ಕಡಬಿ 09: ನಾವು ದಿನ ನಿತ್ಯ ಸೇವಿಸುವ ಆಹಾರ ಮೊದಲಿನ ಹಾಗೆ ಗುಣಮಟ್ಟದ ಆಹಾರವಿಲ್ಲ. ಕಲುಷಿತ ಗಾಳಿ, ಶುದ್ಧ ಕುಡಿಯುವ ನೀರು, ಹಾಗೂ ಉತ್ತಮ ಪರಿಸರ ಮಲಿನಹೊಂದಿ ಮನುಷ್ಯ ನಾನಾ ತರಹದ ಕಾಯಿಲೆಗಳಿಗೆ ತುತ್ತಾಗುತಿದ್ದಾನೆ ಎಂದು ಯರಗಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಡಾ. ಮಹಾಂತೇಶ ಅರಿಬೆಂಚಿ ಹೇಳಿದರು.
ಅವರು ಸಮೀಪದ ಮಾಡಮಗೇರಿ ಗ್ರಾಮದ ಸಿದ್ದಾರೋಡ ಮಠದಲ್ಲಿ ಶನಿವಾರ ದಿ.9ರಂದು ರಾಜರಾಜೇಶ್ವರಿ ಗ್ರಾಮೀಣಾ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಯರಗಟ್ಟಿ ಸಮಾಜ ಸೇವಕ ಬಾಳಪ್ಪ ಬಡಗೇರ ಇವರ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸನಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಡಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಆನಂದ ಪಾಟೀಲ ಮಾತನಾಡಿ ಮನುಷ್ಯನು ತೀರಾ ಹದಗೆಟ್ಟು ಹಲವಾರು ಕಾಯಿಲೆಗಳಿಗೆ ತುತ್ತಾಗುವ ಮುಂಚೆ ರೋಗಗಳಿಗೆ ಸಂಬಂಧಿಸಿದ ವೈದ್ಯರ ಭೆಟ್ಟಿ ನೀಡಿ ಸಲಹೆ ಪಡೆದುಕೊಳ್ಳಬೇಕು ಎಂದರು.
ಉಚಿತ ತಪಾಸನಾ ಆರೋಗ್ಯ ಶಿಬಿರದಲ್ಲಿ ವೈದ್ಯರಾದ ಡಾ. ಕೀತರ್ಿ ಬೀರನಗಡ್ಡಿ, ಡಾ. ವೆಂಕಟೇಶ ಬಡಗನ್ನವರ, ಡಾ. ಕುಟೇಜಾ ದಂಡರಗಿ, ಡಾ. ಮಲ್ಲಿಕಾಜರ್ುನ ಬೀರನಗಡ್ಡಿ, ಯರಗಟ್ಟಿ ಕಡಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ತಪಾಸನಾ ಶಿಬಿರದ ಉದ್ಘಾಟಕರಾಗಿ ಹೂನ್ನಪ್ಪ ಖಂಡ್ರಿ, ಕಾರ್ಯಕ್ರಮದ ಅಧ್ಯಕ್ಷತೆ ಗ್ರಾಪಂ ಅಧ್ಯಕ್ಷೆ ಮಹಾದೇವಿ ಖಂಡ್ರಿ, ರಾಮಚಂದ್ರ ಕೇಮನಕೂಲ, ಗೋಪಾಲ ಬಾಗಿಲದ, ಮಹಾದೇವ ಹೂಲಿ, ಬಾಳಪ್ಪ ಆಯಟ್ಟಿ, ಈರಪ್ಪ ಗಂಗಪ್ಪನವರ, ಕಲ್ಲೂಳೆಪ್ಪ ಸಿದ್ದನ್ನವರ, ಮಹಾದೇವ ಬಾಗಿಲದ, ಲಂಕೆಪ್ಪ ಹೂಲಿ ಹಾಗೂ ನೂರಾರು ರೋಗಿಗಳು ಭಾಗಿಯಾಗಿ ಸದುಪಯೋಗ ಪಡೆದುಕೊಂಡರು.