ಜನನ-ಮರಣ ನೋಂದಣಿ ನಮೂನೆಯಲ್ಲಿ ಆಧಾರ ಸಂಖ್ಯೆ ನಮೂದಿಸಿ: ಪಿ. ಸುನೀಲ್ಕುಮಾರ್

ಕೊಪ್ಪಳ 11: ಜನನ-ಮರಣ ನೋಂದಣಿ ನಮೂನೆಗಳಲ್ಲಿ ಕಡ್ಡಾಯವಾಗಿ ಆಧಾರ ಕಾಡರ್್ ಸಂಖ್ಯೆಯನ್ನು ನಮೂದಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸಂಬಂಧಿಸಿದ ನೋಂದಣಾಧಿಕಾರಿಗಳಿಗೆ ಸೂಚನೆ ನೀಡಿದರು.  

ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಆಯೋಜಿಸಲಾದ ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಜನನ-ಮರಣ ಪ್ರಮಾಣ ಪತ್ರಕ್ಕಾಗಿ "ಇ-ಜನ್ಮ ಎಂಬ ಆನ್ ಲೈನ್ ನೋಂದಣಿ ಪದ್ಧತಿಯನ್ನು ಜಾರಿಗೆ ತಂದಿದ್ದು, ಜನನ ಪ್ರಮಾಣ ಪತ್ರಕ್ಕಾಗಿ ನೋಂದಣಿ ಮಾಡಿಕೊಳ್ಳಲು ಮಗುವಿನ ಪೋಷಕರ ಆಧಾರ್ ಕಾಡರ್್ ಸಂಖ್ಯೆ ನಮೂನೆಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು.  ಮರಣ ಪ್ರಮಾಣ ಪತ್ರಕ್ಕಾಗಿ ಮೃತ ವ್ಯಕ್ತಿಯ ಅವಲಂಭಿತರಿಂದ ಸಲ್ಲಿಸುವ ಅಜರ್ಿಯೊಂದಿಗೆ ಮೃತನ ಮತ್ತು ಹೆಂಡತಿಯ ಅಥವಾ ವಾರಸುದಾರರ ಆಧಾರ ಕಾಡರ್್ ಸಂಖ್ಯೆಯನ್ನು ನೋಂದಣಾಧಿಕಾರಿಗಳು ನಮೂದಿಸಬೇಕು.  ಇ-ಜನ್ಮ ಆನ್ ಲೈನ್ ನೋಂದಣಿ, ಈ ಪದ್ಧತಿಯಲ್ಲಿ ಗ್ರಾಮೀಣ ಭಾಗದಲ್ಲಿ 2015ರ ಏಪ್ರೀಲ್. 01 ರಿಂದ ಜನನ-ಮರಣ ಪ್ರಮಾಣ ಪತ್ರಗಳು ನಾಡ ಕಚೇರಿ ಹಾಗೂ ಗ್ರಾಮಾಂತರ ಪ್ರಾಥಮಿಕ ಅಥವಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನೀಡಲಾಗಿದೆ.  ಇ-ಜನ್ಮ ನೋಂದಣಿ ಪದ್ಧತಿಯಲ್ಲಿ ನಗರ ಭಾಗದಲ್ಲಿ 2018 ಜುಲೈ. 02 ಜನನ-ಮರಣ ಪ್ರಮಾಣ ಪತ್ರಗಳು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಪ್ರಾಥಮಿಕ ಅಥವಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನೀಡಲಾಗುತ್ತದೆ.  ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಥಿಕೇತರ ಅಂದರೆ ಮನೆಯಲ್ಲಾದ ಘಟನೆಗಳನ್ನು ನಾಡ ಕಚೇರಿಗಳಲ್ಲಿ.  ಇದಕ್ಕೆ ಗ್ರಾಮ ಲೆಕ್ಕಾಧಿಕಾರಿಗಳು ನೋಂದಣಾಧಿಕಾರಿಯಾಗಿರುತ್ತಾರೆ.  ಸಾಂಸ್ಥಿಕ ಅಂದರೆ ಆಸ್ಪತ್ರೆಯ ಘಟನೆಗಳಲ್ಲಿ ಸ್ಥಾನಿಕ ವೈದ್ಯಾಧಿಕಾರಿಗಳು ಪಿ.ಹೆಚ್.ಸಿ. ಅಥವಾ ಚಿ.ಹೆಚ್.ಸಿ. ನೋಂದಣಾಧಿಕಾರಿಯಾಗಿರುತ್ತಾರೆ.  ಯಾವುದೇ ಕಾರಣಕ್ಕೂ ಕೈ ಬರಹ ಪ್ರಮಾಣ ಪತ್ರಗಳನ್ನು ನೀಡಲು ಅವಕಾಶ ಇರುವುದಿಲ್ಲ.  ಆದ್ದರಿಂದ ಆನ್ಲೈನ್ ಈ ಪ್ರಕ್ರಿಯೇ ಮೂಲಕ ನಡೆಯಬೇಕು.  ತಡ ನೋಂದಣಿಯಲ್ಲಿ 21 ದಿನಗಳ ಒಳಗಾಗಿ ನೊಂದಣಿ ಮಾಡುವುದು ಕಡ್ಡಾಯ.  ಮೊದಲ ಪ್ರತಿಯನ್ನು ಉಚಿತವಾಗಿ ನೀಡಬೇಕು.  21 ದಿನಗಳ ನಂತರ ಮತ್ತು 30 ದಿನಗಳೊಳಗಾಗಿ ನೊಂದಣಾಧಿಕಾರಿಗಳು 2ರೂ. ತಡ ಶುಲ್ಕದೊಂದಿಗೆ ನೊಂದಣಿ ಮಾಡಬೇಕು.  30 ದಿನಗಳ ನಂತರ ಒಂದು ವರ್ಷದೊಳಗಾಗಿ ಗ್ರಾಮೀಣ ಭಾಗದಲ್ಲಿ ತಹಶೀಲ್ದಾರರ ಆದೇಶದಂತೆ ರೂ. 5 ಅನ್ನು ತಡ ಶುಲ್ಕ, ಪಟ್ಟಣಕ್ಕೆ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳ ಆದೇಶದಂತೆ ರೂ. 5 ಶುಲ್ಕದೊಂದಿಗೆ ನೊಂದಣಿ ಮಾಡಬೇಕು.  ಒಂದು ವರ್ಷ ಮೇಲ್ಪಟ್ಟರೆ ಮೊದಲನೇ ದಜರ್ೆಯ ನ್ಯಾಯಿಕ ದಂಡಾಧಿಕಾರಿಗಳ ಆದೇಶದ ಮೇರೆಗೆ ನೋಂದಣಾಧಿಕಾರಿಗಳು ರೂ. 10 ತಡ ಶುಲ್ಕ ಪಡೆಯಬೇಕು.  ಆಸ್ಪತ್ರೆ ಘಟನೆಗಳಲ್ಲಿ ತಡ ನೋಂದಣಿಗೆ ಅವಕಾಶವಿಲ್ಲ.  ಅದಷ್ಟು 21 ದಿನಗಳೊಳಗಾಗಿ ನೋಂದಾಯಿಸಬೇಕು.  ಹೆರಿಗೆಯಾದ ಮಗುವಿನ ಆಸ್ಪತ್ರೆಯಿಂದ ಡಿಸ್ಚಾಜರ್್ ಮಾಡುವಾಗ ಮೊದಲ ಪ್ರತಿಯ ಪ್ರಮಾಣ ಪತ್ರವನ್ನು ನೋಂದಣಾಧಿಕಾರಿಗಳು ಕಡ್ಡಾಯವಾಗಿ ನೀಡಬೇಕು.  ಜನನ-ಮರಣ ಪ್ರಮಾಣ ಪತ್ರಗಳಲ್ಲಿ ಯಾವುದೇ ತಿದ್ದುಪಡಿ ಇದ್ದಲ್ಲಿ, ಜನನ-ಮರಣ ನೋಂದಣಿ ಅಧಿನಿಯಮ 1969ರ ಪ್ರಕಾರ 15, ಹಾಗೂ ಕನರ್ಾಟಕ ಜನನ-ಮರಣ ನೋಂದಣಿ ನಿಯಮಗಳು 1999ರ ಪ್ರಕರಣ 11 ರಂತೆ ತಿದ್ದುಪಡಿ ಮಾಡಬೇಕು.  ಮರಣ ಸಂದರ್ಭದಲ್ಲಿ ಪ್ರಥಮ ವರ್ತಮಾನ ಪತ್ರಕ್ಕೆ ಹಾಗೂ ಪೋಸ್ಟ ಮಾರ್ಟಂ ವರದಿಯಲ್ಲಿ ಮರಣದ ಸ್ಥಳ ಹಾಗೂ ದಿನಾಂಕವನ್ನು ಸ್ಪಷ್ಟವಾಗಿ ನಮೂದಿಸಬೇಕು.  ಜನನ-ಮರಣ ನೋಂದಣಿಯನ್ನು ಆಪ್ರೇಟರ್ ಲಾಗಿನ್ನಲ್ಲಿ ದಾಖಲಾದ ಘಟನೆಗಳನ್ನು ನಿಗದಿತ ಸಮಯದಲ್ಲಿ ಅಪ್ರೂಲ್ ಮಾಡಬೇಕು.  ಜನನ-ಮರಣ ಘಟನೆಗಳ ದಾಖಲಾತಿಯನ್ನು ಶೇ.100 ಮಾಡಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸಂಬಂಧಿಸಿದ ನೋಂದಣಾಧಿಕಾರಿಗಳಿಗೆ ಸೂಚನೆ ನೀಡಿದರು. 

ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂತರ್ಿ ದೇಸಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿರುಪಾಕ್ಷರೆಡ್ಡಿ ಮಾದಿನೂರ, ತಹಶೀಲ್ದಾರ ಜೆ.ಬಿ. ಮಜ್ಗಿ ಸೇರಿದಂತೆ ವಿವಿಧ ಇಲಾಖೆಗಳ ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.