ಕಾತರ್ಿಕೋತ್ಸವದ ಪ್ರಯುಕ್ತ ಜಾನಪದ ಕಾರ್ಯಕ್ರಮ

ಲೋಕದರ್ಶನ ವರದಿ

ರಾಣೆಬೆನ್ನೂರ03: ಡಾ. ಬಿ.ಆರ್ ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಸಾಂಸ್ಕೃತಿಕ ಕ್ರೀಡಾ ಸಂಘ (ರಿ) ಬೆನಕನಕೊಂಡ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ  ಮಾತಂಗೆಮ್ಮದೇವಿ ಕಾತರ್ಿಕೊತ್ಸವದ ಪ್ರಯುಕ್ತ ಹನುಮಂತ ಮ ಲೆಕ್ಕಿಕೋನಿ ಸಂಗಡಗರಿಂದ ಜಾನಪದ ಕಾರ್ಯಕ್ರಮ ಜರುಗಿತು.

   ಕಾರ್ಯಕ್ರಮ ಉದ್ಘಾಟನೆಯನ್ನು ನೇರವೆರಿಸಿ ವಿರೂಪಾಕ್ಷಪ್ಪ ಕಿವುಡಣ್ಣನವರ ಗ್ರಾ.ಪಂ ಸದಸ್ಯರು ಮಾತನಾಡುತ್ತಾ ಕಲಾವಿದರು, ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜಾನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿವೆ.

ಜಾನಪದ ಕಲಾಪ್ರಕಾರವನ್ನು ಮುಂದಿನ ಪಿಳಿಗೆಗೆ ಪರಿಚಯಿಸುವ ದಿಶೆಯಲ್ಲಿ ಕಲೆಗಳನ್ನು ಜೀವಂತವಾಗಿ ಉಳಿಕೊಳ್ಳುವ ಮೂಲಕ ಪ್ರೋತ್ಸಾಹಿಸಬೇಕಿದೆ. ಜಾನಪದದಲ್ಲಿ ಸಾಂಸ್ಕೃತಿಕತೆ ನೆಲಸಿದೆ. ಜಾನಪದ ಕಲಾವಿದರು ನಾಡಿನ ಸಂಸ್ಕೃತಿಯ ಮೂಲ ಯಜಮಾನರು ಗ್ರಾಮೀಣ ಬದುಕಿನ ನೈಜ ಸಂಸ್ಕೃತಿಯನ್ನು ಜಾನಪದ ಕಲೆಗಳು ಬಿಂಬಿಸುತ್ತವೆ ಎಂದು ಮಾತನಾಡಿದರು. 

ಈ ಸಂದರ್ಭದಲ್ಲಿ ಮಲ್ಲೇಶಪ್ಪ ಕಿವುಡಣ್ಣನವರ, ನಾಗಪ್ಪ. ತಿ. ಅಸುಂಡಿ, ತಿಪ್ಪೇಶಪ್ಪ ಬಸಣ್ಣನವರ, ಕಲಾವಿದರಾದ ಮಂಜುನಾಥ ರಾಜನಹಳ್ಳಿ, ಜಮಾಲಸಾಬ ತಾವರಗೊಂದಿ, ಕಾರ್ಯಕ್ರಮ ನಡೆಸಿಕೊಟ್ಟರು.