ವೈಮನಸ್ಸನ್ನು ಮರೆತು ಚುನಾವಣೆಯಲ್ಲಿ ಒಟ್ಟಾಗಿ ಶ್ರಮಿಸಿ: ಯರಗಟ್ಟಿಯಲ್ಲಿ ಕಾರ್ಯಕರ್ತರಿಗೆ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಸಲಹೆ

ಲೋಕದರ್ಶನ ವರದಿ 

ಯರಗಟ್ಟಿ 20: ಹಿಂದಿನ ವಿಧಾನ ಸಭಾ ಚುನಾವಣೆಯಲ್ಲಿ ನಡೆದ ಗೊಂದಲವನ್ನು ತೊರೆದು ಎಲ್ಲ ಕಾರ್ಯಕರ್ತರು ಪಕ್ಷದ ತತ್ವ ಸಿದ್ಧಾಂತಗಳನ್ನು ಅರಿತು ಯಾರೆ ಅಭ್ಯಥರ್ಿಯಾದರೂ ಒಟ್ಟಾಗಿ ಲೋಕಸಭೆ ಚುನಾವಣೆಯನ್ನು ಎದುರಿಸಬೇಕು ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಇಲ್ಲಿನ ಹೊಟೇಲ್ ರತ್ನ ಸಂಗಮ ಗಂಗಾ ಸಭಾ ಭವನದಲ್ಲಿ ನಡೆದ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಮುಂಬರುವ ದಿನಗಳಲ್ಲಿಯೂ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕೆ ದುಡಿದವರಿಗೆ ಎಮ್ಎಲ್ಎ ಟಿಕೇಟ್ ನೀಡಲಾಗುವುದು. ಕಾರ್ಯಕರ್ತರಲ್ಲಿ ಗೊಂದಲ ಬೇಡ. ಭಾರತೀಯ ಜನತಾ ಪಕ್ಷ ಜಮ್ಮು ಕಾಶ್ಮೀರ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆ ಮಾಡುತ್ತಿದ್ದು ಕೇಂದ್ರ ಸಕರ್ಾರದ ಅಭಿವೃದ್ಧಿ ಶೂನ್ಯವಾಗಿದೆ ಎಂದರು.

ಯರಗಟ್ಟಿ ತಾಲೂಕಾ ಕೇಂದ್ರ ಘೋಷಣೆಗೆ ಪ್ರಯತ್ನಿಸಿದ ಸಚಿವ ಸತೀಶ ಜಾರಕಿಹೊಳಿ ಅವರನ್ನು ತಾಲೂಕಾ ಹೋರಾಟ ಸಮಿತಿ ಸದಸ್ಯರು ಸನ್ಮಾನಿಸಿದರು.

ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಸಂಸದ ಎಸ್.ಬಿ.ಸಿದ್ನಾಳ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ, ವಿಶ್ವಾಸ ವೈದ್ಯ, ರವಿಂದ್ರ ಯಲಿಗಾರ, ಡಾ.ವ್ಹಿ.ಎಸ್.ಸಾಧುನವರ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷೆ ಜಯಶ್ರೀ ಮಾಳಗಿ, ಯರಗಟ್ಟಿ-ಮುನವಳ್ಳಿ ಬ್ಲಾಕ್ ಅಧ್ಯಕ್ಷ ಡಿ.ಡಿ.ಟೋಪೋಜಿ, ಎಚ್.ಎಸ್.ಗಂಗರಡ್ಡಿ, ಮಂಜುನಾಥ ತಡಸಲೂರ, ನಿಖಿಲ ಪಾಟೀಲ, ಶಿವು ಪಟ್ಟಣಶೆಟ್ಟಿ, ಚಾಯಪ್ಪ ಹುಂಡೇಕಾರ, ಹೊನ್ನಪ್ಪ ಖಂಡ್ರಿ, ಈರಣ್ಣ ಸಂಗನಪ್ಪನವರ, ಗೋಪಾಲ ದಳವಾಯಿ, ಶಿವಾನಂದ ಕರಿಗೊಣ್ಣವರ, ಭೀಮಶೆಪ್ಪ ಅರಬಾವಿ, ಡಿ.ಕೆ.ರಫೀಕ್, ಸಂಜು ಚನ್ನಮೇತ್ರಿ, ಮಕ್ತುಮ್ ಜಮಾದಾರ, ಸಲೀಮ್ ಜಮಾದಾರ, ಮುದಕಪ್ಪ ತಡಸಲೂರ, ಪಿರೋಜ ಖಾದ್ರಿ, ಫಕೀರಪ್ಪ ಹದ್ದನ್ನವರ, ಎಮ್.ಎಸ್.ಹಿರೇಕುಂಬಿ, ರಾಮಣ್ಣ ಪಾಟೀಲ, ಯರಗಟ್ಟಿ, ಕಡಬಿ, ಕೋ-ಶಿವಾಪೂರ, ಸತ್ತಿಗೇರಿ, ಯರಜವರ್ಿ, ಮುನವಳ್ಳಿ ಸುತ್ತಮುತ್ತಲಿನ ನೂರಾರು ಕಾರ್ಯಕರ್ತರು ಸೇರಿದ್ದರು.