ಕೃಷಿಯೊಂದಿಗೆ ರೈತರು ಉಪಕಸಬು ಮಾಡಲು ಮುಂದಾಗಲಿ: ಯಾದವಾಡ

ತಾಲೂಕಿನ ಹಣಮಸಾಗರ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಿಗೆ ಬೋನಸ್ ಹಾಗೂ ಹಾಲಿನ ಕ್ಯಾ

ರಾಮದುರ್ಗ 28: ಕೃಷಿಯೊಂದಿಗೆ ರೈತರು ಉಪಕಸಬಾಗಿ ಹೈನುಗಾರಿಕೆ ಮಾಡುವುದರಿಂದ ಕೃಷಿ ಚಟುವಟಿಕೆಯಲ್ಲಿ ನಷ್ಠ ಉಂಟಾದಲ್ಲಿ ಹೈನುಗಾರಿಕೆಯಿಂದ ದೊರೆತ ಆದಾಯದಿಂದ ಆಥರ್ಿಕ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ತಾಲೂಕಿನ ಹಣಮಸಾಗರ ಹಾಲು ಉತ್ಪಾದಕರ ಸಹಕಾರಿ ಸಂಘ ನಿ. ಹಣಮಸಾಗರದ ಸದಸ್ಯರಿಗೆ ಬೋನಸ್ ಹಾಗೂ ಹಾಲಿನ ಕ್ಯಾನ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಕಾಲಕ್ಕೆ ಮಳೆಯಾಗದೇ ರೈತರು ಸಂಕಷ್ಟದ ಸುಳಿಗೆ ಸಿಲುಕುವಂತಾಗಿದ್ದು, ಹೈನುಗಾರಿಕೆ ಮಾಡಿಕೊಂಡಲ್ಲಿ ಕುಟುಂಬದ ನಿರ್ವಹಣೆ ಸುಲಭವಾಗಿ ರೈತ ಆತ್ಮಹತ್ಯೆಯಂತಹ ಅನಾಹುತಗಳನ್ನು ತಡೆಯಲು ಸಾಧ್ಯವಿದೆ. ಮೊದಲು ಉಪ ಕಸಬಾಗಿದ್ದ ಹೈನುಗಾರಿಕೆಯನ್ನು ಕೆಲವರು ವೃತ್ತಿಯನ್ನಾಗಿಸಿಕೊಂಡು ಸಾಧನೆ ಮಾಡಿದ ಉದಾಹರಣೆಗಳಿವೆ. ರೈತರು ಕೃಷಿಯೊಂದಿಗೆ ಹೈನುಗಾರಿಕೆಯಂತಹ ವಿವಿಧ ಉಪ ಕಸಬು ಮಾಡಿದಲ್ಲಿ ನೆಮ್ಮದಿಯ ಜೀವನ ನಡೆಸಬಹುದು ಎಂದರು.

ಜಿ.ಪಂ ಸದಸ್ಯ ಮಾರುತಿ ತುಪ್ಪದ ಮಾತನಾಡಿ, ಕಳೆದ 25 ವರ್ಷಗಳಿಂದ ಹಣಮಸಾಗರ ಹಾಲು ಉತ್ಪಾದಕರ ಸಂಘ ಕಾರ್ಯನಿರ್ವಹಿಸುತ್ತಿದ್ದು, ಗುಣಮಟ್ಟದ ಹಾಲು ಸಂಗ್ರಹಣೆ ಮಾಡಿ, ನಿಗಮಕ್ಕೆ ಸರಬರಾಜು ಮಾಡುತ್ತಿದೆ. ಸುತ್ತಮತ್ತಲಿನ ಪ್ರದೇಶಗಳಲ್ಲಿ ಸಭೆ ಸಮಾರಂಭಗಳು ನಡೆದಲ್ಲಿ ಹಣಮಸಾಗರ ಹಾಲು ಉತ್ಪಾದಕರ ಸಂಘದಿಂದ ಸರಬರಾಜು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಬೆಳಗಾವಿ ಹಾಲು ಒಕ್ಕೂಟದ ವ್ಯವಸ್ಥಾಪಕ ಜೆ. ಆರ್. ಮಣ್ಣೇರಿ ಮಾತನಾಡಿ, ಹೈನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಂಸ್ಥೆಯ ವತಿಯಿಂದ ಪಶುಗಳಿಗೆ ಆಹಾರ ವಿತರಣೆ ಸೇರಿದಂತೆ ಸಂಘದ ಸದಸ್ಯರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.

ಹಲರ್ಾಪೂರ ಢವಳೇಶ್ವರ ಮಠದ ರೇಣುಕ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹಣಮಸಾಗರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ತುಪ್ಪದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರು ಕೆ.ಎಂ.ಎಫ್ ನಿದರ್ೇಶಕ ಉದಯಸಿಂಹ ಶಿಂಧೆ, ಧನಲಕ್ಷ್ಮೀ ಸಕ್ಕರೆ ಕಾಖರ್ಾನೆಯ ಉಪಾಧ್ಯಕ್ಷ ಜಿ.ಜಿ. ಪಾಟೀಲ, ತಾ.ಪಂ ಸದಸ್ಯ ಬಿ. ಬಿ. ವಡೆಕನವರ, ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀ ಹಗೇದ, ಬೆಳಗಾವಿ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ವ್ಹಿ. ಕೆ. ಜೋಶಿ, ಸಹಾಯಕ ವ್ಯವಸ್ಥಾಪಕ ಪ್ರವೀಣ ಹುಡೇದ, ವಿಸ್ತೀಣರ್ಾಧಿಕಾರಿ ಶಂಕರಗೌಡ ಪಾಟೀಲ, ಸಂಜೀವ ತಳವಾರ, ಪಶು ವೈದ್ಯಾಧಿಕಾರಿ ಡಾ. ಡಿ. ಎನ್. ಜೋಶಿ ಹಾಲು ಒಕ್ಕೂಟದ ಸದಸ್ಯರಾದ ಜಿ. ಬಿ. ಹೊನ್ನಿಕೊಳ್ಳ, ನಿಂಗಪ್ಪ ಮೈಲಾರಿ, ಮಾರುತಿ ಪೂಜೇರ, ವೈ. ಬಿ. ಪೂಜೇರ ಸೇರಿದಂತೆ ಇತರರಿದ್ದರು.