ಲೋಕದರ್ಶನ ವರದಿ
ಗದಗ 11: ಶಾಲೆಯ ಹಳೆಯ ವಿದ್ಯಾಥರ್ಿಗಳಿಗೆ ಶಾಲೆಯ ಸವರ್ಾಂಗೀಣ ಅಭಿವೃದ್ಧಿಗೆ ಶ್ರಮಿಸಲಿ ಹಾಗೂ ಪ್ಸರ್ತುತ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಂತೆ ಪ್ರೇರೆಪಿಸಲು ಹಳೆಯ ವಿದ್ಯಾಥರ್ಿಗಳ ಸಂಘವನ್ನು ರಚನೆ ಮಾಡಲಾಗಿದೆ ಎಂದು ಶಾಲೆಯ ಪ್ರಧಾನ ಗುರುಗಳಾದ ಎಸ್.ಎಸ್.ಕೊಟಗಿ ಅವರು ಹೇಳಿದರು.
ತಾಲೂಕಿನ ಅಡವಿಸೋಮಾಪುರ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹ್ಮಮಿಕೊಂಡ ಹಳೆ ವಿದ್ಯಾಥರ್ಿಗಳ ಸಂಘ ರಚನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹಳೆ ವಿದ್ಯಾಥರ್ಿಗಳು ತಾವು ಕಲಿತ ಶಾಲೆಯ ಸವರ್ಾಂಗಿಣ ಅಭಿವೃದ್ಧಿಗೆ ಹಾಗೂ ಪ್ರಸ್ತುತ ಮಕ್ಕಳ ಶಿಕ್ಷಣ ಉನ್ನತಿಗಾಗಿ ತಮ್ಮ ಕೈಲಾದಷ್ಟು ಮಟ್ಟಿಗೆ ಸಹಾಯ, ಸಹಕಾರ ನೀಡಿ ಮಕ್ಕಳ ಭವಿಷ್ಯಕ್ಕೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಸಿಗೆ ನೀರೆವುದರ ಮೂಲಕ ಹಳೆ ವಿದ್ಯಾಥರ್ಿಗಳ ಸಂಘ ರಚನೆ ಮಾಡಲಾಯಿತು. ಸಂಘದ ನೂತನ ಅಧ್ಯಕ್ಷರಾದ ಮಂಜುನಾಥ ಜಡಿ ಅವರು ಮಾತನಾಡಿ, ಈ ಶಾಲೆಯೊಂದಿಗೆ ನನ್ನ ಒಡನಾಟ ಹೆಚ್ಚು ಮೂಡಿದ್ದು ನಾನು ಕಳೆದ ಬಾಲ್ಯದ ದಿನಗಳನ್ನು ಇಂದಿಗೂ ಸ್ಮರಿಸುತ್ತೇನೆ. ನನ್ನ ಕಷ್ಟದ ದಿನಗಳು ಇಂದಿನ ಮಕ್ಕಳಿಗೆ ಬಾರದಿರಲಿ ಎಂದು ಈಗಾಗಲೇ ಕಳೆದ 4 ವರ್ಷಗಳಿಂದ ಗ್ರಾಮ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ವರ್ಷದಲ್ಲಿ ಎರಡು ಬಾರಿ ಮಕ್ಕಳಿಗೆ ನೋಟಬುಕ್ ವಿತರಣೆ ಸೇರಿದಂತೆ ವಿದ್ಯಾಥರ್ಿಗಳ ಶಿಕ್ಷಣ ಗುಣಮಟ್ಟವನ್ನು ಸುಧಾರಿಸಲು ಎಲ್ಲ ಹಳೆಯ ಸ್ನೇಹಿತ ರೊಂದಿಗೆ ಸೇರಿಕೊಂಡು ಖಾಸಗಿ ಶಾಲೆ ಮಾದರಿಯ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೆವೆ ಅದೇ ರೀತಿ ಹಳೇ ವಿದ್ಯಾಥರ್ಿಗಳೊಂದಿಗೆ ಹೆಚ್ಚಿನ ಕೆಲಸ ಮಾಡುವದಾಗಿ ಎಂದು ಭರವಸೆ ನೀಡಿದರಲ್ಲದೇ ಇದಕ್ಕೆ ಪ್ರೇರಣೆ ಶಕ್ತಿಯಾಗಿ ಗುರುಗಳು ಸಹ ನಮಗೆ ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದರು.
ನೂತನ ಸಂಘದ ಉಪಾಧ್ಯಕ್ಷರಾಗಿ ಮಹಮ್ಮದ ಕಂಪ್ಲಿ, ಮಂಜುನಾಥ ಹೊಸಳ್ಳಿ, ಪ್ರಧಾನ ಕಾರ್ಯದಶರ್ಿಯಾಗಿ ಸಂತೋಷ ತಳವಾರ, ಸಹಕಾರ್ಯದಶರ್ಿಯಾಗಿ ಈರಣ್ಣ ಕಂಬಳಿ, ಕೋಶಾಧ್ಯಕ್ಷರಾಗಿ ಶಿವಪ್ಪ ತಳವಾರ, ಸಂಘಟನಾ ಕಾರ್ಯದಶರ್ಿಯಾಗಿ ಅಮರೇಶ ಪುರದ, ಬಸವರಾಜ ಉಮ್ಮಣ್ಣನವರ, ಸದಸ್ಯರಾಗಿ ಆನಂದ ವಡ್ಡರ, ಮಂಜುನಾಥ ಜಕ್ಕಮ್ಮನವರ, ಚಂದ್ರು ಉಳ್ಳಟ್ಟಿ, ಮಹೇಶ ಜಗ್ಗಲ, ಸಂಗನಗೌಡ ಪಾಟೀಲ, ಯಮನವ್ವ ಬಸನಾಳ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಹನಮಂತ ಹೊಸಳ್ಳಿ,ಗ್ರಾಪಂ ಉಪಾಧ್ಯಕ್ಷ ಅನಿಲ ಕಾರಬಾರಿ, ಚನ್ನಪ್ಪ ಪುರದ, ರಮೇಶ ಪುರದ, ಮಾಲತೇಶ ಮೇವುಂಡಿ, ಬಸವರಾಜ ಮಂಚಗಲ್, ಈರಣ್ಣ ಅಂಗಡಿ, ಸಂತೋಷ ನಿಂಗಾಪೂರ, ಮಂಜುನಾಥ ಮೇಗಲಮನಿ,ಮಹಮ್ಮದ ರಪೀಕ ಮುಲ್ಲಾನವರ, ಹುಚ್ಚರಪ್ಪ ಉಮ್ಮಣ್ಣವರ, ಶಿಕ್ಷಕರಾದ ಎಂ.ಎಚ್.ದೊಡ್ಡಮನಿ, ಡಿ.ಕೆ.ಕಲ್ಲೋಳ್ಳಿ, ಸೇರಿದಂತೆ 100ಕ್ಕೂ ಹೆಚ್ಚು ಹಳೆ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
ಶಿಕ್ಷಕರಾದ ಬಿ.ಡಿ.ಹತರ್ಿ ಸ್ವಾಗತಿಸಿದರು. ಎ.ಆರ್.ಕಮತ ಅವರು ಕಾರ್ಯಕ್ರಮ ನಿರೂಪಿಸಿದರು. ಬಿ.ಎಸ್.ಚವಡಿ ಅವರು ವಂದಿಸಿದರು.