ಬುಲ್ವಾಯೋ 20: ಇಲ್ಲಿನ ಕ್ವೀನ್ಸ್ ಸ್ಪೋಟ್ರ್ಸ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವೆ ನಡೆಯುತ್ತಿರುವ ಪಂದ್ಯ ಹಲವು ವಿಶ್ವ ದಾಖಲೆಗಳಿಗೆ ಸಾಕ್ಷಿಯಾಗುತ್ತಿದೆ. ಇಂದಿನ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕ ಆಟಗಾರ ಫಕರ್ ಝಮಾನ್ ಏಕದಿನದಲ್ಲಿ ದ್ವಿಶತಕ ದಾಖಲಿಸುವ ಮೂಲಕ ಪಾಕಿಸ್ತಾನದ ಪರ ವೈಯಕ್ತಿಕ ದಾಖಲೆ ಬರೆದುಕೊಂಡಿದ್ದಾರೆ.
ಪಾಕಿಸ್ತಾನದ ಪರವಾಗಿ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ದಾಖಲಿಸಿದ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಜಿಂಬಾಬ್ವೆ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿದ ಫಕರ್ ಕೊನೆಯವರೆಗೂ ಅಜೇಯರಾಗಿಯೇ ಉಳಿದರು. ಬರೋಬ್ಬರಿ 156 ಎಸೆತಗಳನ್ನು ಎದುರಿಸಿದ ಫಕರ್ ಝಮಾನ್ 5 ಸಿಕ್ಸರ್ ಹಾಗೂ 24 ಬೌಂಡರಿಗಳ ಮೂಲಕ 210 ರನ್ಗಳನ್ನು ಕಲೆಹಾಕಿದರು.
ಇದು ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ ಆಟಗಾರನೊಬ್ಬ ಗಳಿಸಿದ ಗರಿಷ್ಠ ಮೊತ್ತವಾಗಿದೆ. ಇದಕ್ಕೂ ಮೊದಲು ಪಾಕಿಸ್ತಾನದ ಸಯೀದ್ ಅನ್ವರ್ ಭಾರತದ ವಿರುದ್ಧ 194 ರನ್ಗಳನ್ನು ದಾಖಲಿಸಿದ್ದೇ ಪಾಕಿಸ್ತಾನದ ಪರ ಗರಿಷ್ಠ ಮೊತ್ತವಾಗಿತ್ತು. ವಿಶೇಷ ಎಂದರೆ ಸಯೀದ್ ಅನ್ವರ್ ಭಾರತ ತಂಡದ ವಿರುದ್ಧ ಇಷ್ಟೊಂದು ಮೊತ್ತ ದಾಖಲಿಸಿ ಅಂದು ವಿಶ್ವದಾಖಲೆ ಮಾಡಿದ್ದರು.
ಭಾರತದ ರೋಹಿತ್ ಶಮರ್ಾ ದಾಖಲಿಸಿದ 264 ರನ್ಗಳು ಏಕದಿನ ಕ್ರಿಕೆಟ್ನಲ್ಲಿ ಆಟಗಾರನೊಬ್ಬ ವೈಯಕ್ತಿಕವಾಗಿ ಗಳಿಸಿದ ಗರಿಷ್ಠ ಮೊತ್ತವಾಗಿದೆ.