ದಿ. 9ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ

Free health checkup camp on 9th

ಜಮಖಂಡಿ 07: ನಗರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಜನವರಿ 9 ರಂದು ಸರಕಾರಿ ಆಸ್ಪತ್ರೆ ಹತ್ತಿರ ನ್ಯಾಮಗೌಡ ಪಾಲಿಕ್ಲಿನಿಕ್ ನಲ್ಲಿ ನಡೆಯಲ್ಲಿದೆ ಎಂದು ಡಾ. ಶಿವಲೀಲಾ ನ್ಯಾಮಗೌಡ ತಿಳಿಸಿದರು. 

ನಗರದ ಸರಕಾರಿ ಆಸ್ಪತ್ರೆ ಹತ್ತಿರ ನ್ಯಾಮಗೌಡ ಪಾಲಿಕ್ಲಿನಿಕ್ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಮಧುಮೇಹ.ಹೃದಯರೋಗ.ರಕ್ತದೊತ್ತಡ ಡಾ.ಸಂಗಮೇಶ ನ್ಯಾಮಗೌಡ. ದಂತ ವೈದ್ಯರಾದ ಡಾ.ಶಿವಲೀಲಾ ನ್ಯಾಮಗೌಡ. ಶಸ್ತ್ರ ಚಿಕಿತ್ಸಕರಾದ ಡಾ.ಪವನ ಬಿಳ್ಳೂರ. ಶ್ವಾಸಕೋಶದ ಡಾ.ಶ್ರೀಶೈಲ ಅಂಜುಟಗಿ. ಮನೋರೋಗ ಮತ್ತು ದುಶ್ಚಟ ತಜ್ಞರಾದ ಡಾ. ವಿಶ್ವನಾಥ ಆಲಮೇಲ.ಅವರು ಸೇರಿದಂತೆ ನುರಿತ ವೈದ್ಯರು ಉಚಿತ ಶಿಬಿರಕ್ಕೆ ಆಗಮಿಸಲಿದ್ದಾರೆ. ಹಾಗೂ ಬಿ.ಎಲ್‌.ಡಿ.ಇ ನರ್ಸಿಂಗ್ ಕಾಲೇಜ ವಿದ್ಯಾರ್ಥಿವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಓಷಧ. ಮಾತ್ರೆಗಳನ್ನು ಸಹ ನೀಡಲಾಗುತ್ತದೆ ಎಂದರು. 

ಇದೇ ಸಂದರ್ಭದಲ್ಲಿ ಬಿ.ಎಲ್‌.ಡಿ.ಇ ನರ್ಸಿಂಗ್ ಕಾಲೇಜ ಪ್ರಾಚಾರ್ಯರ ಡಾ.ವೀರಭದ್ರ​‍್ಪ ಮೆಟಗುಡ್ಡ ಮಾತನಾಡಿದರು. ಅಯೂಬ ಧನ್ನೂರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದರು.