ಭ.ಮಹಾವೀರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ನೇಹ ಸಮ್ಮೇಳನ

ಲೋಕದರ್ಶನ ವರದಿ

ಬೆಳಗಾವಿ.ಫೆ.26: ಬೆಳಗಾವಿ ತಾಲೂಕಿನ ಭೂತರಾಮನಟ್ಟಿ ಗ್ರಾಮದಲ್ಲಿರುವ ಜೈನ ಯುವಕ ಮಂಡಳ ವತಿಯಿಂದ ನಡೆಸಲಾಗುವ ಭಗವಾನ ಮಹಾವೀರ ಆಂಗ್ಲ ಮಾಧ್ಯಮ ಶಾಲೆಯ ವಾಷರ್ಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಇತ್ತಿಚಿಗೆ 

ಜರುಗಿತು. 

ಸವರ್ೋಕಂಟ್ರೋಲ ಸಂಸ್ಥೆಯ ವ್ಯವಸ್ಥಾಪಕ ನಿದರ್ೇಶಕ ದೀಪಕ ಧಡೂತಿ ಇವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾಥರ್ಿಗಳು ಉನ್ನತ ಶೀಕ್ಷಣ ಪಡೆಯುವಲ್ಲಿ ಗಮನ ಹರಿಸಬೇಕು. ಭೂತರಾಮನಟ್ಟಿ ಗ್ರಾಮದಲ್ಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾರಂಭಿಸಿ ಈ ಭಾಗದ ಗ್ರಾಮೀಣ ವಿದ್ಯಾಥರ್ಿಗಳಿಗೆ ಉನ್ನತ ಶಿಕ್ಷಣ ನೀಡುತ್ತಿರುವ ಜೈನ ಯುವಕ ಮಂಡಳ ಕಾರ್ಯ ಶ್ಲಾಘನೀಯವಾಗಿದೆ ಎಂದರು. 

ಸಮಾರಂಭದಲ್ಲಿ  ಅತ್ಯುತ್ತಮ ವಿದ್ಯಾಥರ್ಿಗಳು ಹಾಗೂ ಕಳೆದ ಸಾಲಿನಲ್ಲಿ 10 ನೇ ತರಗತಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾಥರ್ಿಗಳಿಗೆ ರೂ.5000 ,ರೂ.3000 ಮತ್ತು ರೂ. 2000 ನಗದು ಬಹುಮಾನ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜೈನ ಯುವಕ ಮಂಡಳದ ಪದಾಧಿಕಾರಿಗಳಾದ ರಾಮ ಕಸ್ತೂರಿ, ರಮೇಶ ಚವಟೆ, ಸುಧರ್ಮ ಮೂಡಲಗಿ, ಶರದ ಬಾಳಿಕಾಯಿ ಮೊದಲಾದವರು ಉಪಸ್ಥಿತರಿದ್ದರು. ಶಾಲೆಯ ಪ್ರಾಚಾರ್ಯ ನಿಶಾ ರಾಜೇಂದ್ರನ ಅತಿಥಿಗಳನ್ನು ಸ್ವಾಗತಿಸಿದರು.