2ಎ ಮೀಸಲಾತಿ ಹೋರಾಟದಲ್ಲಿ ಗಾಯಗೊಂಡವರ ಮನೆಗೆ ದುಂಡಿಗೌಡ್ರ ಬೇಟಿ ಮತ್ತು ಯೋಗ ಕ್ಷೇಮ ವಿಚಾರನೆ
ಶಿಗ್ಗಾವಿ 12: ತಾಲೂಕಿನ ಬೆಳವಳಕೊಪ್ಪ ಗ್ರಾಮದ ನಂದೀಶ ಲಂಡೆತ್ತಿನವರ ಹಾಗೂ ಮಂಜುನಾಥ ರಟಗೇರಿ ಅವರು ಮೊನ್ನೆ ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಪೊಲೀಸರ ಹೊಡೆತಕ್ಕೆ ಒಳಗಾಗಿ ಗಾಯಗೊಂಡವರ ಮನೆಗೆ ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಆರೋಗ್ಯ ಮತ್ತು ಯೋಗ ಕ್ಷೇಮ ವಿಚಾರಿಸಿದರು.
ನಂತರ ಮಾತನಾಡಿದ ಅವರು ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟವನ್ನು ಕೆಲವೊಂದಿಷ್ಟು ರಾಜಕಾರಣಿಗಳು ಅಧಿಕಾರಿಗಳನ್ನು ದುರಪಯೋಗ ಪಡೆಸಿಕೊಂಡು ಪೋಲಿಸರಿಂದ ಹಲ್ಲೆಮಾಡಿಸಿರುವುದು ಖಂಡನೀಯ ಮತ್ತು ಹೋರಾಟಗಾರರ ಮೇಲೆ ಹಲ್ಲೆ ಮಾಡಿದ ಪೊಲೀಸ ಅಧಿಕಾರಿಗಳನ್ನು ಈ ಕೂಡಲೇ ಅಮಾನತುಗೊಳಿಸಿ ಆದೇಶ ಹೊರಡಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಮೇಶ ಸಾತಣ್ಣವರ, ಬಸನಗೌಡ ಪಾಟೀಲ, ಬಸನಗೌಡ. ಎಸ್.ಪಾಟೀಲ, ಗುರುರಾಜ ಶೆಟ್ಟರ, ಬಸವರಾಜ ಲಂಡೆತ್ತಿನವರ,ಮಹದೇವಪ್ಪ ಲಂಡೆತ್ತಿನವರ, ರಮೇಶ ಲಂಡೆತ್ತಿನವರ, ಮಂಜುನಾಥ ಲಂಡೆತ್ತಿನವರ, ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರಾದ ಖಾಜಾಮೈನುದ್ದಿನ ಹುಲಗೂರ, ಈಶ್ವರ ಹರ್ಕುಣಿ ಹಾಗೂ ಗ್ರಾಮದ ಗುರು ಹಿರಿಯರು ಹಾಗೂ ಸಮಾಜದ ಹಿರಿಯರು ಉಪಸ್ಥಿತರಿದ್ದರು.