ಲೋಕದರ್ಶನ ವರದಿ
ಶಿಗ್ಗಾವಿ17: ಮಾನ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರವರ 60 ನೇ ಜನ್ಮದಿನೋತ್ಸವದ ಅಂಗವಾಗಿ ತಾಲೂಕಿನ ಬಂಕಾಪುರ ಪಟ್ಟಣದ ಹಯಾತಬಾಷಾ ಉದರ್ು ಶಾಲಾ ಮಕ್ಕಳಿಗೆ ಪಟ್ಟಣದ ಜೆ.ಡಿ.ಎಸ್. ಕಾರ್ಯಕರ್ತರು ಸಿಹಿ ಹಂಚಿ ಉಚಿತ ನೋಟಬುಕ್ ಪೆನ್ನುಗಳನ್ನು ವಿತರಿಸಿದರು.
ರಾಜ್ಯ ಜೆ.ಡಿ.ಎಸ್. ಮುಖಂಡ ಜಬಿ ಮತ್ತೂಬಾಯಿ ಮಾತನಾಡಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ದಿನ, ದಲಿತ, ಬಡವರ ಸಂಕಷ್ಟಗಳಿಗೆ ಹತ್ತಿರದಿಂದ ಸ್ಪಂದಿಸಿ ಪರಿಹಾರ ಸೂಚಿಸುವ ನಮ್ಮ ರಾಜ್ಯದ ಏಕೈಕ ಮುಖ್ಯಮಂತ್ರಿಗಳಾಗಿದ್ದಾರೆ. ರೈತರ ಸಂಕಷ್ಟಗಳನ್ನು ಅರಿತು ಲಕ್ಷಾಂತರ ರೈತರ ಸಾಲಮನ್ನಾ ಮಾಡುವಮೂಲಕ ಬ್ಯಾಂಕ ಅಧಿಕಾರಿಗಳು ರೈತರ ಮನೆಗೆ ಸಾಲ ವಸೂಲಾತಿಗೆ ಬರುವ ಬದಲು ಸಾಲದಿಂದ ಋಣಮುಕ್ತ ಪತ್ರವನ್ನು ರೈತರ ಮನೆಗೆ ನೀಡಲು ಬರುವಂತೆ ಮಾಡಿದ ಕೀತರ್ಿ ಮಾನ್ಯ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಜೆ.ಡಿ.ಎಸ್, ಕಾಂಗ್ರೆಸ್ ದೊಸ್ತಿ ಸಕರ್ಾರ ರಚನೆಗೊಂಡು ಕೇವಲ ಆರೇಳು ತಿಂಗಳುಗಳಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದ ಪ್ರತಿಫಲವಾಗಿ ಪಂಚರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹಿನಾಯವಾಗಿ ಸೋಲುಂಡು ದೊಸ್ತಿ ಸಕರ್ಾರದ ಕಾಂಗ್ರೇಸ್ ಪಕ್ಷ ಜಯಬೇರಿ ಬಾರಿಸುವಂತಾಗಿದೆ ಎಂದು ಹೇಳಿದರು.
ಶಾಲಾ ಮುಖ್ಯಶಿಕ್ಷಕಿ ನಾಹಿದಾ, ಗಪುರಸಾಬ ಸಂಸಿ, ಜೆ.ಡಿ.ಎಸ್.ನಗರಘಟಕದ ಅದ್ಯಕ್ಷ ಇಶಾಖಹ್ಮದ ಪಟೇಲ, ಮಹ್ಮದ ಹೊಂಡದಕಟ್ಟಿ, ಇಸ್ಮಾಯಿಲ್ಸಾಬ ಭಾವಿ, ಹಮಿದಸಾಬ ಗದಗ, ಮಹಮ್ಮದಶಫಿ ಹುಬ್ಬಳ್ಳಿ, ಮುನಿರಹ್ಮದ ಪಟೇಲ, ಅಸ್ಫಾಕ ಕರಜಗಿ, ಶಿರಾಜ ಗದಗ, ರಜಾಕಸಾಬ ಯಲವಗಿ, ಮಖಬೂಲಸಾಬ ಕನವಳ್ಳಿ, ಇಸ್ಮಾಯಲ್ಸಾಬ ಪಟೇಲ ಸೇರಿದಂತೆ ಶಾಲಾ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.