ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರ ಕಾರ್ಯಾಗಾರ
ದೇವರಹಿಪ್ಪರಗಿ 27: ಪಟ್ಟಣದ ವೆಂಕಟೇಶ್ವರ ಪ್ರೌಢಶಾಲಾ ಸಭಾ ಭವನದಲ್ಲಿ ಗುರುವಾರದಂದು ಇಂಗ್ಲಿಷ್ ಶಿಕ್ಷಕರ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ಥಳೀಯ ಶಾಲೆಯ ಪ್ರಾಚಾರ್ಯ ಎನ್. ಎಲ್. ಅಂಗಡಿ ಉದ್ಘಾಟನೆ ಮಾಡಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಣ ಇಲಾಖೆಯ ಅಧಿಕಾರಿ ಎಸ್.ಕೆ.ಗುಗ್ಗರಿ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯದ ಕುರಿತು ಸವಿಸ್ತಾರವಾಗಿ ಮಾತನಾಡಿ ಇಂಗ್ಲಿಷ್ ಕಲಿಕೆ ಜೊತೆಗೆ ಪರೀಕ್ಷೆಯಲ್ಲಿ ಆತ್ಮಸ್ಥೈರ್ಯ ತುಂಬಲು ತಿಳಿಸಿದರು.
ಅತಿಥಿಗಳಾಗಿ ಸಂಪನ್ಮೂಲ ವ್ಯಕ್ತಿ ಮಾಯಾ ಲುಗಾಡೆ ಹಾಗೂ ಶಿಕ್ಷಣ ಸಂಯೋಜಕ ಕಪನಿಂಬರಗಿ ಭಾಗವಹಿಸಿ ಮಾತನಾಡಿದರು. ಇಂಗ್ಲಿಷ್ ವಿಷಯ ವಿಶ್ಲೇಷಣೆ, ಪರೀಕ್ಷೆಯನ್ನು ಧೈರ್ಯದಿಂದ ಎದುರಿಸುವುದು, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವುದು ಮತ್ತು ವಿಷಯ ನೀಲ ನಕ್ಷೆ ಕುರಿತು ವಿಸ್ತಾರವಾಗಿ ತಿಳಿಸಲಾಯಿತು. ಇಂಗ್ಲಿಷ್ ವಿಷಯದ ಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕ ಟಿ.ಜೆ.ಜಾಡರ ನಿರೂಪಿಸಿ, ವಂದಿಸಿದರು