ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಮುಗಿಸಿ- ಸಚಿವ ಶಿವರಾಜ ಎಸ್‌. ತಂಗಡಗಿ

Finish the irrigation projects within the time limit- Minister Shivraj S. Take it easy

ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಮುಗಿಸಿ- ಸಚಿವ ಶಿವರಾಜ ಎಸ್‌. ತಂಗಡಗಿ 

ಕೊಪ್ಪಳ 07:ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಯನ್ನು ಕಾಲಮಿತಿಯಲ್ಲಿ ಮುಗಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್‌. ತಂಗಡಗಿ ಹೇಳಿದರು. 

ಅವರು ಮಂಗಳವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕರೆದ ಕೊಪ್ಪಳ ಜಿಲ್ಲೆಯ ವಿವಿಧ ನೀರಾವರಿ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. 

ಕಾಲಮಿತಿಯಲ್ಲಿ ನೀರಾವರಿ ಯೋಜನೆಗಳು ಆಗದಿದ್ದರೆ ರೈತರಿಗೆ ನೀರು ಕೊಡಲು ಹೇಗೆ ಸಾಧ್ಯ ಕೆಲವೊಂದು ಯೋಜನೆಗಳು ಸುಮಾರು ವರ್ಷಗಳಿಂದ ಹಾಗೆ ನಡೆಯುತ್ತಲೆ ಇವೆ. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿದಾಗ ಅವುಗಳು ಕಾಲಮಿತಿಯಲ್ಲಿ ಮುಗಿಯುತ್ತವೆ. ಅಳವಂಡಿ ಬೆಟಗೇರಿ ಏತ ನೀರಾವರಿ ಯೋಜನೆಯ ಜನವರಿ 30ರ ಒಳಗಡೆ ಮುಗಿಯಬೇಕು. ಸಿಂಗಟಾಲೂರು ಏತ ನೀರಾವರಿ ಯೋಜನೆ ನಮ್ಮ ಜಿಲ್ಲೆಯಲ್ಲಿ ಏನಾಗಿದೆ ಯಾವ ಹಂತದಲ್ಲಿದೆ ಎಂದು ಸಚಿವರು ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಈ ಯೋಜನೆಯ ಕಾಮಗಾರಿಯನ್ನು ವಿಳಂಭ ಮಾಡದೇ ಪೂರ್ಣಗೊಳಿಸಬೇಕೆಂದರು. 

ಮತ್ತೆ ಸಭೆ ಕರೆಯುತ್ತೆನೆ ಆಗ ಗುತ್ತಿಗೆದಾರರಿಗೂ ಸಭೆಗೆ ಕರೆಯಬೇಕು. ಕಾಲಮಿತಿಯಲ್ಲಿ ಕೆಲಸ ಮುಗಿಸದ ಗುತ್ತಿಗೆದಾರರಿಗೆ ನೋಟೀಸ್ ನೀಡಿ ಬ್ಲ್ಯಾಕ್ ಲಿಸ್ಟಗೆ ಸೇರಿಸಬೇಕು. ಕೆರೆಗಳ ವೀಕ್ಷಣೆಗೂ ಬರುತ್ತೆನೆ. ಕಾಟಾಪುರ. ಶಿರವಾರ. ಕರಡೋಣ ಕೆರೆಗಳಿಗೆ ನೀರು ಬಿಡಬೇಕು. ಈಗ ಕೆರೆಗಳು ತುಂಬಿದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಗಳಾಗುವುದಿಲ್ಲ. ಸಭೆಯಲ್ಲಿ ಚರ್ಚೆಯಾದ ಎಲ್ಲಾ ವಿಷಯಗಳನ್ನು ಅಧಿಕಾರಿಗಳು ಪಾಲನೆ ಮಾಡಬೇಕು ಎಂದು ಹೇಳಿದರು. 

ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ ನೀರಾವರಿ ಯೋಜನೆಯ ಯಾವುದೇ ಕೆಲಸ ಮತ್ತು ಕಾಮಗಾರಿಗಳ ಕುರಿತು ಮೂರು ತಿಂಗಳಿಗೊಮ್ಮೆ ಆದರು ಸಭೆ ನಡೆಯಬೇಕು. 18 ತಿಂಗಳಲ್ಲಿ ಮುಗಿಯುವ ಕೆಲಸಗಳು ಹಲವಾರು ವರ್ಷಗಳು ತೆಗೆದುಕೊಳ್ಳುತ್ತವೆ. ಆಗಾಗ ನೀರಾವರಿ ಯೋಜನೆಗಳ ಸಭೆ ನಡೆಸಿದರೆ ಅವುಗಳ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು. 

ಈ ಸಭೆಯಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ. ಜಿಲ್ಲಾಧಿಕಾರಿ ನಲಿನ್ ಅತುಲ್‌. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ. ಸಹಾಯಕ ಆಯುಕ್ತರಾದ ಮಹೇಶ್ ಮಾಲಗಿತ್ತಿ ಸೇರಿದಂತೆ ಕೃಷ್ಣ ಭಾಗ್ಯ ಜಲ ನಿಗಮ. ಕರ್ನಾಟಕ ನೀರಾವರಿ ನಿಗಮ ನಿಯಮಿತ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.