ನೂತನ ಸಚಿವರನ್ನು ನೇಮಿಸುವಂತೆ ರೈತ ಸಂಘ ಒತ್ತಾಯ
ಕಂಪ್ಲಿ 02: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗೆ ಅನುಭವವಿರುವ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಭಾರತೀಯ ಕೃಷಿ ಕಾರ್ಮಿಕ ರೈತ ಸಂಘದ ಮಾಜಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸೈಯದ್ ಆಬೀದ್ ಭಾಷಾ ಖಾದ್ರಿ ಆಗ್ರಹಿಸಿದರು.ಪಟ್ಟಣದ ಅತಿಥಿ ಗೃಹದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಘಟನಾ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಮಾಡುತ್ತಿದೆ.
ಇದರಿಂದ ಇಲ್ಲಿನ ಅನ್ನದಾತರಿಗೆ ಅನ್ಯಾಯವಾಗಿದೆ. ಆದ್ದರಿಂದ ಕೂಡಲೇ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಮಾಡ ಬೇಕಾಗುತ್ತದೆ. ಮತ್ತು ವಿಜಯನಗರ ಜಿಲ್ಲೆಗೆ ಹೆಚ್.ಆರ್ ಗವಿಯಪ್ಪ ಸಚಿವರನ್ನು ರಾಜ್ಯ ಸರ್ಕಾರ ನೇಮಕ ಮಾಡಬೇಕು. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಗ್ರಹಣ ಹಿಡಿದಿದೆ. ಅವಳಿ ಜಿಲ್ಲೆಗೆ ಸಚಿವ ಜಮೀರ್ ಅಹ್ಮದ್ ಇದ್ದರೂ, ಇಲ್ಲದಂತಾಗಿದ್ದು, ಎರಡು ಜಿಲ್ಲೆಗಳ ಅಭಿವೃದ್ಧಿ ಕುಂಠಿತವಾಗುವ ಜತೆಗೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಂತಾಗಿದೆ. ಮತ್ತು ರೈತರ ಮತ್ತು ಜನರ ಕೈಗೆ ಸಿಗುತ್ತಿಲ್ಲ.
ಬಳ್ಳಾರಿ ಜಿಲ್ಲೆಗೆ ಶಾಸಕ ಗಣೇಶ, ಶಾಸಕಿ ಅನ್ನಪೂರ್ಣ ಈ.ತುಕಾರಾಂ ಇವರಲ್ಲಿ ಒಬ್ಬರಿಗೆ ಹಾಗೂ ವಿಜಯನಗರ ಜಿಲ್ಲೆಗೆ ಹಿರಿಯ ಶಾಸಕ ಗವಿಯಪ್ಪಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.ನಂತರ ಅಖಿಲ ಕ.ರಾಜ್ಯ ಕಿಸಾನ್ ಜಾಗೃತಿ ಸಂಘದ ಜಿಲ್ಲಾಧ್ಯಕ್ಷ ಬಿ.ಗಂಗಾಧರ ಮಾತನಾಡಿ, ಸಾಕಷ್ಟು ರೈತರು ರೇಷ್ಮೆ ಬೆಳೆ ಬೆಳೆಯುತ್ತಾ ಬಂದಿದ್ದು, ಆದರೆ, ಕೂಡ್ಲಿಗಿಯಲ್ಲಿ ಇಲಾಖೆ ಇರುವುದರಿಂದ ರೈತರಿಗೆ ತುಂಬ ಸಮಸ್ಯೆಯಾಗಿದೆ. ಸರ್ಕಾರದ ಯೋಜನೆಗಳು ರೇಷ್ಮೆ ರೈತರಿಗೆ ಸಮರ್ಕವಾಗಿ ದೊರಕುತ್ತಿಲ್ಲ. ಆದ್ದರಿಂದ ಕೂಡಲೇ ಕಂಪ್ಲಿಯಲ್ಲಿ ರೇಷ್ಮೆ ಇಲಾಖೆ ಕಛೇರಿ ತೆರೆಯಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ, ಯುವ ಘಟಕ ಅಧ್ಯಕ್ಷ ಕೆ.ಹರ್ಷಿತ್, ತಾಲೂಕು ಅಧ್ಯಕ್ಷ ಗುಬಾಜಿ ರಾಮಾಂಜಿನಿ, ಗೌರವಾಧ್ಯಕ್ಷ ಹನುಮಂತ, ಉಪಾಧ್ಯಕ್ಷರಾದ ಗಾದಿಲಿಂಗಪ್ಪ, ಮಲ್ಲಿಕ್, ಸದಸ್ಯರಾದ ಲಕ್ಷ್ಮಿರೆಡ್ಡಿ, ಶಿವಪ್ಪ, ಸಿದ್ದಪ್ಪ ಹಾಗೂ ರೈತ ಸಂಘದ ರಾಜ್ಯ ಕಾರ್ಯದರ್ಶಿ ಉಷಾ, ವಿಜಯನಗರ ಜಿಲ್ಲಾಧ್ಯಕ್ಷೆ ರತ್ನಮ್ಮ ಸುರೇಶ ಇದ್ದರು.
ಡಿ01ಪಟ್ಟಣದ ಅತಿಥಿ ಗೃಹದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಘಟನಾ ಸಭೆಯಲ್ಲಿ ಸೈಯದ್ ಆಬೀದ್ ಭಾಷಾ ಖಾದ್ರಿ ಮಾತನಾಡಿದರು