ಲೋಕದರ್ಶನ ವರದಿ
ರಾಯಬಾಗ 07: ಪಟ್ಟಣದಲ್ಲಿ ಕೆಲವು ಕೊಳವೆ ಬಾವಿಗಳಿಗೆ ನೀರು ಇದ್ದು, ನೀರು ಮೇಲಕ್ಕೆತ್ತಲು ಪಂಪಗಳನ್ನು ಕೂಡ್ರಿಸುವದು ಹಾಗೂ ಕೆಲವು ಕೊಳವೆ ಬಾವಿಗಳಲ್ಲಿ ಪಂಪುಗಳು ಬಿದ್ದಿದ್ದು ಅವುಗಳನ್ನು ತೆಗೆಯಿಸುವ ಕಾರ್ಯ ಶೀಘ್ರವೇ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ತಹಶೀಲ್ದಾರ ದುಂಡಪ್ಪ ಕೋಮರ ಅವರಿಗೆ ಸೂಚಿಸಿದರು.
ಶುಕ್ರವಾರ ಪಟ್ಟಣ ಪಂಚಾಯತಿಯಲ್ಲಿ ಕರೆದಿದ್ದ ತುತರ್ು ಸಭೆಯಲ್ಲಿ ತಹಶೀಲ್ದಾರ, ಪ.ಪಂ.ಆಡಳಿತಾಧಿಕಾರಿ ದುಂಡಪ್ಪ ಕೋಮರ, ಪ.ಪಂ.ಸದಸ್ಯರ ಹಾಗೂ ಸಾರ್ವಜನಿಕರೊಂದಿಗೆ ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆ ಕುರಿತು ಚಚರ್ಿಸಿದ ಅವರು, ಹುಲ್ಯಾಳ ಕೆರೆಯ ಹತ್ತಿರ ನೀರಿನ ಮೂಲವಿದ್ದು, ಜಿಲ್ಲಾಧಿಕಾರಿಯವರ ಕುಡಿಯುವ ನೀರಿನ ವಿಶೇಷ ಅನುದಾನದಲ್ಲಿ ಅಲ್ಲಿ ಹೊಸ ಕೊಳವೆ ಬಾವಿ ತೋಡಿಸಲು ತಹಶೀಲದಾರರಿಗೆ ಸೂಚಿಸಿದರು.
ಪ.ಪಂ ಕಚೇರಿಯಲ್ಲಿ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುವದಿಲ್ಲವೆಂದು ಸಾರ್ವಜನಿಕರು ದೂರಿದಾಗ, ಈಗ ಬರಗಾಲ ಬಿದ್ದಿದ್ದು ಸಾರ್ವಜನಿಕರು ಈಗ ಕುಡಿಯುವ ನೀರಿನ ಸಮಸ್ಯೆ ತುಂಬಾ ಭೀಕರವಾಗಿದೆ. ಇಂಥಹ ಸಮಯದಲ್ಲಿಯೂ ಸರಿಯಾದ ಸಮಯಕ್ಕೆ ಸಿಬ್ಬಂದಿ ಕಾಯರ್ಾಲಯಕ್ಕೆ ಬಂದು ಕಾರ್ಯನಿರ್ವಹಿಸದಿದ್ದರೆ ಅಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ತಹಶೀಲದಾರರಿಗೆ ಸೂಚಿಸಿದರು.
ಸಭೆಯಲ್ಲಿ ಪ.ಪಂ.ಸದಸ್ಯರಾದ ಅಶೋಕ ಅಂಗಡಿ, ಅಪ್ಪಾಜಿ ಪೂಜೇರಿ, ಕಲಂದರ ಅತ್ತಾರ, ರವಿ ತರಾಳ, ಗಣೇಶ ಕಾಂಬಳೆ, ಜಾವೇದ ಮುಲ್ಲಾ, ಎಚ್.ಎಸ್.ಸಾನೆ, ಜಯಶ್ರೀ ಭಿರಡೆ, ಅಪ್ಪು ಗಡ್ಡೆ, ಶಶಿಕಾಂತ ಕುರಾಡೆ, ನ್ಯಾಯವಾದಿಗಳಾದ ಎಮ್.ಕೆ.ಕೊಂಬಾರೆ, ಎನ್.ಎಮ್.ಯಡವನ್ನವರ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.