ಉಚಿತ ಕ್ಷೌರ ಸೇವಾ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ31 : ಯಾವುದೇ ಸಮಾಜ ಸೇವೆಯಾಗಲಿ ಅದು ಪ್ರತಿಫಲಾಪೇಕ್ಷೇ ಇಲ್ಲದ ಸೇವೆಯಾದಾಗ ಮಾತ್ರ ಉತ್ತಮ ಸಮಾಜ ಸೇವೆ ಎನಿಸಿಕೊಳ್ಳುತ್ತದೆ ಆ ನಿಟ್ಟಿನಲ್ಲಿ ತಾಲೂಕಾ ಹಡಪದ ಸಮಾಜ ಕಾಯರ್ೋನ್ಮುಖವಾಗಿದೆ ಎಂದು ತಾಲೂಕಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಬಸವರಾಜ ಹಡಪದ ಹೇಳಿದರು.

ತಾಲೂಕಿನ ಬಿಸನಳ್ಳಿಯ ಜಗದ್ಗುರು ವೇಧ, ಆಗಮ, ಸಂಸ್ಕೃತ, ಸಂಗೀತ ಹಾಗೂ ಯೋಗ ಪಾಠ ಶಾಲೆಯ ಸುಮಾರು 80 ಕ್ಕೂ ಹೆಚ್ಚು ವಟುಗಳಿಗೆ ತಾಲೂಕಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ಉಚಿತ ಕ್ಷೌರ ಸೇವಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಾವು ಮಾಡುವ ಸೇವೆ ನಿಶ್ವಾರ್ಥದಿಂದ ಕೂಡಿರಬೇಕು. ಇಂದು ಸಮಾಜ ಸೇವೆಯನ್ನು ಹಲವಾರು ಜನರು ಮಾಡುತ್ತಾರೆ ಅದರಲ್ಲಿ ಪ್ರತಿಫಲಾಪೇಕ್ಷೇ ಇಲ್ಲದೇ ಮಾಡುವ ಸೇವಾ ಮನೋಭಾವದ ಜನ ಬಹಳ ವಿರಳ ಅಂತಹ ಸೇವೆಯನ್ನು ನಮ್ಮ ಸಮಾಜ ಮಾಡಿದೆ ಎಂದು ಭಾವಿಸಿರುವೆ ಎಂದರು.

ಸಮಾಜದ ಉಪಾದ್ಯಕ್ಷ ಮುತ್ತುರಾಜ ಕ್ಷೌರದ ಮಾತನಾಡಿ ವೃತ್ತಿಯಲ್ಲಿ ಕಾಯಕ ನಿಷ್ಠೆಯ ಸಮಾಜ ಹಡಪದ ಸಮಾಜವಾಗಿದ್ದು ಈ ಸೇವಾ ಕಾರ್ಯ ನಮಗೆ ತೃಪ್ತಿಯ ಜೊತೆಗೆ ಸಮಾಜ ಸೇವೆ ಮಾಡಲು ಪ್ರೇರೇಪಿಸಿದೆ ಎಂದರು.

ಇದೇ ಸಂದರ್ಭದಲ್ಲಿ ಫೀಠದ ಸುಮಾರು 80 ಕ್ಕೂ ಹೆಚ್ಚು ವಟುಗಳಿಗೆ ಉಚಿತವಾಗಿ ಕ್ಷೌರ ಸೇವೆ ನಡೆಯಿತು.

ಹಡಪದ ಅಪ್ಪಣ್ಣ ಸಮಾಜದ ಹಿರಿಯರಾದ ಶಿವಾನಂದ ಕಟ್ಟಿಮನಿ, ಜಿಲ್ಲಾ ಸಮೀತಿ ಸದಸ್ಯ ಶಿವಕುಮಾರ ಮಡ್ಲಿಕರ, ತಾಲೂಕಾ ಪ್ರಧಾನ ಕಾರ್ಯದಶರ್ಿ ಮಲ್ಲಿಕಾಜರ್ುನ ಹಡಪದ, ಖಜಾಂಚಿ ಶಿವರಾಜ ಕ್ಷೌರದ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.