ಕ್ಷೇತ್ರ ಅಭಿವೃದ್ಧಿಯೆ ನಮ್ಮ ಮುಖ್ಯ ಗುರಿ: ಕುಮಠಳ್ಳಿ

ಅಥಣಿ 03: ಅಥಣಿ ಪಟ್ಟಣದ 20 ವಾರ್ಡಗಳಿಗೆ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಈ ಅನುದಾನ ಮೀಸಲಿಡಲಾಗಿದೆ.  ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಮಂಜೂರು ಮಾಡಿಸಿಕೊಂಡು ಅಭಿವೃದ್ಧಿ ಮತ್ತು ಜನಪರ ಕಾರ್ಯಗಳಿಗೆ ಚಾಲನೆ ನೀಡಲಾಗುವುದು. ಅಥಣಿ ಪಟ್ಟಣ ಹಾಗೂ ಮತಕ್ಷೇತ್ರದ ಅಭಿವೃದ್ಧಿಯೆ ನಮ್ಮ ಮುಖ್ಯ ಗುರಿಯಾಗಿದೆ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

ಸ್ಥಳೀಯ ಪುರಸಭೆಯ ಎಸ್.ಎಫ್.ಸಿ ವಿಶೇಷ ಯೋಜನೆಯಡಿಯಲ್ಲಿ ಮಂಜೂರಾದ 4 ಕೋಟಿ ರೂ ಗಳ ಅನುದಾನದಲ್ಲಿ ಅಥಣಿ ಪಟ್ಟಣ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

      ಪುರಸಭೆ ಅದ್ಯಕ್ಷ ರಾವಸಾಹೇಬ ಐಹೋಳೆ ಮಾತನಾಡಿ, 4 ಕೋಟಿ ಅನುದಾನದಲ್ಲಿ  ಮೂಲ ಭೂತ ಸೌಕರ್ಯಗಳಿಗೆ ಒತ್ತು ಕೊಡಲಾಗಿದೆ. ಪಟ್ಟಣದ ಹಲವು ವಾರ್ಡಗಳಲ್ಲಿ ರಸ್ತೆ ಹಾಗೂ ಚರಂಡಿ ಸಮಸ್ಯೆಯಿಂದ ಸಾರ್ವಜನಿಕರು ಬಳಲುತ್ತಿದ್ದರು. ಅಂತಹ ವಾರ್ಡಗಳಲ್ಲಿ ಈ ಅನುದಾನದಲ್ಲಿ ಎಷ್ಟು ಕೆಲಸ ಮಾಡಬಹುದೆಂದು ತಿಳಿದುಕೊಂಡು ಸುಮರು 20 ವಾರ್ಡಗಳಿಗೆ ಅನುದಾನವನ್ನು ಹಂಚಿದ್ದೇವೆ. ಶಾಸಕರು ಸಾಕಷ್ಟು ಅನುದಾನವನ್ನು ಸರಕಾರದಿಂದ ತಂದಿರುವುದಕ್ಕೆ ನಮಗೆ ಅಭಿವೃದ್ಧಿ ಮಡಲು ಅನುಕೂಲವಾಗಿದೆ ಎಂದರು.

       ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಸದಸ್ಯರಾದ ಸಲಾಂ ಕಲ್ಲಿ , ಶೀವು ಸಂಕ , ಶ್ರೀಶೈಲ ಹಳ್ಳದಮಳ, ಶೈಲಜಾ ಹಳ್ಳದಮಳ, ನಟರಾಜ ಹೀರೆಮಠ, ಸಿದ್ದಾರ್ಥ ಶಿಂಗೆ, ವೆಂಕಟೇಶ ಕೆ.ವಿ, ಅಸ್ಲಾಂ ನಾಲಬಂದ ಮುಂತಾದವರು ಭಾಗಿಯಾಗಿದ್ದರು.