ಲೋಕದರ್ಶನ ವರದಿ
ರಾಯಬಾಗ 05: ರೈತರು ಉಪಕಸುಬವನ್ನಾಗಿ ಕೋಳಿಗಳನ್ನು ಸಾಕಾಣಿಕೆ ಮಾಡುವುದರಿಂದ ತಮ್ಮ ಉಪಜೀವನಕ್ಕೆ ಅನುಕೂಲವಾಗುತ್ತದೆ. ಬಡಜನರಿಗೆ ಅನುಕೂಲವಾಗಲು ಉಚಿತವಾಗಿ ಕೋಳಿಗಳನ್ನು ನೀಡಲಾಗುತ್ತಿದೆ ಎಂದು ಜಿ.ಪಂ.ಸದಸ್ಯೆ ಜಯಶ್ರೀ ಮೊಹಿತೆ ಹೇಳಿದರು.
ದಿ.04ರಂದು ತಾಲೂಕಿನ ಜಲಾಲಪೂರ ಗ್ರಾಮದಲ್ಲಿ ಜಿ.ಪಂ. ಯೋಜನೆಯಡಿಯಲ್ಲಿ ಬಾವನ ಸೌಂದತ್ತಿ ಜಿ.ಪಂ. ವ್ಯಾಪ್ತಿಯ ಬಾವನಸೌಂದತ್ತಿ, ಯಡ್ರಾಂವ, ದಿಗ್ಗೇವಾಡಿ, ಜಲಾಲಪೂರ, ಭಿರಡಿ, ಬೆಕ್ಕೇರಿ ಗ್ರಾಮದ 75 ಜನ ಫಲಾನುಭವಿಗಳಿಗೆ ಉಚಿತವಾಗಿ 750 ಗಿರಿಜಾ ಕೋಳಿ ಮರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಮಹಾವೀರ ಮೋಹಿತೆ, ತಾ.ಪಂ.ಸದಸ್ಯ ನಾಮದೇವ ಕಾಂಬಳೆ, ಗಣೇಶ ಮೋಹಿತೆ, ಶಾಂತಗೌಡ ಪಾಟೀಲ, ಡಾ.ಪ್ರಮೋದ ತಳವಾರ, ದಿಲೀಪ ಜಮಾದಾರ, ವಿಠ್ಠಲ ಬಂಡಗಾರ, ಎಮ್.ಎನ್.ಸಲಗರೆ, ಗಂಗಾಧರ ಕಾಂಬಳೆ, ಅಜರ್ುನ ಬಂಡಗರ, ಮಹೇರಅಲಿ ಜಮಾದಾರ, ಆನಂದ ಚೌಗುಲಾ, ಸಂಜು ಚೌಗಲಾ, ಮಾರುತಿ ಕಾಂಬಳೆ, ವಿಲಾಸ ಹೆರವಾಡೆ, ಅಣ್ಣಾಸಾಬ ಕೊಣೆ ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.