ಲೋಕದರ್ಶನ ವರದಿ
ಗೋಕರ್ಣ,10: ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಸ್ಪಧರ್ಾತ್ಮಕ ಅಲೋಜನೆಗಳ ಮೂಲಕವೇ ಮುಂದುವರೆದು ಸಮಾಜದಲ್ಲಿ ಗಣ್ಯವ್ಯಕ್ತಿಯಾಗುವ ರೀತಿಯಲ್ಲಿ ಮುಂದುವರಿಯ ಬೇಕಾದುದು ವಿದ್ಯಾಥರ್ಿಗಳ ಮುಖ್ಯ ಕರ್ತವ್ಯವಾಗಿದೆ ಎಂದು ಕೆನರಾ ಶಿಕ್ಷಣ ಪ್ರಸಾರ ಮಂಡಳಿ ಗೌರವಧ್ಯಕ್ಷ ಜಿ.ಎನ್. ನಾಯಕ ಹೇಳಿದರು ಅವರು ಜಿಲ್ಲಾ ಪಂಚಾಯತ ಉತ್ತರಕನ್ನಡ , ಸಾರ್ವಜನಿಕ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ ಕುಮಟಾ, ಕೆನರಾ ಶಿಕ್ಷಣ ಪ್ರಸಾರ ಮಂಡಳಿ ಇವರ ಸಂಯುಕ್ರ ಆಶ್ರಯದಲ್ಲಿ ಭದ್ರಕಾಳಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ನಡೆದ 8ನೇ ತರಗತಿ ವಿದ್ಯಾಥರ್ಿಗಳಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿನ ವಿದ್ಯಾಥರ್ಿಗಳು ರಾಷ್ಟ್ರದ ಬೆನ್ನೆಲುಬಾಗಿದ್ದಾರೆ ಎಂದ ಅವರು ಉತ್ತಮ ಪ್ರಜೆಯಾಗಿ ರೂಪಗೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಎಸ್. ಜಿ.ಖೈರನ್ ಮಾತನಾಡಿ ವಿದ್ಯಾಥರ್ಿಗಳು ಉತ್ತಮ ಶಿಕ್ಷಣ ಪಡೆಯುವುದರೊಂದಿಗೆ ಮುಂದಿನ ಜೀವನದಲ್ಲಿ ಪಾಲಕರ ಮುಪ್ಪಿನ ಕಾಲದ ಯೋಗಕ್ಷೇಮ ನೋಡುವ ಜವಾಬ್ದಾರಿ ವಹಿಸಿಕೊಳ್ಳುವುದು ಇಂದಿನ ದಿನದಲ್ಲಿ ಬಹುಮಖ್ಯವಾಗಿದೆ ಎಂದರು. ಕೆನರಾ ಶಿಕ್ಷಣ ಪ್ರಸರ ಮಂಡಳಿ ಸದಸ್ಯ ಡಾ. ರಾಮಚಂದ್ರ ಮಲ್ಲನ್ ಮಾತನಾಡಿ ಇಲಾಖೆ ನೀಡಿದ ಉಚಿತ ಸೈಕಲ್ ಪಡೆದು ಶಿಕ್ಷಣದಲ್ಲೂ ಪ್ರಗತಿ ಸಾಧಿಸಿ ಎಂದು ಆಶಿಸಿದರು.ಸಭೆಯಲ್ಲಿ ಉಪನ್ಯಾಸಕರಾದ ರಾಮಮೂತರ್ಿ ನಾಯಕ , ಶಿಕ್ಷಕ ಆರ. ಜಿ.ನಾವಡ ಹಾಗೂ ಸಿಬ್ಬಂದಿ ವರ್ಗ, ಪಾಲಕವರ್ಗದವರು ಉಪಸ್ಥಿತರಿದ್ದರು. ವಿದ್ಯಾಥರ್ಿಗಳ ಸ್ವಾಗತ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಸಿ.ಜಿ.ನಾಯಕ ಸ್ವಾಗತಿಸಿದರು. ಡಿ.ಎಸ್.ಹೆಗಡೆ ವಂದಿಸಿದರು. ವಿನಾಯಕ ಕೆ. ಭಟ್ಟ ಕಾರ್ಯಕ್ರಮ ನಿರೂಪಿಸಿದರು.