ಮುನವಳ್ಳಿ 07: ಸಮೀಪದ ತೆಗ್ಗಿಹಾಳ ಗ್ರಾಮದ ತಲ್ಲೂರ ಕ್ರಾಸ್ದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಪ್ರಸಕ್ತ ಸಾಲಿನ ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಳಗಾವಿ ಇವರು ಕೊಡಮಾಡುವ ಪರಿಸರಮಿತ್ರ ಹಳದಿ ಶಾಲೆ ಪ್ರಶಸ್ತಿ ಲಭಿಸಿದೆ.
ಶಾಲಾ ಆವರಣದಲ್ಲಿ ಗಿಡ ಮರಗಳನ್ನು ನೆಟ್ಟು ಪರಿಸರ ರಕ್ಷಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಪ್ರಶಸ್ತಿ ಲಭಿಸಿದೆ. ಈ ಸಂದರ್ಭದಲ್ಲಿ ಪ್ರಧಾನ ಗುರುಗಳಾದ ಎ.ಎಂ.ಹಿರೇಮಠ, ಶಿಕ್ಷಕರಾದ ಎನ್.ಎ.ಹೊನ್ನಳ್ಳಿ, ಬಿ.ಬಿ. ಬಾರಿಗಿಡದ, ಎ.ಎ.ರಾವುಳ, ಎಸ್.ಎನ್. ಮುಲ್ಲಾ ಸೇರಿದಂತೆ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.