ಲೋಕದರ್ಶನ ವರದಿ
ಮುಧೋಳ 03: ವಿಜಯಪುರ ಜಿಲ್ಲೆಯ ಕೃಷ್ಣಾನಗರದ ನಂದಿ ಇಂಟನ್ಯರ್ಾಶನಲ್ ಸ್ಕೂಲ್ ಆವರಣದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಗುಂಪು ನೃತ್ಯ ಸ್ಪಧರ್ೆಯಲ್ಲಿ ಮುಧೋಳದ ಪ್ರತಿಷ್ಠಿತ ತ್ರಿವೇಣಿ ಶಿಕ್ಷಣ ಸಂಸ್ಥೆಯ ಶ್ರೀ ಸಂಗಮನಾಥ ಇಂಟನ್ಯರ್ಾಶನಲ್ ಸಿಬಿಎಸ್ಇ ಶಾಲೆಯ ಸಚಿನ ಬಿಸನಾಳ, ರೋಷಣಿ ಮೇತ್ರಿ, ಸೃಜನಾ ಸತ್ತೀಗೇರಿ ಹಾಗೂ ತಂಡ ದ್ವಿತೀಯ ಬಹುಮಾನ ಪಡೆದ ರನ್ನರ್ ಆಫ್ ಸ್ಥಾನ ಪಡೆದು ನಗದು ಬಹುಮಾನ ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಅಭಿನಂದನೆ:-
ಅಂತರ್ ಜಿಲ್ಲಾ ಮಟ್ಟದ ಗುಂಪು ನೃತ್ಯ ಸ್ಪಧರ್ೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದು ಸಂಸ್ಥೆಯ ಕೀತರ್ಿ ಹೆಚ್ಚಿಸಿದ ವಿದ್ಯಾಥರ್ಿ/ನಿಯರಿಗೆ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮಲಘಾಣ ಪ್ರಾಚಾರ್ಯ ಎಸ್.ಖಾನ್, ಹಿರಿಯ ಶಿಕ್ಷಕ ಮಲ್ಲು ಕಳ್ಳೆನ್ನವರ ಅಭಿನಂದಿಸಿದ್ದಾರೆ.