ಬೆಳಗಾವಿ 26:ದಿ. 26.ರಂದು ಅಶೋಕ ನಗರದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಇಂದು ಶಾಸಕ ಅನಿಲ ಬೆನಕೆರವರು ಭೂಮಿ ಪೂಜೆಯನ್ನು ಸಲ್ಲಿಸಿ ಚಾಲನೆ
ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅನಿಲ ಬೆನಕೆರವರು ಅಶೋಕ ನಗರದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವನ್ನು 10.60 ಲಕ್ಷ ರೂಗಳಲ್ಲಿ ಸುಸಜ್ಜಿತ ಕಟ್ಟಡವನ್ನು ನಿಮರ್ಾಣ ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು ಹಾಗೂ ಶಾಲೆಯ ಮೂಲಭೂತ ಸಮಸ್ಯೆಯಾದ ಶೌಚಾಲಯವನ್ನು ನಿಮರ್ಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಶಾಲೆಯ ವಾತಾವರಣವನ್ನು ಸ್ವಚ್ಚ ಹಾಗೂ ಸುಂದರವಾಗಿಡಲು ಸ್ಥಳಿಯರು ಹಾಗೂ ಶಿಕ್ಷಕ ವೃಂದದವರು ಕೈಜೊಡಿಸಬೆಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಬಾಗೋಜಿ, ಆರತಿ ಪಾಟೋಳೆ, ಎಸ್.ಡಿ.ಎಮ್.ಸಿ ಎಲ್ಲ ಸದಸ್ಯರು, ಮುಖ್ಯೋಪಾದ್ಯಾಯರು ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.