ಲೋಕದರ್ಶನ ವರದಿ
ಧಾರವಾಡ 24: ಮುಂಚೂಣಿಯ ರೇಸಿಂಗ್ ಬೈಕುಗಳ ಬ್ರಾಂಡ್ಕೆಟಿಎಂ ನಗರದಲಿ ಭಾನುವಾರ ರೋಮಾಂಚಕ ಬೈಕ್ ಸಾಹಸ ಪ್ರದರ್ಶನವನ್ನು ಆಯೋಜಿಸಿತ್ತು. ಚೆನ್ನೈಯಿಂದ ಆಗಮಿಸಿದ್ದ ವೃತ್ತಿಪರ ಸಾಹಸಿ ಬೈಕ್ಚಾಲಕರು ಮೈನವಿರೇಳಿಸುವಂತೆ ಬೈಕ್ ಸಾಹಸ ಮತ್ತು ಟ್ರಿಕ್ಗಳನ್ನು ಪ್ರದಶರ್ಿಸಿದರು.
ನಗರದಬಾಸೆಲ್ ಮಿಷನ್ ಸ್ಕೂಲ್ ಆವರಣದಲ್ಲಿ ನಡೆದ ಈ ಸಾಹಸ ಪ್ರದರ್ಶನಕ್ಕೆ ನೂರಾರು ಜನರು ಸಾಕ್ಷಿಯಾದರು. ಪ್ರೇಕ್ಷಕರು ಉಸಿರು ಬಿಗಿಹಿಡಿಯುವಂತೆ ಕೆಟಿಎಂಡ್ಯೂಕ್ ಬೈಕ್ಗಳಲ್ಲಿ ಚಾಲಕರು ಸಾಹಸಗಳನ್ನು ಸಾದರಪಡಿಸಿದರು.
ಕೆಟಿಎಂ ಬೈಕ್ ಸಾಹಸ ನೋಡಲು ಸಾರ್ವಜನಿಕರಿಗೆ ಮುಕ್ತವಾಗಿತ್ತು. ಪ್ರದರ್ಶನದಲ್ಲಿ ಬಳಸಿದ ಕೆಟಿಎಂ ಬೈಕ್ಗಳು ಪಿಬಿರಸ್ತೆಯ ಪಾಟೀಲ್ಕಟ್ಟಡದಲ್ಲಿರುವಕೆಟಿಎಂ ಮಳಿಗೆಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಕೆಟಿಎಂ ಬ್ರಾಂಡ್ಅಧಿಕ ಸಾಮಥ್ರ್ಯದ ರೇಸಿಂಗ್ ಬೈಕ್ಗಳಿಗೆ ಹೆಸರಾಗಿದೆ. ಕೆಟಿಎಂ ಬೈಕ್ಗಳು ಚಾಲಕರಿಗೆ ಯಾವ ರೀತಿಯ ರೋಮಾಂಚಕ ಅನುಭವ ನೀಡಬಹುದು ಎನ್ನುವುದನ್ನು ಇಂಥ ಪ್ರದರ್ಶನದ ಮೂಲಕ ಸಾಬೀತುಪಡಿಸಲಾಗುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ವೃತ್ತಿಪರ ಸಾಹಸಿ ಸವಾರರು ಈ ಪ್ರದರ್ಶನ ನೀಡುತ್ತಿದ್ದಾರೆ ಎಂದು ಬಜಾಜ್ಆಟೋ ಲಿಮಿಟೆಡ್ನ ಪ್ರೊಬೈಕಿಂಗ್ ವಿಭಾಗದ ಅಧ್ಯಕ್ಷರಾದ ಅಮಿತ್ ನಂದಿ ತಿಳಿಸಿದರು.