ಎಲ್ಲಾ ಸಮಸ್ಯೆಗೆ ಶಿಕ್ಷಣವೊಂದೇ ಪರಿಹಾರ. ಹುಲ್ಲತ್ತಿ
ಬ್ಯಾಡಗಿ 8: ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯವಿದೆ. ಎಲ್ಲಾ ಸಮಸ್ಯೆಯ ಪರಿಹಾರಕ್ಕೆ ಶಿಕ್ಷಣವೊಂದೇ ಪರಿಹಾರವೆಂದು ಜಿಲ್ಲಾ ಪತ್ರಕರ್ತರ ಸಂಸ್ಥೆಯ ಅಧ್ಯಕ್ಷ ಬಸವಂತಪ್ಪ ಹುಲ್ಲತ್ತಿ ಹೇಳಿದರು.ಶುಕ್ರವಾರ ಅವರು ತಾಲೂಕಿನ ಮೋಟೆಬೆನ್ನೂರ ಗ್ರಾಮದ ಜನತಾ ಪ್ಲಾಟ್ ಶಾಲೆಯಲ್ಲಿ ನಡೆದ ಸರಸ್ವತಿ ಪೂಜೆ ಹಾಗೂ ಶಾಲಾ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭದ ಉಧಘಟನೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿರುವ ಬಡವರು ಹೆಚ್ಚು ವಿದ್ಯಾವಂತರಾಗಬೇಕುಇದರಿಂದಾಗಿ ಗ್ರಾಮ ಮತ್ತು ಸುಭದ್ರವಾದ ದೇಶಕಟ್ಟಲು ಸಾಧ್ಯವಾಗಲಿದೆ.ಹಿಂದೆ ತಂದೆ-ತಾಯಿ ಕಷ್ಟಪಟ್ಟು ದುಡಿದ ಹಣದಲ್ಲಿ ಹೊಟ್ಟೆ,ಬಟ್ಟೆ,ಕಟ್ಟಿ ವ್ಯಾಸಂಗ ಮಾಡುವ ಪರಿಸ್ಥಿತಿ ಇತ್ತು. ಅಂತಹ ಪರಿಸ್ಥಿತಿಯಲ್ಲಿ ಅನೇಕ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ. ಈಗ ಕಾಲ ಬದಲಾಗಿದೆ. ಉತ್ತಮ ವಾತಾವರಣ, ನುರಿತ ಶಿಕ್ಷಕರು ಮತ್ತು ಸರ್ಕಾರ ಹೆಚ್ಚಿಗೆ ಪ್ರೊ?ತ್ಸಾಹಿಸುತ್ತಿದೆ. ಹೀಗಾಗಿ ಉತ್ತಮ ವಿದ್ಯಾವಂತರಾಗಿ ತಂದೆ-ತಾಯಿ, ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತರುವಂತಹ ವಿದ್ಯಾರ್ಥಿಗಳಾಗಬೇಕುಶಿಕ್ಷಣದಿಂದ ಮಾತ್ರ ಗ್ರಾಮ, ದೇಶದ ಪ್ರಗತಿ ಸೇರಿದಂತೆ ಎಲ್ಲಾ ಸಮಸ್ಯೆಗಳ ನಿವಾರಣೆ ಸಾಧ್ಯವಾಗಲಿದೆ ಎಂದು ವಿವರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೆ?ಜಿಸಿದರು.ನಿವೃತ್ತ ಮುಖ್ಯೋಪಾಧ್ಯಯನಿ ಕೆ.ಗಂಗಮ್ಮ ಮಾತನಾಡಿವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಛಲ, ಕಠಿಣ ಪರಿಶ್ರಮದ ಮೂಲಕ ಓದಿ ಉತ್ತಮ ಸಾಧನೆ ಮಾಡಬೇಕು. ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಸೂಕ್ತ ವಾತಾವರಣವಿದ್ದು, ಶಿಕ್ಷಕರು ಜ್ಞಾನ ವಿಕಾಸದ ಕಡೆಗೆ ಒತ್ತು ನೀಡಬೇಕು. ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಲು ಶಿಸ್ತು, ಸಂಯಮ ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೇ, ಉತ್ತಮ ಜೀವನ ರೂಪಿಸಿಕೊಂಡು ಸಮಾಜಕ್ಕೆ ಒಳ್ಳೆ ಹೆಸರು ತಂದು ಕೊಡಬೇಕು ಜತೆಗೆ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದರು.ಪ್ರಧಾನ ಶಿಕ್ಷಕ ಜಿ.ಬಿ. ಮಾಗಳಜ, ನಾಗಪ್ಪ ಬ್ಯಾಟೆಪ್ಪನವರ, ವಿ.ಕೆ. ಕಿರಣ ಮಾತನಾಡಿ ವಿದ್ಯಾರ್ಥಿಗಳು ಸುಂದರ ಬದುಕು ಕಟ್ಟಿಕೊಳ್ಳಲು ಹೇಳಿದರು.ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಸತೀಶ ತಳವಾರ ವಹಿಸಿದ್ದರು.ಕಾರ್ಯಕ್ರಮದಲ್ಲಿ ರಾಜ್ಯ ಜಾನಪದ ಪ್ರಶಸ್ತಿ ವಿಜೇತ ಅಡಿವೆಪ್ಪ ಕುರಿಯವರ, ಶಿಕ್ಷಕಿಯರಾದ ಜೆ.ಸಿ.ಬೇತೂರಮಠ, ಬಿ.ಐ.ರೇಣುಕಾ, ಗೋಪಾಲ ಬುಸಮ್ಮನವರ, ನಾಗರಾಜ್ ಯಲಗಚ್ಚ, ನಿಂಗಪ್ಪ ಕಾಗೇರಿ, ಮಲ್ಲೇಶ ಕೂನಬೇವ, ಬಸವಣ್ಣೆಪ್ಪ ದೆಸೂರ,ಶಿಕ್ಷಕಿ ಎ.ವಿ.ಪಾಟೀಲ, ಯಲ್ಲಪ್ಪ ಕುರಗುಂದ ಸೇರಿದಂತೆ ಇತರರಿದ್ದರು.