ಮಹಿಳೆಯರಿಗೆ ಉಚಿತ ಬ್ಯೂಟಿ ಪಾರ್ಲರ್ ತರಬೇತಿ ಜೊತೆಗೆ ಟೂಲ್ ಕಿಟ್ ಹಾಗೂ ಪ್ರಮಾಣ ಪತ್ರ ವಿತರಣೆ

Free beauty parlor training for women along with tool kit and certificate distribution


ಮಹಿಳೆಯರಿಗೆ ಉಚಿತ  ಬ್ಯೂಟಿ ಪಾರ್ಲರ್ ತರಬೇತಿ ಜೊತೆಗೆ ಟೂಲ್ ಕಿಟ್ ಹಾಗೂ ಪ್ರಮಾಣ ಪತ್ರ ವಿತರಣೆ 

ಬಳ್ಳಾರಿ 15:  ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ (ಅಃ ಖಖಇಖಿಋ) ಆವರಣದಲ್ಲಿ 30 ದಿನಗಳ ಉಚಿತ ಊಟ ಮತ್ತು ವಸತಿಯೊಂದಿಗೆ ಬ್ಯೂಟಿ ಪಾರ್ಲರ್ ತರಬೇತಿ ಹಮ್ಮಿಕೊಂಡಿದೆ. 

     ಈ ತರಬೇತಿ ಕಾರ್ಯಕ್ರಮದಲಿ ರಾಹುಲ್ ಶರಣಪ್ಪ ಸಂಕನೂರ, ಮಾನ್ಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ ಬಳ್ಳಾರಿ ಇವರು ಈ ಕಾರ್ಯಕ್ರವನ್ನು ಉದ್ದೇಶಿಸಿ ಮಹಿಳೆಯರು ಈಗಿನ ಕಾಲದಲ್ಲಿ ಮಹಿಳೆಯರು ಸೌಂಧರ್ಯದ ಬಗ್ಗೆ ತುಂಬಾ ಕಾಳಜಿವಹಿಸುವದರಿಂದ ಬ್ಯೂಟಿ ಪಾರ್ಲರ್‌ಗಳಿಗೆ, ಬ್ಯೂಟಿಷಿಯನ್‌ಗಳಿಗೆ ತುಂಬಾ ಬೇಡಿಕೆಯಿದೆ. ಬೇಡಿಕೆಗೆ ಅನುಗುಣವಾಗಿ ಕಾಲಕ್ಕೆ ತಕ್ಕಂತೆ ಹೊಸ ವಿನ್ಯಾಸಕ್ಕೆ ನೈಪುಣತೆಯನ್ನು ಹೊಂದಿ ಉದ್ಯಮವನ್ನು ಪ್ರಾರಂಭಮಾಡಿದರೆ ಮಹಿಳೆಯರು ಸ್ವಾವಲಂಬಿಗಳಾಗಿ ಸ್ವ-ಉದ್ಯೋಮಗಳನ್ನು ಪ್ರಾರಂಭಿಸಿ ಯಶಸ್ವಿ ಮಹಿಳಾ ಉದ್ಯಮಿಯಾಗಬಹುದು ಎಂದು ಮಾರ್ಗದರ್ಶನ ಮಾಡಿದರು. ನಂತರ 34 ಜನ ಶಿಭಿರಾರ್ಥಿಗಳಿಗೆ ಬ್ಯೂಟಿಪಾರ್ಲರ್ ಟೂಲ್ ಕಿಟ್ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.  

      ಈ ಕಾರ್ಯಕ್ರಮದಲ್ಲಿ ಗೀರಿಜಾ ಶಂಕರ, ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತ ಬಳ್ಳಾರಿ. ವಿನೋದ ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ ಬಳ್ಳಾರಿ.  ಗೀರೀಶ ವಿ ಕುಲಕರ್ಣಿ, ಲೀಡ್ ಡಿಸ್ರ್ಟೀಕ್ ಮ್ಯಾನೇಜರ್, ಕೆನರಾ ಬ್ಯಾಂಕ್ ಬಳ್ಳಾರಿ ರಾಜೆಸಾಬ್ ಎಚ್ ಎರಿಮನಿ ನಿರ್ದೇಶಕರು. ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಬಳ್ಳಾರಿ.  ಬಸವರಾಜ ಹಿರೇಮಠ, ಸಹಾಯಕ ನಿರ್ದೇಶಕರು, ಜಿಲ್ಲಾ ಪಂಚಾಯತ ಬಳ್ಳಾರಿ. ಉಪಸ್ಥಿತರಿದ್ದರು. 

ರಾಜೇಂದ್ರ ಓಖಐಒ ಜಿಲ್ಲಾ ಪಂಚಾಯತ ಬಳ್ಳಾರಿ, ರಘುವರ್ಮಾ, ಓಖಐಒ ಜಿಲ್ಲಾ ಪಂಚಾಯತ ಬಳ್ಳಾರಿ   ಜಡೇಪ್ಪ ಉಪನ್ಯಾಸಕರು, ದಿನೇಶ ಉಪನ್ಯಾಸಕರು, ಸಿದ್ದಲಿಂಗಮ್ಮ, ಸಂತೋಷ ಕುಮಾರ್, ಕಿರಣ ಕುಮಾರ ಭಾಗವಹಿಸಿದ್ದರು.