ಹುಕ್ಕೇರಿ ವಿರಕ್ತ ಮಠದಲ್ಲಿ ಉಚಿತ ನೇತ್ರ ತಪಾಸಣೆ

ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಮಿರಜದ ನೇತ್ರ ಆಸ್ಪತ್ರೆಯ ನೇತ್ರ ತಜ್ಞೆ ಡಾ. ಆರತಿ ವಮರ್ಾ ರೋಗಿಗಳ ತಪಾಸಣೆ ನಡೆಸಿದರು

ಹುಕ್ಕೇರಿ 02: ಮನುಷ್ಯನ ಅಂಗಾಂಗಳಲ್ಲಿ ಕಣ್ಣು ಪ್ರಮುಖವಾದದ್ದು. ನೇತ್ರ ತಜ್ಞರಿಂದ ಮೇಲಿಂದ ಮೇಲೆ ಕಣ್ಣು ತಪಾಸಣೆ ಮಾಡಿಕೊಂಡು ಕಣ್ಣುಗಳ ರಕ್ಷಣೆ ಮಾಡಿಕೊಳ್ಳಬೇಕು. ಕಣ್ಣಿಲ್ಲದಿದ್ದರೆ ಜಗತ್ತನ್ನು ನೋಡುವದು ಅಸಾಧ್ಯವೆಂದು ಹುಕ್ಕೇರಿ ವಿರಕ್ತಮಠ ಹಾಗೂ ಹಾವೇರಿಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಅಭಿಪ್ರಾಯ ಪಟ್ಟರು.

            ಅವರು ರವಿವಾರದಂದು ಮಠದಲ್ಲಿ ಲಾಯನ್ಸ ಕ್ಟಾಪ್ರೆಸಿವ್ ಆಯ್ ಕೇರ ಫೌಂಡೇಶನ ಸಂಚಾಲಿತ ಮಿರಜದ ನೇತ್ರ ಆಸ್ಪತ್ರೆ ವತಿಯಿಂದ ಆಯೋಜಿಸಲಾದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರದ ಸಾನಿಧ್ಯ ವಹಿಸಿ ಮಾತನಾಡಿದರು.. ಸ್ವಾಮಿಗಳು ಪೂಜೆ ಪುನಸ್ಕಾರಗಳಿಗೆ ಮಾತ್ರ ಸೀಮಿತವಾದರೆ ಸಾಲದು. ಸಮಾಜದ ಅಂಕು ಡೊಂಕುಗಳನ್ನು ತಿದ್ದುವದರ ಜೊತೆಗೆ ಸಮಾಜಕ್ಕೆ ದಾರಿ ದೀಪಗಳಾಗಬೇಕೆಂದರು. ಬಡ ಜನರಿಗೆ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಚಿಕಿತ್ಸೆ ಪಡೆಯುವದು ದುಸ್ತರ ಈ ನಿಟ್ಟಿನಲ್ಲಿ ಶ್ರೀಮಠದಲ್ಲಿ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ಪುರಾಣ, ಪ್ರವಚನ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಯೋಗ ತರಬೇತಿ, ಕಣ್ಣು ತಪಾಸಣೆ ಶಿಬಿರಗಳನ್ನು ಆಯೋಜಿಸುತ್ತಿರುವದಾಗಿ ತಿಳಿಸಿದರು.

            ಮಿರಜದ ನೇತ್ರ ಆಸ್ಪತ್ರೆಯ ನೇತ್ರ ತಜ್ಞೆ ಡಾ. ಆರತಿ ವಮರ್ಾ ಸುಮಾರು 100 ಕ್ಕೂ ಮಿಕ್ಕಿ ನೇತ್ರ ರೋಗಿಗಳ ತಪಾಸಣೆ ಮಾಡಿ 10 ಮೋತಿಬಿಂದು ಬಂದ ಜನರನ್ನು ಶಸ್ತ್ರ ಕ್ರಿಯೆಗೆ ಆಯ್ಕೆ ಮಾಡಿದರು. ಅವರನ್ನು ಇಂದು ಮಿರಜ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಾಳೆ ಶಸ್ತ್ರ ಚಿಕಿತ್ಸೆ ಮಾಡಲಾಗುವದಾಗಿ ಡಾ. ಆರತಿ ವಮರ್ಾ ತಿಳಿಸಿದರು. ರೋಗಿಗಳಿಗೆ ಹೋಗಿ ಬರುವ ಹಾಗೂ ಚಹಾ, ಉಪಹಾರದ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗಿದೆ. ಆಸ್ಪತ್ರೆಯಿಂದ ಇಲ್ಲಿಯ ವರೆಗೆ 2 ಲಕ್ಷಕ್ಕೂ ಮಿಕ್ಕಿ ನೇತ್ರ ಶಸ್ತ್ರಕ್ರಿಯೆ ಮಾಡಲಾಗಿದೆಯೆಂದರು.

           ಕಾರ್ಯಕ್ಷೇತ್ರ ಅಧಿಕಾರಿ ಕೃಷ್ಣಾಬಾಯಿ ಸೂರ್ಯವಂಶಿ ಪ್ರಾಸ್ತಾವಿಕವಾಗಿ ಮಾತನಾಡಿ ಇಲ್ಲಿಯ ವರೆಗೆ ಯಡೂರ, ಚಂದೂರ, ಸಂಕೇಶ್ವರ, ಹಿಟ್ನಿ, ಮಣಗುತ್ತಿ, ಮುತ್ನಾಳ, ಬಾಡ, ನಿಪ್ಪಾಣಿ, ಮಾಂಜರಿ, ಸುತಗಟ್ಟಿ, ಶಿರಗುಪ್ಪಿ ಒಳಗೊಂಡಂತೆ ವಿವಿದೆಡೆ ಶಿಬಿರಗಳನ್ನು ಆಯೋಜಿಸಿ ಸಾವಿರಾರು ಜನ ಈ ಶಿಬಿರದ ಸದುಪಯೋಗ ಪಡೆದುಕೊಂಡಿರುವದಾಗಿ ತಿಳಿಸಿದರು. ಬಿ.ಎನ್.ಕೊಳೇಕರ ನಿರೂಪಿಸಿದರು. ಕೆ.ಎ.ಬಡಿಗೇರ ಸ್ವಾಗತಿಸಿದರೆ ಸರೋಜನಿ ಹುಂಡೇಕರ ವಂದಿಸಿದರು. ಥೆರಾಪಿ ತಜ್ಞ ಬಸವರಾಜ ಮ್ಯಾಗೇಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.