ರೈತಬಾಂಧವರ ರಾಸ್ತಾ ರೋಖೋ

ಲೋಕದರ್ಶನ ವರದಿ

ಮಹಾಲಿಂಗಪುರ: ದಿ.17 ಮಹಾಲಿಂಗಪುರದಲ್ಲಿ ಕಬ್ಬು ಬೆಳೆಗಾರರ ಸಂಘ, ರೈತ ಸಂಘ, ಹಸಿರು ಸೇನೆ, ನೇಕಾರರ ಸಂಘ, ಕನರ್ಾಟಕ ರಕ್ಷಣಾ ವೇದಿಕೆ ಇವುಗಳ ಸಹಯೋಗದಲ್ಲಿ ತಮ್ಮ ಬೇಡಿಕೆಗಳಿಗೆ ರಾಸ್ತಾ ರೋಖೋ ನಡೆಸಲಾಯಿತು. 

ಮಹಾಲಿಂಗಪುರ ನಗರದಾದ್ಯಂತ ಎಲ್ಲ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ರೈತರಿಗೆ ಬೆಂಬಲವನ್ನು ಸೂಚಿಸಿದರು. ಇಡೀ ದಿವಸ ಕೆ.ಎಸ್.ಆರ್.ಟಿ.ಸಿ. ಬಸ್ಗಳು, ಖಾಸಗಿ ವಾಹನಗಳು, ದ್ವಿಚಕ್ರ ವಾಹನಗಳಿಗೂ ಸಹ ಸಂಚರಿಸಲು ರೈತ ಬಾಂಧವರು ತಡೆವೊಡ್ಡಿ ಜಿಲ್ಲಾಡಳಿತಕ್ಕೆ ಹಾಗೂ ತಾಲೂಕಾಡಳಿತಕ್ಕೆ ಮತ್ತು ಸರಕಾರಕ್ಕೆ ಬಿಸಿ ಮುಟ್ಟಿಸಿದರು. ಪ್ರಖರವಾದ ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ಪ್ರತಿಭಟನೆಯಲ್ಲಿ ಅಸಂಖ್ಯ ರೈತರು ತಾಲೂಕಿನಾದ್ಯಂತ ಬಂದು ಪಾಲ್ಗೊಂಡಿದ್ದರು.

30-40 ದಿವಸಗಳಿಂದ ಜಿಲ್ಲೆಯ ರೈತ ಬಾಂಧವರು ಪ್ರತಿಭಟನೆಯನ್ನು ನಡೆಸಿಕೊಂಡು ಬಂದಿದ್ದಾರೆ. ಬಾಗಲಕೋಟ ಜಿಲ್ಲೆಯಾದ್ಯಂತ ಮಳೆಯ ಕೊರತೆಯಾಗಿ ಈಗಾಗಲೇ ಹಲವಾರು ಫಸಲುಗಳು ಹಾಳಾಗಿವೆ. ಇದರಿಂದ ರೈತ ಕಂಗಾಲಾಗಿದ್ದಾನೆ. ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ 3-4 ಸುತ್ತಿನ ಮಾತುಕತೆ ನಡೆದರೂ ಸಹ ಯಾವುದೇ ಇತ್ಯರ್ಥಕ್ಕೆ ಬಾರದೆ ನೆನೆಗುದಿಗೆ ಬಿದ್ದಿದೆ. ಇದರಿಂದ ಕೃಷಿ ಕಾಮರ್ಿಕರು ಬೀದಿಗೆ ಬೀಳುವಂತಾಗಿ ನಮ್ಮನ್ನು ಯಾರೂ ಸಹ ವಿಚಾರ ಮಾಡದೇ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಇತ್ತ ಸಂಸದರು ಹಾಗೂ ಕ್ಷೇತ್ರದ ಶಾಸಕರೂ ಸಹ ನಮ್ಮ ಕಡೆಗೆ ಗಮನ ಹರಿಸಿಲ್ಲ ಎಂದು ಅಳಲು ತೋಡಿಕೊಂಡರು. 

ದಕ್ಷಿಣ ಭಾರತ ಖಾಸಗಿ ಸಕ್ಕರೆ ಕಾಖರ್ಾನೆಗಳ ಮಾಲೀಕರ ಸಂಘ (ಸಿಸ್ಮಾ) ದವರು ಪ್ರತಿ ಟನ್ ಕಬ್ಬಿಗೆ 2500 ರೂ. ಕೊಡುತ್ತೇವೆ ಎಂದು ಪತ್ರಿಕೆಗಳಲ್ಲಿಯೂ ಕೂಡಾ ಹಾಗೂ ಜಾಹೀರಾತುಗಳನ್ನು ಕೊಟ್ಟಿದ್ದರೂ ಸಹ ಮುಂದಿನ ದಿನಮಾನಗಳಲ್ಲಿ ಯಾವುದೇ ಪ್ರಯೋಜನವಾಗದೆ ಕಾಗದದ ಹೇಳಿಕೆಯಾಯಿತು.

2017-18 ನೇ ಸಾಲಿನ ಸಕ್ಕರೆ ಕಾಖರ್ಾನೆಯ ಮಾಲೀಕರು ಮೊದಲ ಕಂತಿನ ಹಣ 2,900 ಹಾಗೂ 3,100 ರೂ.ಗಳನ್ನು ಕೊಟ್ಟು ಕಾಖರ್ಾನೆಯನ್ನು ಪ್ರಾರಂಭಿಸುತ್ತೇವೆ ಎಂದು ವಾಗ್ದಾನ ನೀಡಿದ್ದರು. ಆದರೆ ಇದರಲ್ಲಿ ಡಿಸೆಂಬರ್ 31 ರವರೆಗೆ ಮಾತ್ರ 2900, 2700 ಹಾಗೂ 2500 ಮೊದಲ ಕಂತಿನ ಹಣವನ್ನು ಪಾವತಿಸಿದರು. ನಂತರ ಜನೇವರಿ 1, 2018 ರಿಂದ ಪೂರೈಸಿದ ಕಬ್ಬಿಗೆ ಕೇವಲ 2000 ರೂ.ಗಳನ್ನು ಮೊದಲ ಹಂತದ ಹಣವನ್ನು ಕೂಡಾ 5-6 ತಿಂಗಳ ನಂತರ ನೀಡಿದ್ದಾರೆ. ಇದರಲ್ಲಿ ರೈತರಿಗೆ ಬಹುದೊಡ್ಡ ವಂಚನೆ ನಡೆದಿದೆ ಎಂದು ಜಿಲ್ಲಾ ಅಧ್ಯಕ್ಷ ಬಸವಂತ ಕಾಳೆ ತಮ್ಮ ಅಳಲನ್ನು ತೋಡಿಕೊಂಡು ಇದೇ ರೀತಿ ತಾರತಮ್ಯ ಧೋರಣೆ ಮುಂದುವರಿದಿದ್ದೆ ಆದರೆ ಮುಂದಿನ ಉಗ್ರ ಹೋರಾಟಕ್ಕೆ ನಾವು ರೈತರಿಗೆ ಕರೆ ಕೊಡಬೇಕಾಗುತ್ತದೆ ಎಂದರು.

ಪ್ರತಿಭಟನಾಕಾರರು ಪಟ್ಟುಹಿಡಿದ ಕಾರಣ ಸ್ಥಳಕ್ಕೆ ಆಗಮಿಸಿದ ಮುಧೋಳ ತಹಸೀಲ್ದಾರ ಡಿ.ಜಿ. ಮಹಾತ್ ಅವರು ನಮಗೆ ಸರಕಾರದಿಂದ ಯಾವುದೇ ಆದೇಶವಿರುವುದಿಲ್ಲವೆಂದು ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿ ಹೋದರು.

ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಅಧ್ಯಕ್ಷ ರಂಗನಗೌಡ ಪಾಟೀಲ, ರೈತ ಸಂಘದ ರಾಜ್ಯ ಸಂಚಾಲಕ ಗಂಗಾಧರ ಮೇಟಿ, ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ, ರೈತ ಸಂಘದ ತಾಲೂಕಾ ಕಾರ್ಯದಶರ್ಿ ಸಿದ್ದು ಉಳ್ಳಾಗಡ್ಡಿ, ರೈತ ಮುಖಂಡ ಬಂದು ಪಕಾಲಿ, ರಮೇಶ ಭಾವಿಕಟ್ಟಿ, ಅಜರ್ುನ ಬಂಡಿವಡ್ಡರ, ಶಿವಾನಂದ ಟಿರಕಿ, ರಮೇಶ ಅಂಗಡಿ, ಲಕ್ಷ್ಮಣ ಹುಚ್ಚರಡ್ಡಿ, ಕೆ. ಟಿ. ಸಾರವಾಡ, ರಾಮಕೃಷ್ಣ ಬುದ್ನಿ ಹಾಗೂ ಹಲವಾರು ರೈತ ಮುಖಂಡರು ಪಾಲ್ಗೊಂಡಿದ್ದರು.