ಲೋಕದರ್ಶನ ವರದಿ
ಕಾರವಾರ: ಕೈಗಾದ 5 ಮತ್ತು 6 ನೇ ಘಟಕಗಳ ಸ್ಥಾಪನೆ ಸಂಬಂಧ ಸಾರ್ವಜನಿಕ ಅಹವಾಲು ಸಭೆಯನ್ನು ಕೈಗಾ ಟೌನ್ಶಿಪ್ ಇರುವ ಮಲ್ಲಾಪುರದಲ್ಲಿ ಶನಿವಾರ ಏರ್ಪಡಿಸಲಾಗಿದೆ. ಕೈಗಾ ಅಣುವಿದ್ಯುತ್ ಕೇಂದ್ರ ಹಾಗೂ ಜಿಲ್ಲಾಡಳಿತದ ವತಿಯಿಂದ ಸಾರ್ವಜನಿಕ ಅಹವಾಲು ಸಭೆ ಕರೆದಿದ್ದು, ಈಗಾಗಲೇ ಘಟಕಗಳ ಸ್ಥಾಪನೆ ಸಂಬಂಧಿಸಿದಂತೆ ಪರ-ವಿರುದ್ಧ ನಿಲುವುಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಅಹವಾಲು ಆಲಿಕೆ ಸಭೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ.
ತಲಾ 700 ಮೇ.ವ್ಯಾ. ಸಾಮಥ್ರ್ಯದ ಅಣು ವಿದ್ಯುತ್ ಘಟಕಗಳ ಸ್ಥಾಪನೆಗೆ ಈಗಾಗಲೇ ಕೇಂದ್ರ ಸಕರ್ಾರದ ಸಚಿವ ಸಂಪುಟ ಮಂಜೂರಾತಿ ನೀಡಿದೆ. ಎನ್ಪಿಸಿಎಲ್ ವತಿಯಿಂದ ಸಾಕಷ್ಟು ಪೂರ್ವಭಾವಿ ಸಿದ್ಧತೆಗಳನ್ನು ನಡೆಸಲಾಗಿದೆ. 1400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಲ್ಲಿ ಕನರ್ಾಟಕಕ್ಕೆ ಶೇ.50 ರಷ್ಟು ಪಾಲು ಅಂದರೆ 700 ಮೆಗಾ ವ್ಯಾಟ್ ವಿದ್ಯುತ್ ದಕ್ಕಲಿದೆ. 21 ಸಾವಿರ ಕೋಟಿ ವೆಚ್ಚದ ಈ ಯೋಜನೆ 2020 ರಿಂದ ಪ್ರಾರಂಭವಾಗಿ 2025ರಲ್ಲಿ ಮುಗಿಯಲಿದೆ. 2026ರಲ್ಲಿ ಅಣು ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ. 4000 ಜನರಿಗೆ ಘಟಕ ನಿಮರ್ಾಣ ಹಂತದಲ್ಲಿ ಉದ್ಯೋಗ ದೊರೆತರೆ, ಪೂರ್ಣವಾದ ನಂತರ 786 ಜನರಿಗೆ ಉದ್ಯೋಗ ಸಿಗಲಿದೆ ಎಂದು ಕೈಗಾ ವಿಜ್ಞಾನಿಗಳ, ಸ್ಥಾನಿಕ ನಿದರ್ೇಶಕರ ಹೇಳಿಕೆ.
ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿ ಸಹ ಸಿಕ್ಕಿದ್ದು,ಬೆಂಗಳೂರಿನ ಮೆಕಾನ್ ಸಂಸ್ಥೆಯು ಪರಿಸರ ಧಾರಣ ಸಾಮಥ್ರ್ಯದ ಬಗ್ಗೆ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಟಾಟಾ ಮೆಮೋರಿಯಲ್ ಕ್ಯಾನ್ಸರ್ ಸಂಶೋಧನಾ ಆಸ್ಪತ್ರೆಯು ಕೂಡ ಕೈಗಾ ಅಣುಸ್ಥಾವರದಿಂದ ಕ್ಯಾನ್ಸರ್ ಬರಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದೆ. ಹೀಗಾಗಿ ಮುಂದಿನ 2020 ರ ವೇಳೆಗೆ ಕೈಗಾ ಘಟಕ 5 ಮತ್ತು 6 ನಿಮರ್ಾಣ ಕಾರ್ಯ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಯೋಜನೆ ಬಗೆಗಿನ ಸಂಶಯ ನಿವಾರಣೆಗೆ ಸರಕಾರ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆ ಕರೆದಿದೆ.
ಪರಿಸರವಾದಿಗಳ ವಿರೋಧ:
ಆದರೆ ಕೈಗಾದಲ್ಲಿ ಈಗಾಗಲೇ ಇರುವ ನಾಲ್ಕು ಘಟಕಗಳಿಂದಾಗಿ ಕ್ಯಾನ್ಸರ್ ಹರಡಿರುವ ಸಾಧ್ಯತೆ ಇದೆ. ಅಲ್ಲದೇ ಈ ಭಾಗದ ನೆಲ, ಜಲ ವಾತಾವರಣದಲ್ಲಿ ವಿಕಿರಣ ಪ್ರಭಾವ ಬೀರಿದೆ. ಇದರಿಂದ ಜೀವ ವೈವಿದ್ಯತೆಯ ಮೇಲೆ ದುಷ್ಪರಿಣಾಮ ಆಗಿರಬಹುದು. ಅಲ್ಲದೇ ಜನರ ಆರೋಗ್ಯ ಸಹ ಹದಗೆಡುತ್ತಿದೆ. ಈ ಹಿನ್ನೆಲೆಯುಲ್ಲಿ ಮತ್ತೆ ಎರಡು ಬೃಹತ್ ಅಣು ವಿದ್ಯುತ್ ಘಟಕಗಳ ನಿಮರ್ಾಣ ಬೇಡವೇ ಬೇಡ ಎಂಬುದು ಪರಿಸರವಾದಿಗಳ ನಿಲುವಾಗಿದೆ.
ಸ್ಥಳೀಯರ ವಿರೋಧ:
ಇನ್ನು 5 ಮತ್ತು 6 ನೇ ಘಟಕ ಸ್ಥಾಪನೆ ಬಗ್ಗೆ ಕೈಗಾದ ಸುತ್ತಮುತ್ತಲಿನ 16 ಗ್ರಾಮಗಳ ಹಲವು ಜನರು ಮತ್ತು ಹಲವು ಜನಪ್ರತಿನಿಧಿಗಳು ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ತಲಾ 220 ಮೇ.ವ್ಯಾ. ವಿದ್ಯುತ್ ಉತ್ಪಾದಿಸುವ 4 ಘಟಕಗಳಿಂದ ಇಲ್ಲಿನ ನಿವಾಸಿಗಳಿಗೆ ಬಹಳ ತೊಂದರೆಯಾಗಿದೆ. ಯೋಜನೆಯಿಂದ ನಿರಾಶ್ರಿತರಾದವರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ. ಸ್ಥಳೀಯರಿಗೆ ಉದ್ಯೋಗವಿಲ್ಲ. ಹೊರ ರಾಜ್ಯದವರಿಗೆ ಕರೆದು ಹೆಚ್ಚಿನ ಉದ್ಯೋಗಾವಕಾಶ ನೀಡಲಾಗುತ್ತದೆ. ಸ್ಥಳೀಯರಿಗೆ ಕೇವಲ ಡಿ-ದಜರ್ೆ ಹಾಗೂ ಸಣ್ಣಪುಟ್ಟ ಗುತ್ತಿಗೆ ಕೆಲಸ ನೀಡಿ ಕೈತೊಳೆದುಕೊಳ್ಳಲಾಗುತ್ತಿದೆ. ನಿರಾಶ್ರಿತರ ಪುನರ್ವಸತಿ ಕೇಂದ್ರಗಳಲ್ಲಿ ಕುಡಿಯುವ ನೀರು, ರಸ್ತೆ, ಸೇತುವೆ, ಆಸ್ಪತ್ರೆಗಳ ಕೊರತೆಯಿಂದ ಸಂತ್ರಸ್ಥರು ದಾರುಣ ಬದುಕು ಸವೆಸುತ್ತಿದ್ದಾರೆ.ಇದಲ್ಲದೇ ಕೈಗಾ ಸುತ್ತಮುತ್ತಲಿನ ಜನರ ಅನುಕೂಲಕ್ಕಾಗಿ ನಿರೀಕ್ಷಿಸಿದ ಪ್ರಮಾಣದಲ್ಲಿ ಮೂಲಭೂತ ಸೌಲಭ್ಯ ಒದಗಿಸಿಲ್ಲ ಎಂದು ಆರೋಪಿಸುತ್ತಿದ್ದಾರೆ. ಆದರೆ ಕೈಗಾ ಅವರು ಸಾಮಾಜಿಕ ಜವಾಬ್ದಾರಿ ನಿರ್ವಹಣೆ ಅಡಿ ಕಳೆದ 20 ವರ್ಷಗಳಲ್ಲಿ 24 ಕೋಟಿ ರೂ. ವೆಚ್ಚ ಮಾಡಿ ಜನರ ಶಿಕ್ಷಣ, ತಾಂತ್ರಿಕ ತರಬೇತಿ, ಆರೋಗ್ಯ, ಶಿಕ್ಷಣ ವ್ಯವಸ್ಥೆ ಹಾಗೂ ರಸ್ತೆ, ಸೇತುವೆ. ಸಮುದಾಯ ಭವನ ಮಾಡಿಕೊಟ್ಟಿದ್ದೇವೆ ಎಂದು ಎನ್ಪಿಸಿಎಲ್ ಹೇಳುತ್ತಿದೆ.
ವಿರೋಧಿಸಿ ಪಾದಯಾತ್ರೆ :
ಮೊದಲು ಮೂಲಭೂತ ಸೌಲಭ್ಯ ಸೇರಿದಂತೆ, ಸ್ಥಳೀಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಇತ್ತೀಚೆಗೆ 16 ಹಳ್ಳಿಗಳ ನೂರಾರು ಜನರಿಂದ ಕದ್ರಾದಿಂದ ಮಲ್ಲಾಪುರದವರೆಗೆ ಪಾದಯಾತ್ರೆ ನಡೆಸಲಾಗಿತ್ತು. ಜನಪ್ರತಿನಿಧಿಗಳು ಸೇರಿದಂತೆ, ಪರಿಸರವಾದಿಗಳು, ವಿವಿಧ ಸಮಾಜ ಸೇವಾ ಸಂಘಟನೆಗಳು, ಸ್ಥಳೀಯ ಜನರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದವು.
ಮೆಕಾನ್ ವರದಿಯಲ್ಲಿ ಏನಿದೆ ?
ಕೈಗಾದಲ್ಲಿ ಸುಮಾರು 120 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ನಾಲ್ಕು ಘಟಕಗಳಿವೆ. ಮಲ್ಲಾಪುಟ ಟೌನ್ ಶಿಪ್ನಲ್ಲಿ ವಸತಿ ಸಂಕೀರ್ಣಗಳು, ರಸ್ತೆ, ಮೂಲ ಸೌಕರ್ಯ ಮೊದಲಾದವುಗಳ ನಿಮರ್ಾಣಕ್ಕೆ ಸ್ವಲ್ಪ ಭೂಮಿ ಬಳಕೆಯಾಗಿದೆ. ಕೈಗಾದಲ್ಲಿ ಉಳಿದ 54.09 ಹೆಕ್ಟೇರ್ ಭೂಮಿ ಖಾಲಿ ಇದೆ. ಇದು 5-6 ಘಟಕ ಸ್ಥಾಪನೆಗಾಗಿ ಮೀಸಲಿಟ್ಟ ಭೂಮಿ. ಈ ಭೂಮಿ ಎನ್ಪಿಸಿಐಎಲ್ ವಶದಲ್ಲೇ ಇದೆ. ಆ ಭೂಮಿಯನ್ನು 5 ಮತ್ತು 6ನೇ ಘಟಕಕ್ಕೆ ಬಳಸಿಕೊಳ್ಳಲಾಗುತ್ತಿದೆ. ಯೋಜನೆಗೆ ಅಗತ್ಯವಾದ ನೀರನ್ನು ಕದ್ರಾ ಜಲಾಶಯದಿಂದ ಬಳಸಿಕೊಳ್ಳಲಾಗುತ್ತದೆ. ಆರೂ ಘಟಕಗಳನ್ನು ಸೇರಿ ಒಟ್ಟು 185 ಕ್ಯೂಸೆಕ್ ನೀರು ಅಗತ್ಯವಿರುವದಾಗಿ ಯೋಜನೆಯ ಪ್ರಾರಂಭದಲ್ಲೇ ಅಂದಾಜು ಮಾಡಲಾಗಿತ್ತು. ಪ್ರಸ್ತಾವಿತ 5 ಮತ್ತು 6 ನೇ ಘಟಕಕ್ಕೆ 2.6 ಕ್ಯೂಸೆಕ್ ನೀರಿನ ಅಗತ್ಯವಿದೆ . ನೂತನ ಘಟಕಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ವಸತಿ ನಿಮರ್ಾಣಕ್ಕೆ 28.73 ಹೆಕ್ಟೇರ್ ಮೀಸಲಿಡಲಾಗಿದೆ. ನಿಮರ್ಾಣ ಹಂತದ ವಿದ್ಯುತ್ ಬೇಡಿಕೆ 10 ಮೆಗಾ ವ್ಯಾಟ್ ಆಗಿದ್ದು ಇದನ್ನು ಕೈಗಾದ 1 ಮತ್ತು 4ನೇ ಘಟಕದಿಂದ ಪಡೆಯಲು ನಿರ್ಧರಿಸಿರುವುದಾಗಿ ಮೆಕಾನ್ ವರದಿಯಲ್ಲಿ ತಿಳಿಸಲಾಗಿದೆ. ಘಟಕಗಳ ನಿಮರ್ಾಣ ಹಂತದಲ್ಲಿ, ವಿದ್ಯುತ್ ಉತ್ಪಾದನೆ ಸಂದರ್ಭದಲ್ಲಿ ಮತ್ತು ಅಣು ತ್ಯಾಜ್ಯಗಳ ವಿಲೇವಾರಿ ಸಂದರ್ಭದಲ್ಲಿ ಹಲವು ದುಷ್ಪರಿಣಾಮಗಳ ಸಾಧ್ಯತೆ ಇದೆ. ಆದರೆ ಇವುಗಳಿಗೆ ಸೂಕ್ತ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ವ್ಯವಸ್ಥೆ ಕೈಗೊಂಡರೆ ಯಾವುದೇ ಅಪಾಯವಿಲ್ಲ ಎಂದು ಮೆಕಾನ್ ಸಂಸ್ಥೆ ನೀಡಿರುವ ಪರಿಸರ ಧಾರಣ ವರದಿಯಲ್ಲಿ ತಿಳಿಸಲಾಗಿದೆ.
ಸಭೆಗೆ ಗೈರಾಗಲು ನಿರ್ಣಯ :
ಸಾರ್ವಜನಿಕ ಅಹವಾಲು ಸಭೆಯನ್ನು ಕಾರವಾರ ನಗರದ ಬದಲಾಗಿ ಮಲ್ಲಾಪುರದಲ್ಲಿಯೇ ಇಟ್ಟುಕೊಂಡಿರುವುದರ ಕುರಿತು ಮಾಜಿ ಶಾಸಕ ಸೈಲ್ ರಿಂದ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಸಭೆಗೆ ಗೈರಾಗಲು ಕೈಗಾ ವಿರೋಧಿ ಹೋರಾಟ ಸಮಿತಿಯವರು ನಿರ್ಣಯ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.