಲುವನ್ನು ಉಳಿಸಿಕೊಳ್ಳುವಲ್ಲಿ ಸತತ ಪರಿಶ್ರಮ ಪಡಬೇಕು.  ಸೋತವರು ಕುಗ್ಗದೆ ಗೆಲುವಿಗಾಗಿ ವಿಶೇಷ ಪ್ರಯತ್ನ ಮಾಡಬೇಕು ಎಂದು ಕ್ರೀಡಾಪಟುಗಳಿಗೆ ತಿಳಿಸಿದರು.

ಕೆ. ಇ. ಬೋಡರ್ಿನ ಕಾರ್ಯದಶರ್ಿ ಕೆ. ಬಿ. ಕುಲಕಣರ್ಿ ಅದ್ಯಕ್ಷತೆ ವಹಿಸಿ  ಕ್ರೀಡಾಪಟುಗಳಿಗೆ ಶುಭಕೋರಿದರು. ಕಾಲೇಜು ಪ್ರಾಚಾರ್ಯ ವಸಂತ ಮುರುಡೇಶ್ವರ, ಎಮ್. ಎಮ್. ಚಿಕ್ಕಮಠ, ಆನಂದ ಕುಲಕಣರ್ಿ, ದೈಹಿಕ ಶಿಕ್ಷಣ  ಶಿಕ್ಷಕರಾದ ಜಿ. ಎನ್. ಸೋಪಿನ, ಶರಣಪ್ಪ. ಗುತ್ತೂರ ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ನಿಣರ್ಾಯಕರಾಗಿ ಉಪಸ್ಥಿತರಿದ್ದರು.

ಉಪಪ್ರಾಂಶುಪಾಲ ಎನ್. ಎಸ್. ಗೋವಿಂದರಡ್ಡಿ ಸ್ವಾಗತಿಸಿದರು. ಎನ್. ಎನ್. ಸವಣೂರ ಅಥಿತಿಗಳನ್ನು ಪರಿಚಯಿಸಿದರು. ಕಲ್ಪಿತಾ ಮತ್ತು ಅಂಕಿತಾ  ನಿರೂಪಿಸಿದರು. ಕ್ರೀಡಾಮಂತ್ರಿ ಅವಿನಾಶ ಪ್ರತಿಜ್ಞಾವಿಧಿ ಬೋಧಿಸಿದರು. ಶಾಲಾಪ್ರಧಾನಿ ಜೈಭವಾನಿ ವಂದಿಸಿದರು.       

ಶಾಲೆಯ ವಾಷರ್ಿಕ ಕ್ರೀಡಾಕೂಟದ ಉದ್ಘಾಟನೆ ಪೂರ್ವ ನಡೆದ ಅಂತರ್ ನಿಲಯಗಳ ಪಥಸಂಚಲನ ಅತ್ಯಂತ ಆಕರ್ಷಕವಾಗಿತ್ತು ಮಕ್ಕಳು ಉತ್ಸಾಹ ಹಾಗೂ ಶಿಸ್ತಿನಿಂದ ಪಾಲ್ಗೊಂಡಿದ್ದರು.