ಲೋಕದರ್ಶನವರದಿ
ಬ್ಯಾಡಗಿ16: ಎಳ್ಳು ಹಚ್ಚಿದ ರೊಟ್ಟಿ, ಎಣ್ಣಿಗಾಯಿ, ಮೊಳಕೆಯೊಡೆದ ಕಾಳಿನ ಪಲ್ಯ, ಎಳ್ಳು ಹೋಳಿಗೆ, ಗೋದಿಹುಗ್ಗಿ, ಸಿಹಿಬಾತ್ ಸೇರಿದಂತೆ ವಿವಿಧ ತರದ ಚಟ್ನಿಗಳು, ಚಿತ್ರಾನ್ನ, ಮೊಸರನ್ನು ಮುಂತಾದ ಖಾದ್ಯಗಳು ಸಂಕ್ರಾಂತಿ ನಿಮಿತ್ತ ತಾಲೂಕಿನ ಕಾಗಿನೆಲೆ ಕನಕ ಸ್ನೇಹಿ ಉದ್ಯಾನವನದಲ್ಲಿ ಕಂಡು ಬಂದ ಬಗೆಬಗೆಯ ಖಾದ್ಯಗಳು
ಸಂಕ್ರಾಂತಿ ದಿನದಂದು ನದಿ ಸಮುದ್ರಗಳಿಗೆ ತೆರಳಿ ಸ್ನಾನ ಮಾಡಿ ಬಳಿಕ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವುದು ವಾಡಿಕೆ ಆದರೆ ತಾಲೂಕಿನಲ್ಲಿ ಯಾವುದೇ ಪ್ರಮುಖ ನದಿಗಳು ಹರಿಯದೇ ಇರುವುದರಿಂದ ಮಹಿಳೆಯರು ಕುಟುಂಬ ಸಮೇತರಾಗಿ ಪರಿಸರ ಸ್ನೇಹಿ ಉದ್ಯಾನವನಕ್ಕೆ ತೆರಳಿ ಸಂಕ್ರಾಂತಿ ಆಚರಿಸಿಕೊಂಡರು.
ಹೊಸ ಪರಿಚಯಸ್ಥರೊಂದಿಗೆ ಸಹಭೋಜನ ಸವಿದ ಜನರು, ಬಳಿಕ ಉದ್ಯಾನವನದಲ್ಲಿ ಸುತ್ತಿದರು, ಈ ಸಂದರ್ಭದಲ್ಲಿ ವಿವಿಧ ಜಾತಿಯ ಸಸ್ಸೌಷಧಿ ಗಿಡಗಳು ಸೇರಿದಂತೆ, ವಿವಿಧ ಜಾತಿ ಹೂವುಗಳನ್ನು ಕಂಡು ಆನಂದಿಸಿದರು.
ಹಿರಿಯರು ಚಿಕ್ಕ ಮಕ್ಕಳೊಂದಿಗೆ ತಾವೂ ಮಕ್ಕಳಂತೆ ಆಟವಾಡಿ ಸಂಭ್ರಮಿಸಿದರು. ಭಕ್ತ ಕನಕದಾಸರ ಬೃಹತ್ ಮೂತರ್ಿ ಎದುರಿಗೆ ನಿಂತು ಫೋಟೊಗಳನ್ನು ತೆಗೆಸಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದವು.