ಲೋಕದರ್ಶನ ವರದಿ
ತಾಳಿಕೋಟೆ 09: ಕನರ್ಾಟಕ ವಿಶ್ವವಿದ್ಯಾಲಯದ ಎಂ.ಎ.ಅರ್ಥಶಾಸ್ತ್ರ ವಿಷಯದಲ್ಲಿ ಕೊಡಮಾಡುವ ನಾಲ್ಕು ದಿನದ ಪದಕಗಳನ್ನು ಪಟ್ಟಣದ ಸ್ವಾತಿ ಮಲ್ಲನಗೌಡ ಬಿರಾದಾರ ಪಡೆದುಕೊಂಡಿದ್ದಾಳೆ.
ದಾರವಾಡದ ಕನರ್ಾಟಕ ವಿಶ್ವ ವಿದ್ಯಾಲಯದ 69 ಘಟಿಕೋತ್ಸವ ಕಾರ್ಯಕ್ರಮದಲ್ಲಿ ಈ ನಾಲ್ಕು ದಿನದ ಪಧಕ ಹಾಗೂ ಪ್ರಶಸ್ತಿ ಪತ್ರಗಳನ್ನು ಪ್ರದಾನ ಮಾಡಲಾಗಿದ್ದು ಸ್ವಾತಿ ಬಿರಾದಾರ ಅವರು ಅರ್ಥಶಾಸ್ತ್ರ ವಿಷಯದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ. ಎಂ.ಎ. ಅರ್ಥಶಾಸ್ತ್ರದಲ್ಲಿ ಕೊಡಮಾಡವ ಮೇ.ಬಿ.ಡಿ.ಪಾಟೀಲ, ಮತ್ತು ಮಕ್ಕಳ ಸುವರ್ಣ ಪದಕ, ದಿ.ಪ್ರಾಚಾರ್ಯ ಬಿ.ಎಂ.ರಾಮಲಿಂಗಯ್ಯ ಸುವರ್ಣ ಪದಕ, ಶ್ರೀಮತಿ ನೀಲಮ್ಮ ನಾರಮ್ಮ ಸುವರ್ಣ ಪದಕ, ಮಿಸ್ಟರ್ ದಾಮೋದರ ಗೋಪಾಲಕೃಷ್ಣ ನಾಯಕ ಸುವರ್ಣ ಪದಕಗಳನ್ನು ಸ್ವಾತಿ ಬಿರಾದಾರ ಅವರು ಪಡೆದುಕೊಂಡಿದ್ದಾರೆ. ಅರ್ಥಶಾಸ್ತ್ರ ವಿಭಾಗದಲ್ಲಿ ಕೊಡಮಾಡಲಾಗುವ ನಾಲ್ಕು ಸ್ವರ್ಣ ಪಧಕಗಳನ್ನು ತನ್ನದಾಗಿಸಿಕೊಂಡು ಹೊಸ ದಾಖಲೆಯನ್ನು ನಿಮರ್ಿಸಿದ್ದಾರೆ.
ಧಾರವಾಡ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ 69 ಘಟಿಕೋತ್ಸವ ಸಮಾರಂಭದಲ್ಲಿ ಉಪ ಕುಲಪತಿ, ಹಾಗೂ ಗಣ್ಯರು ಸ್ವಾತಿ ಬಿರಾದಾರ, ಪಧವಿ ಪತ್ರ ಹಾಗೂ ಚಿನ್ನದ ಪದಕಗಳನ್ನು ನೀಡಿ ಗೌರವಿಸಿದ್ದಾರೆ.
ಸ್ವಾತಿ ಬಿರಾದಾರ ಮಗಳ ಸಾಧನೆಗೆ ಎಸ್.ಕೆ.ಹೆಣ್ಣು ಮಕ್ಕಳ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಸ್.ಬಿರಾದಾರ ಸಂತಸ ವ್ಯಕ್ತಪಡಿಸಿದ್ದಾರೆ.