ವಕೀಲರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಶಿಗ್ಗಾವಿ 24: ಪಟ್ಟಣದ ನ್ಯಾಯಲಯದ ಅವರಣದಲ್ಲಿ ನಡೆದ ವಕೀಲ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಸ್.ಬಿ.ಲಕ್ಕಣ್ಣವರ್, ಉಪಾಧ್ಯಕ್ಷರಾಗಿ ಎಸ್.ಜಿ. ಟೋಪಣ್ಣವರ್,ಕಾರ್ಯದರ್ಶಿ ವಿವೇಕ.ಎಂ.ರಾಮಗೇರಿ, ಸಹ ಕಾರ್ಯದರ್ಶಿ ಸಿ.ಬಿ.ವಾಲ್ಮೀಕಿ, ಖಜಾಂಜಿ ಎಂ.ಎಲ್.ಕಳಸ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಅವಿರೋಧವಾಗಿ ಸಿ.ಬಿ. ಪಾಟೀಲ್, ಎ.ಎ.ಗಂಜಣ್ಣವರ್, ಸಿ.ಎಫ್.ಅಂಗಡಿ, ಎಸ್.ಎಂ ಗಾಣಿಗೇರ್ಿ, ಪಿ.ಹೊಂಡದಕಟ್ಟಿ, ಪಿ.ಎಂ ಗೋಂದ್ಕರ್, ಮಹಿಳಾ ಪ್ರತಿನಿಧಿಯಾಗಿ ವಸಂತ ಬಾಗೂರ ಆಯ್ಕೆಯಾಗಿದ್ದಾರೆ.
ವಕೀಲರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಕಣ್ಣವರ ಮಾತನಾಡಿ ಚುನಾವಣೆ ನಡೆದಿದ್ದು ಜಾತಿ ಮತ ಧರ್ಮ ಗುಂಪುಗಾರಿಕೆಯನ್ನು ಮೀರಿ ಸಾಮಾಜಿಕ ಪರಿಕಲ್ಪನೆಯನ್ನು ಗಣನೆಗೆ ತೆಗೆದುಕೊಂಡು ನಡೆದಿರುವ ನಿಷ್ಪಕ್ಷಪಾತ ಚುನಾವಣೆ ಆಗಿದೆಹಾಗೂ ವಕೀಲರ ನಂಬಿಕೆಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುವ ಜೊತೆಗೆ ಅವರ ಜೊತೆಗೆ ಸದಾ ನಿಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುವುದಾಗಿ ಭರವಸೆ ನೀಡಿದರು. ಕಾರ್ಯದರ್ಶಿ ವಿವೇಕ.ಎಂ.ರಾಮಗೇರಿ ಮಾತನಾಡಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯವಾದಿ ಸಂಘದ ಸಂಕೀರ್ಣದಲ್ಲಿ ವಕೀಲರಿಗೆ ಹಾಗೂ ಸಾರ್ವಜನಿಕರಿಗೆ ಬೇಕಾಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಹಾಗೂ ಯುವ ವಕೀಲರಿಗೆ ಬೇಕಾಗಿರುವ ಅವಶ್ಯಕ ತರಬೇತಿ ನೀಡುವ ಕಾರ್ಯಕ್ರಮಗಳು ಸದ್ಯದಲ್ಲಿ ಚಾಲನೆ ನೀಡಲಾಗುವುದು ಈ ಅವಕಾಶವನ್ನು ಅಧಿಕಾರ ಎಂದು ಭಾವಿಸದೆ ವಕೀಲರ ಗೌರವವನ್ನು ಕಾಪಾಡಿ ಅವರ ರಕ್ಷಣೆ ಮಾಡುವಲ್ಲಿ ಶ್ರಮಿಸುತ್ತೇನೆ ಎಂದರು.
ಚುನಾವಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿದ ಚುನಾವಣೆ ಅಧಿಕಾರಿ ಎಂ.ಜಿ.ಬಿಂದ್ಲಿ ಮತ್ತು ತಂಡಕ್ಕೆ ನಮ್ಮನ್ನು ಆಯ್ಕೆ ಮಾಡಿದ ಸಂಘದ ಎಲ್ಲಾ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳು ಸಲ್ಲಿಸಿದರು. ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ಪದಾಧಿಕಾರಿಗಳು ಹಾಗೂ ಹಿರಿಯ ಕಿರಿಯ ಮತ್ತು ಮಹಿಳಾ ನ್ಯಾಯವಾದಿಗಳು ಹಾಜರಿದ್ದರು.