ಲೋಕದರ್ಶನ ವರದಿ
ಹೂವಿನಹಡಗಲಿ 27: ಜನಪದ ಇತರ ಸಾಹಿತ್ಯದ ತಾಯಿಬೇರು,ಗ್ರಾಮೀಣ ಪ್ರದೇಶದಲ್ಲಿ ಮನುಷ್ಯನ ಬದುಕಿನ ಶೈಲಿಯ ಭಾಗವಾಗಿ ಜನಪದವನ್ನು ಅಳವಡಿಸಿಕೊಂಡು ದಣಿದ ದೇಹಕ್ಕೆ ತಮ್ಮ ಕೆಲಸದ ಬಿಡುವಿನ ವೇಳೆ ಹಾಡುಗಳನ್ನು ಹಾಡುವ ಮೂಲಕ ಇನ್ನು ಜೀವಂತವಾಗಿದೆ ಎಂದು ಲೇಖಕಿ ಡಾ.ಅಂಜಿನಾಕೃಷ್ಣಪ್ಪ ಹೇಳಿದರು.
ಪಟ್ಟಣದ ಎಸ್ಕೆಜಿಜೆ ಕಾಲೇಜು ಆವರಣದಲ್ಲಿ ಬಸರಹಳ್ಳಿಯ ಜ್ಞಾನಭಾರತಿ ವಿದ್ಯಾಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಭಾವಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಜನಪದ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಯುವ ಪೀಳಿಗೆ ಮೇಲೆ ಇದೆ ಎಂದರು.
ಶಿಕ್ಷಕರಾದ ವೀರೇಶ, ಬಿ.ಲಿಂಗಪ್ಪ, ಕುಮಾರಸ್ವಾಮಿ ಮಾತನಾಡಿದರು. ಕಾಲೇಜಿನ ಉಪಪ್ರಾಚಾರ್ಯ ಚಂದ್ರಗೌಡ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಕಲಾವಿದ ಕೆ.ಸಿ.ಪರಶುರಾಮ ಅಂಗೂರು, ಎಂ.ಪರಶುರಾಮ ಸಿಬ್ಬಂದಿ ಇದ್ದರು. ಓಂಕಾಂ ಚನ್ನಮ್ಮ ಮತ್ತು ತಂಡ ಅಂಗೂರು ಇವರಿಂದ ಸೋಬಾನೆ ಪದಗಳು, ಹಿರೇಹಡಗಲಿ ಕೊರವರ ರಮೇಶ ಮತ್ತು ತಂಡದಿಂದ ಕ್ಲಾರಿಯೋನೇಟ್,ವಾದನ, ಬಾವಸಂಗಮ ಕಾರ್ಯಕ್ರಮ ನಡೆದವು. ಶಿಕ್ಷಕಿ ಎಚ್.ಎಂ.ಸುಮಂಗಲ ಹಣ್ಣಿ ,ನರೇಶ ನಿರ್ವಹಿಸಿದರು.