ಬೆಂಗಳೂರು, ಡಿ 02ಇಂದು ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮುದ್ದು ಮಗಳು ಐರಾಳ ಹುಟ್ಟುಹಬ್ಬ.
ಅಪ್ಪ ಯಶ್, ಅಮ್ಮ ರಾಧಿಕಾ ಹಾಗೂ ಅವರ ಅಭಿಮಾನಿ ಬಳಕ ಪುಟ್ಟ ಕಂದಮ್ಮನಿಗೆ ಶುಭ ಹಾರೈಸಿದ್ದಾರೆಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶನಿವಾರದಿಂದಲೇ ಐರಾಳ ಹೊಸ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ರಾಧಿಕಾ ೨೦೧೮ ಡಿಸೆಂಬರ್ ೨ ರಂದು ಐರಾಳಿಗೆ ಜನ್ಮ ನೀಡಿದ್ದರು. ಹೀಗಾಗಿ ಸೋಮವಾರ ಐರಾಗೆ ಒಂದು ವರ್ಷ ತುಂಬಿದೆ.ಒಂದು ವರ್ಷದ ಫೋಟೋಶೂಟ್ ಗಾಗಿ ಮನೆಯೊಳಗೆ ಮತ್ತು ಹೊರಗೆ ಐರಾಳನ್ನು ಕೂರಿಸಿ ಫೋಟೋ ಕ್ಲಿಕ್ಕಿಸಲಾಗಿದೆ. ಜೊತೆಗೆ ಐರಾ ಕೂಡ ಕ್ಯಾಮೆರಾಗೆ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾಳೆ.
ಐರಾಳ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಫೋಟೋದಲ್ಲಿ ಐರಾ ಮುದ್ದಾಗಿ ಕಾಣಿಸಿಕೊಂಡಿದ್ದಾಳೆ.
ಇತ್ತೀಚೆಗಷ್ಟೆ ರಾಧಿಕಾ, ಮಗಳು ಐರಾ ಬಿಸಿಲಲ್ಲಿ ನೋಡುವುದು ಹೇಗೆ ಎಂದು ತೋರಿಸುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋವನ್ನು ಲಕ್ಷಾಂತರ ಅಭಿಮಾನಿಗಳು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನಟಿ ರಾಧಿಕಾ ಎರಡನೇ ಬಾರಿ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಐರಾ, ಸಹೋದರನ ಜೊತೆ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವುದು ವಿಶೇಷ.