ಲೋಕದರ್ಶನ ವರದಿ
ಯಲಬುಗರ್ಾ 25: ರೈತರು ನಿಮ್ಮ ನಿಮ್ಮ ಜಮಿನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ನೀರನ್ನು ನಿಮ್ಮ ಹೋಲದಲ್ಲಿಯೇ ತಡೆಯಿಡಿಯಬೇಕು ಇದರಿಂದ ನಿಮ್ಮ ಹೋಲಗಳಲ್ಲಿ ಅಂತರ್ಜಲ ಹೆಚ್ಚಾಗುತ್ತದೆ ಎಂದು ಕೃಷಿ ಇಲಾಖೆಯ ತಾಲೂಕ ಸಹಾಯಕ ನಿರ್ದೇ ಶಕ ಶರಣಪ್ಪ ಗುಂಗಾಡಿ ಹೇಳಿದರು.
ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯತ ಆವರಣದಲ್ಲಿ ಕೃಷಿ ಇಲಾಖೆ, ತಾಪಂ, ಕೃಷಿ ವಿಶ್ವ ವಿದ್ಯಾಲಯ ಹಾಗೂ ಸುಧಾರಣಾ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸಹಯೋಗದಲ್ಲಿ ನಡೆದ ಜಲಶಕ್ತಿ ಅಭಿಯಾನದ ವಿಶೇಷ ಗ್ರಾಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೀರು ನಿಮ್ಮಲ್ಲಿಯೇ ಲಭ್ಯವಿದ್ದರೆ ಮಳೆಯನ್ನು ಆಶ್ರಯಿಸದೆ ಸುಲಭವಾಗಿ ಮತ್ತು ಮುಂಗಾರು ಮತ್ತು ಇಂಗಾರುಗಳಲ್ಲಿ ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡಲು ಅನುಕೂಲವಾಗುತ್ತದೆ ಇಂದು ಪ್ರತಿಯೊಬ್ಬರು ನೀರಿನ ಮಹತ್ವ ತಿಳಿಯುವ ಅವಶ್ಯಕತೆ ತುಂಬಾ ಇದೆ ಯಾಕೆಂದರೆ ಇಂದೆ ನೀರನ್ನು ಹಣ ಕೊಟ್ಟು ಕೊಂಡುಕೊಳ್ಳುವ ಪರಸ್ಥಿತಿ ಬಂದಿದೆ ಮುಂದಿನ ದಿನಗಳಲ್ಲಿ ನೀರಿಗಾಗಿ ಪರಿತಪಿಸುವಂತಹ ಕಾಲ ದೂರವಿಲ್ಲಾ ಅದನ್ನು ಅರಿತುಕೊಂಡು ಎಲ್ಲರೂ ನೀರಿನ ಸಂರಕ್ಷಣೆಗೆ ಮುಂದಾಗಬೇಕು ಮತ್ತು ರಾಸಾಯನಿಕ ಗೊಬ್ಬರಗಳ ಉಪಯೋಗವನ್ನು ರೈತರು ಕಡಿಮೆ ಮಾಡಬೇಕು ಇದರಿಂದ ಮಣ್ಣಿನ ಫಲವತ್ತತೆ ಅತ್ಯಂತ ಕಡಿಮೆಯಾಗುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಭೀಮಣ್ಣ ಹವಳಿ, ಈರಣ್ಣ ತೋಟದ ಕೃಷಿ ಅಧಿಕಾರಿ ಪ್ರಶಾಂತಗೌಡ, ಗ್ರಾಪಂ ಸದಸ್ಯರಾದ ಹಂಪನಗೌಡ ಹಿರೇಮಠ, ರುದ್ರಪ್ಪ ಛಲವಾದಿ ಮಾತನಾಡಿದರು,
ಈ ಸಂದರ್ಭದಲ್ಲಿ ಗ್ರಾಪಂ ಅದ್ಯಕ್ಷೆ ವೀಜಯಲಕ್ಷ್ಮೀ ಆಡಿನ್ ಅದ್ಯಕ್ಷತೆವಹಿಸಿದ್ದರು, ಪಿಡಿಓ ಚನ್ನಬವನಗೌಡ ಪೋಲಿಸ್ ಪಾಟೀಲ, ಸೇರಿದಂತೆ ಗ್ರಾಪಂ ಸದಸ್ಯರು ಮಹಿಳಾ ಸಂಘದ ಸದಸ್ಯರು ರೈತರು ಸಾರ್ವಜನಿಕರು ಹಾಜರಿದ್ದರು.