ಮೂಡಲಗಿ 31: ಬೆಂಗಳೂರು ನಗರದ ಶ್ರೀರಾಂಪೂರ ಪೋಲಿಸ್ ಠಾಣೆಯಲ್ಲಿ ಸಂಪಾದಕ ವಿಶ್ವೇಶ್ವರ ಭಟ್ ಮೇಲೆ ರಾಜ್ಯದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಪುತ್ರ ನಿಖಿಲ ಕುಮಾರಸ್ವಾಮಿ 8 ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದನ್ನು ಖಂಡಿಸಿ ಹಾಗೂ ಪ್ರಕರಣ ಹಿಂಪಡೆಯುವಂತೆ ಆಗ್ರಹಿಸಿ ಮೂಡಲಗಿ ತಾಲೂಕಾ ಪತ್ರಕರ್ತ ಬಳಗದಿಂದ ರಾಜ್ಯಪಾಲರಿಗೆ ಶುಕ್ರವಾರ ಮನವಿಯನ್ನು ತಹಶೀಲ್ದಾರ ಪರವಾಗಿ ಕಾಯರ್ಾಲಯದ ಶಿರಸ್ತೆದಾರ ರಾಜು ಕಡಕೊಳ ಮೂಲಕ ಸಲ್ಲಿಸಲಾಯಿತು.
ಮಂಡ್ಯ ಲೋಕಸಭಾ ಪರಾಜಿತ ಅಭ್ಯಥರ್ಿ ನಿಖಿಲ್ ಕುಮಾರಸ್ವಾಮಿ ಕುಡಿದ ಅಮಲಿನಲ್ಲಿ ಮಾಡಿದ ರಂಪಾಟದ ಸುದ್ದಿಯನ್ನು ಮೇ 25 ರಂದು ಶನಿವಾರ ಪತ್ರಿಕೆಯಲ್ಲಿ ಪ್ರಕಟ ಮಾಡಿದ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಮೇಲೆ ಮಾನ ಹಾನಿ, ಉದ್ದೇಶ ಪೂರ್ವಕ ನಿಂದನೆಮಾಡಿ ಶಾಂತಿ ಕದಡುವ ದುರುದ್ದೇಶದಿಂದ ಭಯ ಹುಟ್ಟಿಸುವುದು, ವಂಚನೆ, ಕೊಲೆ, ಬೆದರಿಕೆ, ದಾಖಲಾತಿ ತಿರುಚುವುದು ಹೀಗೆ 8 ಪ್ರಕರಣಗಳನ್ನು ದಾಖಲಿಸಿದ್ದು ಖಂಡನೀಯ. ಇದು ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡಿದಂತೆ. ರಾಜ್ಯದಲ್ಲಿ ವರದಿ ಮಾಡುವ ವ್ಯಕ್ತಿ ಮತ್ತು ಪತ್ರಿಕಾ ಸಂಸ್ಥೆಗಳ ಮುಖ್ಯಸ್ಥರು, ವರದಿಗಾರರ ಮೇಲೆ ಈ ರೀತಿ ಪ್ರಕರಣಗಳನ್ನು ದಾಖಲಿಸಿ ಪತ್ರಿಕಾ ಸ್ವಾತಂತ್ಯಕ್ಕೆ ಧಕ್ಕೆ ಮತ್ತು ಪತ್ರಕರ್ತರಲ್ಲಿ ಭೀತಿ ಹುಟ್ಟಿಸಿ ಮಾಧ್ಯಮಗಳನ್ನು ನಿಯಂತ್ರಿಸುವ ಹುನ್ನಾರವನ್ನು ಮೂಡಲಗಿ ತಾಲೂಕಾ ಪತ್ರಕರ್ತರ ಬಳಗದವತಿಯಿಂದ ಉಗ್ರವಾಗಿ ಖಂಡಿಸುತ್ತೇವೆ. ಈ ಕೂಡಲೇ ವಿಶ್ವೇಶ್ವರ ಭಟ್ರ ಮೇಲೆ ದಾಖಲಿಸಿರುವ ಎಲ್ಲ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಮತ್ತು ಸಂಪಾದಕರ ಮೇಲೆ ಸುಳ್ಳು ಕೇಸು ದಾಖಲಿಸಿದ ನಿಖಿಲ ಕುಮಾರಸ್ವಾಮಿಯ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ,
ಈ ಸಮಯದಲ್ಲಿ ಯ.ಯ. ಸುಲ್ತಾನಪೂರ, ಕೃಷ್ಟಾ ಗೀರೆನ್ನವರ, ಶಿವಾನಂದ ಮುಧೋಳ, ಲಕ್ಷ್ಮಣ ಅಡಿಹುಡಿ, ಸುಧಾಕರ ಉಂದ್ರಿ, ಸುಭಾಸ ಗುಡ್ಯಾಗೋಳ, ಭಗವಂತ ಉಪ್ಪಾರ, ಸುರೇಶ ಪಾಟೀಲ್, ಸುರೇಶ ಎಮ್ಮಿ, ಸಚೀನ ಪತ್ತಾರ, ರಾಜು ಮಗದುಮ್ ಮತ್ತು ಜಯ ಕನರ್ಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ಶಿವರೆಡ್ಡಿ ಹುಚರೆಡ್ಡಿ ಉಪಸ್ಥಿತರಿದ್ದರು.