ವಿಕಲಚೇತನರ ಬೇಡಿಕೆ ಈಡೇರಿಕೆ ಪ್ರಮಾಣಿಕ ಪ್ರಯತ್ನ: ಪಟೇಲ

ಲೋಕದರ್ಶನ ವರದಿ

ಕೊಪ್ಪಳ 02: ವಿಕಲಚೇತನರ ಬೇಡಿಕೆಗಳ ಈಡೇರಿಕೆ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ನಗರಸಭೆಯ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಅಮ್ಜದ್ ಪಟೇಲ ಹೇಳಿದರು.

ಅವರು ನಗರದ ಎಸ್.ಎಫ.ಎಸ್.ಶಾಲೆಯ ಹತ್ತಿರವಿರುವ ವಿಕಲಚೇತನರ ಸಮುದಾಯ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಆಶಾ ಕಿರಣ ವಿಕಲಚೇತನರ ಸಹಕಾರ ಸಂಘದ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡುತ್ತ. ಈಗಾಗಲೇ ನಗರಸಭೆಯ ವತಿಯಿಂದ ವಿಕಲಚೇತನರ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು.  ಪ್ರಸ್ತುತ   ನಗರಸಭೆಗೆ 40ಕೋಟಿ ಹಣ ಬಿಡುಗಡೆಯಾಗಿದೆ. ಶೇಕಡಾ 5 ರಷ್ಟು ವಿಕಲಚೇತನರಿಗಾಗಿ ಖಚರ್ು ಮಾಡಬೇಕಾಗಿದೆ. ಈ ಹಣದಲ್ಲಿ ವಿಕಲಚೇನರಿಗಾಗಿ ಯಾವ ಯಾವ ಉದ್ದೇಶದ ಸಲುವಾಗಿ ಖಚರ್ು ಮಾಡಬೇಕು ಎಂಬುದರ ಬಗ್ಗೆ ಶೀಘ್ರವೇ ವಿಕಲಚೇತನರ ಸಭೆಯನ್ನು ಕರೆದು ಚಚರ್ಿಸಲಾಗುತ್ತದೆ.ಸಹಕಾರ ಸಂಘದ ಸದಸ್ಯರು ತಾವು ಪಡೇದ ಸಾಲವನ್ನು ಸರಿಯಾದ ಸಮಯದಲ್ಲಿ ಪಾವತಿ ಮಾಡಿದಾಗ ಮಾತ್ರ ಸಂಘವು ಸರಿಯಾದ ರೀತಿಯಿಂದ ನಡೆದುಕೊಂಡು ಹೊಗಲು ಸಾಧ್ಯವಾಗುತ್ತದೆ. ವಿಕಲಚೇತನರ ಸಹಕಾರ ಸಂಘವು ರಾಜ್ಯದಲ್ಲಿ ಮಾದರಿಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಇಂತಹ ಕಾರ್ಯಕ್ಕೆ ಸಂಘದ ಸದಸ್ಯರ ಸಹಕಾರ ಬಹಳ ಮಹತ್ವದಾಗಿದೆ ಎಂದು ಹೇಳಿದರು.

    ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,  ವಿಕಲಚೇತನರು ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಲಿಪ್ಟ್ ಇಲ್ಲದಿರುವುದರಿಂದ ವಿಕಲಚೇತನರು ಸಂಚಾರ ಮಾಡುವುದು ಕಷ್ಟವಾಗಿದೆ. ಜಿಲ್ಲಾಧಿಕಾರಿಗಳು ಶೀಘ್ರವೇ ಈ ಎರಡು ಸ್ಥಳಗಳಲ್ಲಿ ಲಿಪ್ಟ್ ಅಳವಡಿಕೆಯ ಬಗ್ಗೆ  ಗಮನಹರಿಸಬೇಕು.  ಆದಾರ ಯೋಜನೆಯ ಅಡಿಯಲ್ಲಿ ನೀಡಲಾಗುವ ರೂ.20 ಸಾವಿರ ಹಣವನ್ನು 2 ಲಕ್ಷಕ್ಕೆ ಏರಿಕೆ ಮಾಡಬೇಕು. ವಿಕಲಚೇತನರ ಬ್ಯಾಕ್ ಲಾಗ್ ಹುದ್ದೆಗಳ ನೇಮಕ ಮಾಡಿಕೊಳ್ಳಬೇಕು.  ವಿಕಲಚೇತನರು ಆಥರ್ಿಕವಾಗಿ ಸಬಲರಾಬೇಕಾದರೇ ಅವರಿಗೆ ಕೌಶಲ್ಯ ಆಧಾರಿತ ತರಬೇತಿ ನೀಡಬೇಕು.  ವಿಕಲಚೇತನರ ಸಮುದಾಯ ಭವನಕ್ಕೆ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಭವನದ ಮುಂದಿನ ರಸ್ತೆಯನ್ನು ಸರಿಮಾಡಬೇಕು. ವಿಕಲಚೇತನರ ಎಲ್ಲಾ ಬೇಡಿಕೆಗಳು ಈಡೇರಬೇಕಾದರೇ ಎಲ್ಲಾ ವಿಕಲಚೇತನರು ಒಟ್ಟಿಗೆ ಸೇರಿ ನಮ್ಮ ಬಲವನ್ನು ತೋರಿಸಬೇಕು ಅಂದಾಗ ಜನಪ್ರತಿನಿಧಿಗಳು ನಮ್ಮ ಕಡೆಗೆ ಹೆಚ್ಚು ಗಮನವನ್ನು ಹರಿಸಲು ಸಾಧ್ಯವಾಗುತ್ತದೆ. ಸಂಘದ ಸದಸ್ಯರು ಸಂಘದ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಶಾ ಕಿರಣ ವಿಕಲಚೇತನ ಸಹಕಾರ ಸಂಘದ ಅಧ್ಯಕ್ಷರಾದ ಮಲ್ಲಿಕಾಜರ್ುನ ಪೂಜಾರ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಕಲಚೇತನರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮಂಜುನಾಥ ಹೊಸಕೇರಾ,ಉಪಾಧ್ಯಕ್ಷರಾದ ಈರಣ್ಣ ಕರೇಕುರಿ, ಸಿದ್ದಲಿಂಯ್ಯಾ ಕೊಲರ್ೆಕೊಪ್ಪ, ಮಹಿಳಾ ಉಪಾಧ್ಯಕ್ಷೆ ಮಂಜುಳಾ ಬಜಾರದ್, ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ನೇಗಳೂರು, ಯಲಬುಗರ್ಾ ತಾಲೂಕ ಅಧ್ಯಕ್ಷರಾದ ಮಲ್ಲಪ್ಪ ಹಂದ್ರಾಳ, ಗಂಗಾವತಿ ತಾಲೂಕ ಅಧ್ಯಕ್ಷರಾದ ಹುಲುಗಪ್ಪ ಕಾಗೇರ,  ಕುಷ್ಟಗಿ ತಾಲೂಕ ಅಧ್ಯಕ್ಷರಾದ ಚಂದ್ರು ಕುಂಬಾರ, ಆದಪ್ಪ ಮಾಲಿ ಪಾಟೀಲ, ತಿಮ್ಮಣ್ಣ ಮುಂಡರಗಿ ಮುಂತಾದವರು ಹಾಜರಿದ್ದರು. ವಿಕಲಚೇತನರ ಒಕ್ಕೂಟದ ಜಿಲ್ಲಾ ಕಾರ್ಯದಶರ್ಿ ವಿರೇಶ ಹಾಲಗುಂದಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಘದ ನಿದರ್ೇಶಕರಾದ ಗಂಗಮ್ಮ ಸ್ವಾಗತಿಸಿ, ಮಂಜುಳಾ ಬಡಿಗೇರ ವಂದಿಸಿದರು.