ಲೋಕದರ್ಶನ ವರದಿ
ಗದಗ 02: ಇತ್ತೀಚಿಗೆ ನಗರದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೇನಾ ಭತರ್ಿಗೆ ವಿವಿಧ ಜಿಲ್ಲೆಗಳಿಂದ ಪ್ರತಿದಿನ ಸಾವಿರಾರು ಯುವಕರು ಅರ್ಹತೆ ಪರೀಕ್ಷೆಗಾಗಿ ನಗರಕ್ಕೆ ಬರುತ್ತಿದ್ದು ಅವರಿಗೆ ನಗರದ ಶಿರಡಿ ಸಾಯಿಬಾಬಾ ಸತ್ಸಂಗದ ವತಿಯಿಂದ ಸಂಕೇತ ಅಪಾರ್ಟಮೆಂಟ್ ಹತ್ತಿರ ಕಳೆದ ಮೂರು ದಿನಗಳಿಂದ ಪ್ರತಿದಿನ ರಾತ್ರಿ 745 ಗಂಟೆಗೆ ಉಚಿತ ಪ್ರಸಾದ ವಿತರಿಸಲಾಗುತ್ತಿದೆ. ಪ್ರತಿದಿನ ಸುಮಾರು 1000 ದಿಂದ 1500 ಯುವಕರಿಗೆ ಪ್ರಸಾದ ವಿತರಿಸಲಾಗುತ್ತಿದೆ.
ಈ ಪ್ರಸಾದ ಸೇವೆಯಲ್ಲಿ ಸತ್ಸಂಗದ ಅಧ್ಯಕ್ಷ ಸಿದ್ದಲಿಂಗಪ್ಪ ಪಟ್ಟಣಶೆಟ್ಟಿ, ಉಪಾಧ್ಯಕ್ಷ ವಿ.ಆರ್. ಕುಂಬಾರ, ಕಾರ್ಯದಶರ್ಿ ಶಿವಯ್ಯ ಹಿರೇಮಠ, ಸಿದ್ದಣ್ಣ ಗೌರಿಪುರ, ನಾಗರಾಜ ಗಂಗಾವತಿ, ಸದಾಶಿವಪ್ಪ ವಾಲಿ, ಸತ್ಸಂಗ ಸದಸ್ಯರಾದ ಆರ್. ಆರ್. ಕಾಶಪ್ಪನವರ, ಉಮೇಶ್ ನಾಲವಾಡ, ಡಾ. ಎಸ್. ಬಿ. ಶೆಟ್ಟರ, ಕೆ. ನಾಗೇಶರಾವ, ರವಿಶಂಕರ್ ಚಿಂಚಲಿ, ರವಿಪ್ರಕಾಶ ರಡ್ಡಿ, ಕಾತರ್ಿಕ ಹಿರೇಮಠ, ರವಿ ಘೋಡಕೆ, ನಿರಂಜನ ಹಿರೇಮಠ, ಶಶಿ ಡಿಗ್ಗಾವಿ, ಸಚಿನ,ಸತೀಶ್, ಆದರ್ಶ ಸೇರಿದಂತೆ ಮುಂತಾದವರು ಸೇವೆ ಸಲ್ಲಿಸುತ್ತಿದ್ದಾರೆ.