ಕಾವ್ಯ ಚಿಂತನೆಗಳಿಂದ ಉತ್ಕೃಷ್ಟ ಸಾಹಿತ್ಯ ರಚನೆ ಸಾಧ್ಯ: ಬದಾಮಿ

ಲೋಕದರ್ಶನ ವರದಿ

ಅಥಣಿ 26: ನಾವು ಬರೆದ ಕಾವ್ಯಗಳನ್ನು ಹಿರಿಯ ಕವಯತ್ರಿಯರು ವಿಮಶರ್ಿಸಿ ಚಿಂತನೆ ಮಾಡಿದಾಗ, ನಮ್ಮನ್ನು ನಾವು ತಿದ್ದಿಕೊಂಡು ಇನ್ನೂ ಉತ್ತಮ ಕವನಗಳನ್ನು ಬರೆಯಲು ಸಾಧ್ಯವಾಗುತ್ತದೆ ಎಂದು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಬದಾಮಿ ಹೇಳಿದರು.

ಸ್ಥಳಿಯ ಲೇಖಕಿಯರ ಸಂಘ ಹಾಗೂ ಸಿರಿಗನ್ನಡ ವೇದಿಕೆ ತಾಲೂಕು ಘಟಕದ ಆಶ್ರಯದಲ್ಲಿ, ಅಥಣಿಯ ಕೆ.ಎ ಲೋಕಾಪೂರ ಮಹಾವಿದ್ಯಾಲಯದಲ್ಲಿ ಜರುಗಿದ ಕಾವ್ಯ ಚಿಂತನ ಹಾಗೂ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ, ಅಥಣಿಯಲ್ಲಿ ಇಂದು ನಾಲ್ಕು ಜನ ಕವಯತ್ರಿಯರ ಕವನಗಳು ನಡೆದು, 30 ಜನ ಕವಯತ್ರಿಯರು ಕವನ ವಾಚನಮಾಡಿದ್ದು ಬಹು ದೊಡ್ಡ ಬೆಳವಣಿಗೆ ಎಂದು ನುಡಿದರು.

ಸಿರಿಗನ್ನಡ ವೇದಿಕೆ ಜಿಲ್ಲಾ ಅಧ್ಯಕ್ಷೆ ರಜನಿ ಜಿರಗಾಳ ಸಸಿಗೆ ನೀರೆರೆದು ಉದ್ಘಾಟಿಸಿ, ನಮ್ಮ ಅರಿವಿಗೆ ಬರದಂತೆ ಇಂಗ್ಲೀಷ ಬಳಕೆ ಹೆಚ್ಚುತ್ತಿದೆ. ಇದನ್ನು ಬಿಟ್ಟು ಸಮೃದ್ಧ ಕನ್ನಡ ಬಳಕೆ ಮಾಡಿಕೊಳ್ಳಬೇಕು ಎಂದು ಕರೆನೀಡಿದರು. ಹಿರಿಯ ಕವಯತ್ರಿ ಆಶಾ ಕಡಪಟ್ಟಿ ಆಶಯ ನುಡಿಗಳನ್ನಾಡಿ, ನಮ್ಮ ಭಾವಗಳನ್ನು ಅಕ್ಷರ ರೂಪದಲ್ಲಿ ಬಿತ್ತಿದ್ದೆ ಆದರೆ ಉತ್ತಮ ಸಾಹಿತ್ಯ ನಿಮರ್ಾಣವಾಗುತ್ತದೆ. ಹಳೇ ಬೇರು, ಹೊಸ ಚಿಗುರು ಎನ್ನುವಂತೆ ಹೊಸ ತಲೆಮಾರಿನ ಸಾಹಿತ್ಯ ಬೆಳವಣಿಗೆಗೆ ಪ್ರೇರಣೆ ನೀಡಬೇಕೆಂದರು. ಗಜಾನನ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅನುರಾಧಾ ದೇಶಪಾಂಡೆ ಮಕ್ಕಳ ಸಾಹಿತ್ಯ ನಿಮರ್ಾಣದತ್ತ ಗಮನ ಹರಿಸಿಬೇಕು ಹಾಗೂ ಓದುವ ರುಚಿ ಬೆಳೆಸಬೇಕು ಎಂದರು.

ಕಾವ್ಯ ಚಿಂತನೆಯಲ್ಲಿ ಡಾ.ಗುರುದೇವಿ ಹುಲೆಪ್ಪನವರಮಠ- ರೋಹಿಣಿ ಯಾದವಾಡರ ``ಜೀವಸೆಲೆ'' ಕವನ ಸಂಕಲನ ಕುರಿತು, ಹಮೀದಾಬೇಗಂ ದೇಸಾಯಿ- ಪ್ರಭಾ ಬೊರಗಾಂವಕರರ ``ನಿನ್ನೊಲವೊಂದೆ ಸಾಕೆಂದು'', ಸುನಂದಾ ಎಮ್ಮಿ-ಅಂಬುಜಾ ಮುರಜಾವದಮಠರ ``ಪಯಣ'', ಹಾಗೂ ಆಶಾ ಯಮಕರನಮರಡಿ -ಭಾರತಿ ಅಲಿಬಾದಿಯವರ '' ಅಕ್ಕನ ಹಂಬಲ'' ಕೃತಿಗಳ ಕುರಿತು ಮಾತನಾಡಿದರು.

ಕವಿಗೋಷ್ಠಿಯಲ್ಲಿ ಪ್ರಿಯಂವದಾ ಅಣೆಪ್ಪನವರ ಅವರ ``ಮಾರಮ್ಮನ ಪ್ರಸಾದ'', ವಿಶಾಲಾಕ್ಷಿ ಅಂಬಿಯವರ ``ಪ್ರಣತಿ'', ವಿದ್ಯಾ ಬುಲರ್ಿ ``ಕಟ್ಟೋಣ ಬನ್ನಿ'', ಮಹಾನಂದ ಪಾಟೀಲರ ``ಓ ಮಹಿಳೆ'', ಜಲಜಾ ದೇವಮಾನೆಯವರ ``ಏಕಾಂಗಿ'', ರೇಣುಕಾ ಗೌಡರ ಅವರ `` ಚಂದ್ರಬಿಂಬ'', ಅಂಕಿತಾ ಹಿರೇಮಠರ ಕವನಗಳು ಪ್ರೇಕ್ಷಕರ ಮನಸೂರೆಗೊಂಡವು. 

ಈ ಸಮಯದಲ್ಲಿ ಬೆಳಗಾವಿಯಿಂದ ಲೇಖಕಿಯರ ಸಂಘದ ರಾಜೇಶ್ವರಿ ಹಿರೇಮಠ, ಡಾ. ಬಸಮ್ಮ ಸಂಗದಳ್ಳಿ, ಇಂದಿರಾ ಮೊಟೆಬೆನ್ನೂರು ವಿಜಯಲಕ್ಷ್ಮಿ ಉಳ್ಳಾಗಡ್ಡಿ,  ಜಯಶೀಲಾ ಬ್ಯಾಕೋಡ, ಗೋಕಾಕದ ಸುನೀತಾ ಬನ್ನೂರೆ, ಸಾಹಿತಿಗಳಾದ ಶಿವಪುತ್ರ ಯಾದವಾಡ, ಅಪ್ಪಾಸಾಹೇಬ ಅಲಿಬಾದಿ. ಡಾ. ಆರ್ ಎಸ್ ದೊಡ್ಡನಿಂಗಪ್ಪಗೋಳ, ಡಾ.ಜೆ ಪಿ ದೊಡಮನಿ, ಮಲ್ಲಿಕಾಜರ್ುನ ಕನಶೆಟ್ಟಿ, ಎಸ್.ಕೆ ಹೊಳೆಪ್ಪನವರ, ಕೈಲಾಸ ಮದಭಾವಿ, ಶ್ರೀಶೈಲ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು. 

ಸುಮಾರು ನಾಲ್ಕು ಗಂಟೆಗಳ ಕಾಲ ಕಾವ್ಯ ಚಿಂತನ-ಕವಿಗೋಷ್ಠಿಯ ಸಾಹಿತ್ಯ ರಸದೌತಣ ಜನಮನವನ್ನು ಸೂರೆಗೊಂಡಿತು. ಮೀನಾಕ್ಷಿ ಸಾಳವೆ, ರಾಧಿಕಾ ಶೆಟ್ಟಿ ಪ್ರಾರ್ಥನೆ ಸ್ವಾಗತ ಗೀತೆ ಹಾಡಿದರು.  ಪ್ರಭಾ ಬೊರಗಾಂವಕರ ಸ್ವಾಗತಿಸಿದರು ರೋಹಿಣಿ ಯಾದವಾಡ ಪ್ರಸ್ತಾವಿಕ ಮಾತನಾಡಿ ಕವಿಗೋಷ್ಠಿ ನಡೆಸಿಕೊಟ್ಟರು. ಭಾರತಿ ಅಲಿಬಾದಿ ಪರಿಚಯಿಸಿದರು, ಮಂಜೂಷಾ ನಾಯಿಕ ವಂದಿಸಿದರು. ಜ್ಯೋತಿ ಶೆಟ್ಟಿ ನಿರೂಪಿಸಿದರು.