ಕತ್ತೆಬೆನ್ನೂರು : ಮೆಕ್ಕೆಜೋಳ ರಾಶಿ ಬೆಂಕಿಗಾಹುತಿ
Kattebennur: Maize piles catch fire
ಲೋಕದರ್ಶನ ವರದಿ
ಹೂವಿನಹಡಗಲಿ 13: ವಿದ್ಯುತ್ ಕಿಡಿಯ ತಗುಲಿ ಮೆಕ್ಕೆಜೋಳ ರಾಶಿ ಸಂಪೂರ್ಣ ಬೆಂಕಿಯಿಂದ ಸುಟ್ಟು ಕರಕಲಾದ ಘಟನೆ ತಾಲ್ಲೂಕಿನ ಕತ್ತೆಬೆನ್ನೂರು ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.ಸುಮಾರು 9ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆಯ ರಾಶಿಗೆ ಬೆಂಕಿಗಾಹುತಿಯಾಗಿದೆ. ನೀಲಗುಂದ ಗುರುವಣ್ಣ ಅವರಿಗೆ ಸೇರಿದ ಮೆಕ್ಕೆಜೋಳ ರಾಶಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಮೀಪದ ಖಾಲಿ ಸ್ಥಳದಲ್ಲಿ ರಾಶಿ ಹಾಕಿದ್ದರು. ಗುರುವಾರ ಮಧ್ಯಾಹ್ನ ಮೆಕ್ಕೆಜೋಳ ರಾಶಿಯಲ್ಲಿ ಹೊಗೆ ಬರುವುದನ್ನು ಕಂಡು ಸ್ಥಳೀಯರು ರಾಶಿಯ ಬಳಿ ತೆರಳಿ ನೋಡಿದಾಗ ಬೆಂಕಿ ಹತ್ತಿರುವುದು ತಿಳಿದಿದ್ದು ಕೂಡಲೇ ಹತ್ತಿರದಲ್ಲಿದ್ದ ನೀರನ್ನು ತಂದು ಹಾಕಿದರಾದರೂ ರಾಶಿಗೆ ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ, ಆವರಿಸಿಕೊಂಡಿದ್ದರಿಂದ ಸುಮಾರು 200 ಕ್ವಿಂಟಲ್ನಷ್ಟು ಮೆಕ್ಕೆಜೋಳ ಸಂಪೂರ್ಣವಾಗಿ ಸುಟ್ಟು ಕರುಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 