ಮಾರ್ಚ 16 ರಿಂದ 21 ರವರೆಗೆ ಚನ್ನವೃಷಬೇಂದ್ರ ಅಜ್ಜನವರ ಜಾತ್ರೋತ್ಸವ
Channavrishabendra Ajjanavara Jatrotsav from March 16 to 21
ನೇಸರಗಿ 13 : ಇಲ್ಲಿನ ಪ್ರತಿಷ್ಠಿತ ಶ್ರೀಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ಲೀಲಾಮಠ ನೇಸರಗಿ ಇದರ ಜಾತ್ರಾ ಮಹೋತ್ಸವವು ಮಾರ್ಚ 16 ರಿಂದ ಪ್ರಾರಂಭವಾಗಿ ಮಾರ್ಚ 21 ರ ವರೆಗೆ ನೆರವೇರಲಿದ್ದು, ಜಾತ್ರೆಯ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಇಂಚಲ ಸಾಧು ಸಂಸ್ಥಾನ ಮಠದ ಡಾ. ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ವಹಿಸುವರು, ಸಾನಿಧ್ಯವನ್ನು ನೇಸರಗಿ- ಮಲ್ಲಾಪೂರ ಗಾಳೇಶ್ವರ ಮಠದ ಚಿದಾನಂದ ಶ್ರೀಗಳು ವಹಿಸುವರು. ಮಾ. 16 ರಂದು ಬೆಳಿಗ್ಗೆ ಮೂರ್ತಿಗೆ ರುದ್ರಾಭಿಷೇಕ, ಪೂಜಾ ಸಮಾರಂಭ, 3 ಘಂಟೆಗೆ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಮುತ್ತೈದೆಯರಿಂದ ಕುಂಭಮೇಳ, ಪಲ್ಲಕ್ಕಿ ಉತ್ಸವ ಜರುಗುವದು, ಗ್ರಾಮದೇವಿಗೆ ಉಡಿ ತುಂಬುವದು ಸಂಜೆ 5 ಘಂಟೆಗೆ ಕಳಸರೋಹಣ ನೆರವೇರಲಿದೆ.
ಮಾರ್ಚ 16 ರಿಂದ 21 ರವರೆಗೆ ಪ್ರತಿದಿನ ನಾಡಿನ ಪೂಜ್ಯರಿಂದ ಆದ್ಯಾತ್ಮ ಪ್ರವಚನ, ಮಹಾಪ್ರಸಾದ ನೆರವೇರಲಿದೆ. ದಿ. 20-03-2026 ರಂದು ಸಂಜೆ 4 ಘಂಟೆಗೆ ಮಹಾರಥೋತ್ಸವ ನಡೆಯಲಿದೆ. ಮಾ. 21 ರಂದು ಕಳಸ ಇಳಿಸುವದು, ಲಕ್ಷ ದೀಪೋತ್ಸವ, ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರಿಂದ ನೂತನ ಕಟ್ಟಡ ಉದ್ಘಾಟನೆ, ಮಹಾಪ್ರಸಾದ ಜರುಗುವದು. ಪ್ರತಿದಿನ ಗ್ರಾಮದ ಭಜನಾ ಮಂಡಳಗಳಿಂದ ಭಜನೆ ಜರುಗುವದು.ಈ ಜಾತ್ರಾ ಮಹೋತ್ಸವಕ್ಕೆ ಆದ್ಯಾತ್ಮ ಪ್ರವಚನಕ್ಕೆ ಹುಣಶ್ಯಾಳ ಪಿ ಜಿ ಕೈವಲ್ಯಾಶ್ರಮದ ನಿಜಗುಣ ಶ್ರೀಗಳು, ಅವರೊಳ್ಳಿಯ ಚನ್ನಬಸವ ದೇವರು, ದತ್ತವಾಡದ ಹೃಷಕೇಶಾನಂದ ಮಹಾರಾಜರು,ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಶ್ರೀಗಳು, ಯರಗೋಪ್ಪದ ಶಿವಪ್ಪಜ್ಜನವರು, ಸವಟಗಿಯ ಲಿಂಗಯ್ಯ ಸ್ವಾಮಿಗಳು, ಮದನಬಾವಿಯ ಮಾತೋಶ್ರೀ ಶಿವದೇವಿ ತಾಯಿ,ಹಾರುಗೋಪ್ಪದ ಮಾತೋಶ್ರೀ ಶಿವಯೋಗಿಣಿ ತಾಯಿ ಅವರುಗಳು ಭಾಗವಹಿಸಲಿದ್ದಾರೆ.
ಟ್ರ್ಯಕ್ಟರ ಮಾಲೀಕರ ಸಂಘ ನೇಸರಗಿ ಇವರ ಆಶ್ರಯದಲ್ಲಿ ಸೋಮವಾರ ದಿ.16-3-2026 ರಂದು ಮದ್ಯಾಹ್ನ 12-30 ಕ್ಕೆ ಟ್ರ್ಯಕ್ಟರ ರಿವರ್ಸ್ ಸ್ಪರ್ಧೆ ಏರಿ್ಡಸಲಾಗಿದೆ. ಮಂಗಳವಾರ ದಿ. 17 ಹಾಗೂ ಬುಧವಾರ ದಿ. 18 ರಂದು ಖಾಲಿ ಗಾಡಾ ಚಕ್ಕಡಿ ಓಡಿಸುವ ಶಾರ್ಯತ್ತು ಏರಿ್ಡಸಲಾಗಿದೆ. ಮೊದಲನೇ ಬಹುಮಾನ ರೂ. 25,000/- ಎರಡನೇ ಬಹುಮಾನ ರೂ. 20,000/-, ಮೂರನೇ ಬಹುಮಾನ ರೂ. 18,000/- ಹೀಗೆ 12 ಜೋಡಿ ಎತ್ತುಗಳಿಗೆ ಬಹುಮಾನ ನೀಡಲಾಗುವದು ಎಂದು ಶ್ರೀ ಚನ್ನವೃಷಬೇಂದ್ರ ಅಜ್ಜನವರ ಜಾತ್ರಾ ಕಮಿಟಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಟ್ರ್ಯಕ್ಟರ್ ರಿವರ್ಸ್ ಸ್ಪರ್ಧೆಗೆ ಮೊ. ನಂ 9740754195,8431401312 ಹಾಗೂ ಖಾಲಿ ಗಾಡಾ ಚಕ್ಕಡಿ ಸ್ಪರ್ಧೆಗೆ ಮೊ ನಂ.6363713660, 9148323584 ಈ ನಂಬರಗೆ ಸಂಪರ್ಕಿಸಲು ಕೋರಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 