ಮುಗಳಖೋಡ 17; ಪಟ್ಟಣದ 14ನೇ ವಾಡರ್ಿನ ಸಿದ್ದಪ್ಪ ಗುರುಲಿಂಗ ನಾವ್ಹಿ ಇವರ ಗುಡಿಸಲಿಗೆ ಚಿಮಣಿದೀಪ ತಾಗಿ ಗುಡಿಸಲು ಭಸ್ಮವಾಗಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
ಗುಡಿಸಲಿನಲ್ಲಿ ಇಟ್ಟಿದ 22 ಸಾವಿರ ರೂ, ಪಾತ್ರೆ, ಪಗಡೆ ಹೊಲಿಗೆ ಯಂತ್ರ, ಬಟ್ಟೆ, ದವಸದಾನ್ಯ ಸೇರಿದಂತೆ ಅಪಾರ ಪ್ರಮಾಣದಲ್ಲಿ ವಸ್ತುಗಳು ಸುಟ್ಟು ಕರಕಲಾಗಿವೆ. ಗ್ರಾಮ ಸಹಾಯಕ ಈರಪ್ಪ ತಳವಾರ, ಶಂಕರ ಲಕ್ಷ್ಮೇಶ್ವರ ಸ್ಥಳಕ್ಕೆ ಆಗಮಿಸಿದರು.