ಪಟಾಕಿ ಮಾರಾಟಕ್ಕೆ ಪರವಾನಗಿ ಕಡ್ಡಾಯ: ಎಂ.ಜಿ. ಹಿರೇಮಠ

ಗದಗ 03: ಪಟಾಕಿ ಅಂಗಡಿ ತೆರೆಯಲು ಜಿಲ್ಲಾಡಳಿತದಿಂದ ಪರವಾನಗಿಯು ಕಡ್ಡಾಯವಾಗಿದೆ.  ಜನನಿಬಿಡ ಮತ್ತು ವಾಣಿಜ್ಯ ಸಂಕೀರ್ಣದಲ್ಲಿ ಯಾವುದೇ ಖಾಯಂ ಅಂಗಡಿ ಅಥವಾ ಕಟ್ಟಡಗಳಲ್ಲಿ ಚಿಲ್ಲರೆ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲು, ಪಟಾಕಿಗಳ ದಾಸ್ತಾನು ಹಾಗೂ ಮಾರಾಟ ಮಾಡಲು ಅವಕಾಶವಿಲ್ಲವೆಂದು ಗದಗ  ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.   ಅವರಿಂದು  ಗದಗ ಜಿಲ್ಲಾಧಿಕಾರಿಗಳ  ಕಚೇರಿ ಸಭಾಂಗಣದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅಗ್ನಿ ಅವಘಡ ಸಂಭವಿಸಿದಂತೆ ತೆಗೆದುಕೊಳ್ಳಬಹುದಾದ ಮುಂಜಾಗ್ರತೆ ಕ್ರಮ ಕುರಿತು ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು  ಮಾತನಾಡಿದರು.    

ಬರುವ ನವೆಂಬರ್ 6 ರಿಂದ 8 ರವರೆಗೆ ಜರುಗಲಿರುವ ದೀಪಾವಳಿ ಹಬ್ಬದ ಸಮಯದಲ್ಲಿ ಸಂಭವಿಸಬಹುದಾದ ಅಗ್ನಿ ಅಪಘಾತ ಮತ್ತು ಇತರೆ ಅನಾಹುತಗಳನ್ನು ತಡೆಗಟ್ಟಲು  ಸವರ್ೋಚ್ಛ ನ್ಯಾಯಾಲಯವು ಪಟಾಕಿಗಳಿಗೆ ಸಂಬಂಧಿಸಿದಂತೆ   ಆದೇಶ ಹೊರಡಿಸಿದ್ದು 17 ನಿದರ್ೇಶನಗಳನ್ನು  ನೀಡಿದೆ.   ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ  ಜನರು ಪಟಾಕಿಗಳನ್ನು ಹಾರಿಸಬಹುದಾಗಿದೆ.  ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು  ಸವರ್ೋಚ್ಚ ನ್ಯಾಯಾಲಯದ ಆದೇಶ ಸೂಚನೆಗಳನ್ವಯ  ನಿಗದಿತ ಶುಲ್ಕಗಳನ್ನು ಪಡೆದು  ಪಟಾಕಿ ಅಂಗಡಿಗಳನ್ನು ತೆರೆಯಲು ಅನುಮತಿಸಬೇಕು.     ಅದಕ್ಕೂ ಮುನ್ನ  ಅಗ್ನಿ ಶಾಮಕ ದಳ ಹಾಗೂ ಪರಿಸರ ಇಲಾಖೆಯವರು, ನಗರಸಭೆ, ಸ್ಥಳೀಯ ಸಂಸ್ಥೆಗಳವರು   ಜಾಗೆಗಳ ಕುರಿತು  ಸೂಕ್ತ  ಪರಿಶೀಲನೆ ನಡೆಸಬೇಕು.  ಪಟಾಕಿ ಸಿಡಿಸುವಿಕೆಯಿಂದ   ಅನಾಹುತದ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರು    ಜಿಲ್ಲೆಯ ಎಲ್ಲ ಶಾಲಾ ಮಕ್ಕಳಿಗೆ ತಿಳುವಳಿಕೆ ನೀಡಲು ತಕ್ಷಣ ಶಾಲೆಗಳ ಶಿಕ್ಷಕ  ವೃಂದಕ್ಕೆ ಸೂಚಿಸಿ  ಕ್ರಮ ಕೈಗೊಳ್ಳಬೇಕು.  ಪಟಾಕಿ ಅಂಗಡಿಯವರು ಅಗ್ನಿ, ಶಾರ್ಟ ಸಕರ್ಿಟ್, ಪರಿಸರ ಮಾಲಿನ್ಯ ಸಂಭವಿಸದಂತೆ ಸೂಕ್ತ ಶಮನ    ವ್ಯವಸ್ಥೆ  ಮಾಡಿಕೊಳ್ಳಬೇಕು. ಗದುಗಿನಲ್ಲಿ ವಿದ್ಯಾದಾನ ಸಮಿತಿ ಹೈಸ್ಕೂಲ ಮೈದಾನದಲ್ಲಿ ಪಟಾಕಿ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿದ್ದು ಉಳಿದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಯಾ ಮುಖ್ಯಾಧಿಕಾರಿಗಳು  ಸವರ್ೋಚ್ಚ ನ್ಯಾಯಾಲಯದನ್ವಯ  ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳು       ಸೂಚಿಸಿದರು.   

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿ.ಪಂ. ಉಪಕಾರ್ಯದಶರ್ಿ ಮಹೇಶ ಎಸ್.ಸಿ., ಡಿ.ವೈ.ಎಸ್.ಪಿ.  ವಿಜಯಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ರುದ್ರೇಶ ಪಿ.ಎಸ್,  ನಗರಸಭೆ ಪೌರಾಯುಕ್ತ ಮನ್ಸೂರ ಅಲಿ,   ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು,    ವಿವಿಧ ಇಲಾಖೆಯ ಅಧಿಕಾರಿಗಳು, ಪಟಾಕಿ ಮಾರಾಟಗಾರರ ಪ್ರತಿನಿಧಿಗಳು ಭಾಗವಹಿಸಿದ್ದರು.