ಲೋಕದರ್ಶನ ವರದಿ
ರಾಣೇಬೆನ್ನೂರು, 02: ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜಾನಪದ ಕಲೆಗಳು ಕಣ್ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಗುರುಶಾಂತಯ್ಯ ಮಳೀಮಠ ಹೇಳಿದರು.
ತಾಲೂಕಿನ ಜೋಯಿಸರಹರಳಹಳ್ಳಿ ಗ್ರಾಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಹಾವೇರಿ ಮತ್ತು ಮಳ್ಳಿ ಶಾಂತೇಶ್ವರ ಭಜನಾ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಮಳ್ಳಿ ಶಾಂತೇಶ್ವರ ಕಾತರ್ಿಕೋತ್ಸವ ಹಾಗೂ ಪಲಕ್ಕಿ ಉತ್ಸವ ಕಾರ್ಯಕ್ರಮವು ಜರುಗಿತು.
ನಮ್ಮ ಸಂಸ್ಕೃತಿ ಉಳಿಯಬೇಕಾದರೆ ಅದು ಜಾನಪದ ಕಲೆಗಳಿಂದ ಮಾತ್ರ ಸಾಧ್ಯ. ಆದರೆ ಇಂದಿನ ಯುವ ಸಮೂಹವು ವಿದೇಶಿ ವ್ಯಾಮೋಹಕ್ಕೆ ಮಾರು ಹೋಗಿ ನಮ್ಮ ದೇಶದ ಪರಂಪರೆಯ ಸಂಕೇತವಾಗಿರುವ ಗ್ರಾಮೀಣ ಕಲೆಗಳು ನಶಿಸುತ್ತಿರುವುದು ದೊಡ್ಡ ದುರಂತವಾಗಿದೆ. ಆದ್ದರಿಂದ ಪಾಲಕರಾದವರು ತಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ದೇಶದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಬಗ್ಗೆ ಹಾಗೂ ಮುಖ್ಯವಾಗಿ ಸಂಸ್ಕಾರಯುತ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ತಿಳಿಸಬೇಕೆಂದರು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಗದಿಗೆಪ್ಪ ಮುದಕಣ್ಣನವರ, ಶಿವರುದ್ರಪ್ಪ ಹೊಸಗೌಡ್ರ, ಹೇಮಯ್ಯ ಮಳೀಮಠ, ಕಲಾವಿದರಾದ ಗುರುಶಾಂತಪ್ಪ, ಮುದ್ದಪ್ಪನವರ, ಕನಗೌಡ್ರ, ಮಂಜಯ್ಯ, ಶಂಕರಪ್ಪ, ಬಸಪ್ಪ, ವೀರಭದ್ರಪ್ಪ, ನಾಗಪ್ಪ, ಈರಯ್ಯ ಸೇರಿದಂತೆ ಮತ್ತಿತರರು ಇದ್ದರು.