ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ

ಲೋಕದರ್ಶನ ವರದಿ

ಬೆಳಗಾವಿ 02:  ದಿ.02ರಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಿಣಯೇ ಗ್ರಾಮದಲ್ಲಿ ಪ್ರಧಾನ ಮಂತ್ರಿಗಳ ಉಜ್ವಲ ಯೋಜನೆ ಅಡಿಯಲ್ಲಿ ಕಿಣಯೇ ಗ್ರಾಮದ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಶೇಗಡಿ ಹಾಗೂ ಸಿಲಿಂಡರ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಂಜಯ ಪಾಟೀಲ ಇವರು ಫಲಾನುಭವಿಗಳಿಗೆ ಗ್ಯಾಸ್ ಶೇಗಡಿ ಹಾಗೂ ಸಿಲಿಂಡರ ವಿತರಿಸಿ ಮಾತನಾಡುತ್ತಾ ಬಿಪಿಎಲ್ ಕಾರ್ಡ ಹೊಂದಿದ ಗ್ಯಾಸ್ ಸಂಪರ್ಕ ವಿಲ್ಲದ ಕುಟುಂಬಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶಾದ್ಯಂತ 8 ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದು, ಅದರಲ್ಲಿ ಈಗಾಗಲೇ 6.5 ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. 

ಅಲ್ಲದೆ ಇನ್ನೂ ಈ ಯೋಜನೆಯ ಲಾಭ ಪಡೆಯದವರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು. ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ಬಡವರಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದಾರೆ, ಅದರಲ್ಲಿ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಈ ಯೋಜನೆ ಅತ್ಯಂತ ಅನುಕೂಲಕರವಾಗಿದೆ, ಅಲ್ಲದೆ ಪ್ರಧಾನಿಯವರು ಇಂತಹ ಅನೇಕ ಯೋಜನೆಗಳನ್ನು ಜಾರಿ ಗೊಳಿಸಿದ್ದು ಅವುಗಳ ಬಗ್ಗೆ ಮಾಹಿತಿ ಪಡೆದು ಅವುಗಳ ಸದುಪಯೋಗ ಪಡೆದು ಕೊಳ್ಳಬೇಕೆಂದು ಕರೇನೀಡಿದರು. ಪ್ರಸಕ್ತ ಬಜೆಟ್ ನಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿ ಗೊಳಿಸಿದ್ದಾರೆ. ಇಂತಹ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನ ಮಂತ್ರಿಯವರನ್ನು ಮುಂಬರವು ಚುನಾವಣೆಯಲ್ಲಿ ಗೆಲ್ಲಿಸಿ ಇನ್ನೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ಚುನಾಯಿಸಲು ಎಲ್ಲರೂ ಕಾರ್ಯಪ್ರವತ್ತರಾಗಬೇಕೆಂದು ಕರೇನೀಡಿದರು.

ಮೋಹನ ಅಂಗಡಿ, ಕಲ್ಲಪ್ಪಾ ಸಂಪಗಾಂವಿ, ಅಪ್ಪಾಸಾಹೇಬ ಕೀರ್ತನೆ, ವಿನಯ ಕದಮ, ಹೇಮಂತ ಪಾಟೀಲ, ಮಾಯಾ ಗುರವ, ಪ್ರಭಾಕರ ಢುಕರೆ, ನಾಮದೇವ ಢುಕರೆ, ವಿಠ್ಠಲ ನಾನಾ ಪಾಟೀಲ, ರಾಮಲಿಂಗ ಗುರವ, ಸಂಭಾಜಿ ಗುರವ, ಪ್ರಲ್ಹಾದ ಪಾಟೀಲ, ಅಶೋಕ ಲೋಹಾರ, ಮಾರುತಿ ಡುಕರೆ, ರಮೇಶ ಲೋಹಾರ, ನೇಮಾಣಿ ಢುಕರೆ, ಅಜೀತ ಢುಕರೆ, ಹಣುಮಂತ ಕಾಮಕರ, ಮಹಿಳಾ ಮಂಡಳದ ಸದಸ್ಯರು, ಫಲಾನುಭವಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.