'ಪ್ರತಿಯೊಬ್ಬರು ತಾನು ಮಾಡುವ ವೃತ್ತಿ ಪ್ರೀತಿಸಬೇಕು'


ಲೋಕದರ್ಶನ ವರದಿ

ಮಾಂಜರಿ 20: ಇಂದಿನ ಕಂಪ್ಯೂಟರ ಯುಗದಲ್ಲಿ ಪ್ರತಿಯೊಬ್ಬರು ತಾನು ಮಾಡುವ ವೃತ್ತಿಯನ್ನು ಪ್ರೀತಿಸಬೇಕು ಮತ್ತು ಭಕ್ತಿಯಿರಬೇಕು ಎಂದು ಬೆಳಗಾವಿಯ ಸುಪರಿಡೆಂಟ್ ಇಂಜನಿಯರ ಬಿ.ಡಿ. ನಸಲಾಪೂರೆ ಹೇಳಿದರು.

ಅವರು ಚಿಕ್ಕೋಢಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಗೋಮಟೇಶ ಶಿಕ್ಷಣ ಸಂಸ್ಥೆಯ ವತಿಯಿಂದ ಎರ್ಪಡಿಸಿದ ಗೋಮ್ಮಟೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ವೈಧ್ಯರಾದವರು ಮೊದಲು ಸೇವೆಗೆ ಆದ್ಯತೆ ನೀಡಬೇಕು, ಮಾಡುವ ವೃತ್ತಿಯಲ್ಲಿ ಶೃದ್ಧೆಯನ್ನಿಡಬೇಕು, ರೋಗಿಗಳಿಗೆ ಮರುಬದುಕನ್ನು ಕೊಡುವ ವೃತ್ತಿ ದಾದಿಯರದ್ದು, ದಾದಿ(ನರ್ಸ)ಗಳು ಮಾಡುವ ಕೆಲಸ ಪುಣ್ಯದ ಕೆಲಸ ಎಂದ ಅವರು ಪ್ರತಿಯೊಬ್ಬರಿಗೂ ಸಮಯ ಪ್ರಜ್ಞೆ ಬೇಕು, ದುಡ್ಡುಕೊಟ್ಟರೆ ಸಮಯ ಸಿಗುವುದಿಲ್ಲಾ, ಸಮಯದ ಸದ್ಬಳಕೆ ಮಾಡಿಕೊಳ್ಳಬೇಕು, ಪ್ರತಿಯೊಬ್ಬರಿಗೆ ಇಂದು ಮೋಬಾಯಿಲ್ ವ್ಯಾಮೋಹ ಹೆಚ್ಚಿದೆ, ಅದನ್ನು ಬದಿಗೊತ್ತಿ ಅವಶ್ಯಕತೆ ಬಿದ್ದಾಗ ಬಳಸಿ ಎಂದು ಹೇಳಿದರು.

ಬೆಳಗಾವಿಯ ಬಿಮ್ಸ ಕಾಲೇಜಿನ ಪ್ರಾಚಾಯರ್ೆ ಪದ್ಮಾವತಿ ಬಡಿಗೇರ ಮಾತನಾಡಿ ದಾದಿಯರ ಸೇವೆ ಪ್ರಾಮಾಣಿಕ ಮತ್ತು ತ್ಯಾಗಮಯವಾದದ್ದು, ಬದುಕಿನಲ್ಲಿ ಬೆಳಕನ್ನು ನೀಡುವ ಕೆಲಸ ಮಾಡುತ್ತಾರೆ, ದಾದಿಯರು ರೋಗಿಗಳನ್ನು ಮೃದುವಾಗಿ ಮತ್ತು ನಗುಮುಖವಾಗಿ ಮಾತನಾಡಿಸಬೇಕು, ನೀವು ಮೃದುವಾಗಿ ಮತ್ತು ನಗುಮುಖವಾಗಿ ಮಾತನಾಡಿದ್ದಲ್ಲಿ ಗೋಗಿಗಳ ಅರ್ಧ ಕಾಯಿಲೆ ಕಡಿಮೆಯಾಗುತ್ತದೆ ಎಂದರು. ಎಲ್.ಎನ್, ಮಗದುಮ್ಮ ,ಡಾ.ಎನ್.ಎ.ಮಗದುಮ್ಮ ಮುಂತಾದವರು ಮಾತನಾಡಿದರು.

ಸುರೇಶ ಚೌಗುಲಾ ಅಧ್ಯಕ್ಷತೆ ವಹಿಸಿದ್ದರು, ಜಿಪಂ ಸದಸ್ಯೆ ವಿಲಾಸಮತಿ ಪಾಟೀಲ, ತಾಪಂ ಸದಸ್ಯ ಸಿ.ಕೆ.ಪಾಟೀಲ, ಬಿ.ಆರ್.ಸಂಗಪ್ಪಗೊಳ, ಮುಂತಾದವರು ವೇದಿಕೆ ಮೇಲಿದ್ದರು.

ವ್ಹಿ.ಎ.ಜಾಧವ ಸ್ವಾಗತಿಸಿದರು. ಪ್ರೀತಿ ಮತ್ತು ತಮದಡ್ಡಿ ನಿರೂಪಿಸಿದರು, ಸುನೀತಾ ಕುಂಬಾರ ಒಂದಿಸಿದರು. ನಂತರ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಡಾ. ಬಸವರಾಜ ಗಂಟಿ, ಆರ್,ವ್ಹಿ.ಪಕ್ಕನ್ನವರ, ಎನ್.ಎಸ್.ನಿಡಗುಂದೆ  ಸೇರಿದಂತೆ ವೈದ್ಯರು, ಗ್ರಾಮಸ್ಥರು, ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.

***