ಲೋಕದರ್ಶನ ವರದಿ
ಶಿಗ್ಗಾವಿ17: ಪಟ್ಟಣದ ಬೆಳಕು ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಂಸ್ಕೃತಿಕ ಟ್ರಸ್ಟ ಆಶ್ರಯದಲ್ಲಿ ಗದಗ-ಧಾರವಾಡ ಮತ್ತು ಹಾವೇರಿ ತ್ರಿವಳಿ ಜಿಲ್ಲಾ ಮಟ್ಟದ ಬೆಳಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿಗಳು ಹಾಗೂ ದೂರದರ್ಶನದ ಸಹಾಯಕ ನಿದರ್ೇಶಕರು ಆದ ನಿರ್ಮಲಾ ಎಲಿಗಾರ್ ಅವರನ್ನು ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲು ಚಾಲನೆಯನ್ನು ಶಾಸಕ ಬಸವರಾಜ ಬೊಮ್ಮಾಯಿ ನೇರವೆರಿಸಿದರು. ಮೆರವಣಿಗೆಯಲ್ಲಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾದೀಶರು ಹಾಗೂ ಬೆಳಕು ಟ್ರಸ್ಟ ಗೌರವಾದ್ಯಕ್ಷರು ಆದ ಅರಳಿ ನಾಗರಾಜ ಉಪಸ್ಥಿತರಿದ್ದರು.
ಪಟ್ಟಣದ ಸಂತೆ ಮೈದಾನದಿಂದ ಮೇರವಣಿಗೆಗೆ ಚಾಲನೆಯನ್ನು ನೀಡಿದ ನಂತರ ಮೇರವಣಿಗೆಯಲ್ಲಿ ವಿವಿಧ ವಾದ್ಯಗಳಾದ ಗುಗ್ಗಳದ ಸಮಾಳವನ್ನೂ ಹಾಗೂ ಝಾಂಜ್ ಪಥಕದಿಂದ ವಿವಿಧ ವಾದ್ಯಗಳಿಂದ ಕನ್ನಡ ಪರ ದ್ವಜಗಳನ್ನು ಹಿಡಿದು ರಸ್ಥೆಯುದ್ದಕ್ಕೂ ಸಮ್ಮೇಳನಾಧ್ಯಕ್ಷೆ ನಿರ್ಮಲಾ ಎಲಿಗಾರ್ ಅವರನ್ನು ಶಿಗ್ಗಾವಿಯ ವಿವಿಧ ಗಣ್ಯರುಗಳು ಅವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ ಗೌರವಿಸುವದು ಸಾಮಾನ್ಯವಾಗಿತ್ತು, ಮೆರವಣಿಗೆಯಲ್ಲಿ ಶಾಸಕ ಬಸವರಾಜ ಬೊಮ್ಮಾಯಿ, ಜಿಪಂ ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಸದಸ್ಯ ಶೋಭಾ ಗಂಜಿಗಟ್ಟಿ, ಮಾಜಿ ವಿ.ಪ ಸದಸ್ಯ ಸೋಮಣ್ಣ ಬೇವಿನಮರದ, ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗಿಮಠ, ಭರತ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ವಿರೇಶ ಆಜೂರ, ಮಂಜುನಾಥ ಮಣ್ಣಣ್ಣವರ, ಸುಬಾಸ ಚವ್ಹಾಣ, ಅಜರ್ುನ ಹಂಚಿನಮನಿ, ಪ್ರಕಾಶ ಹಾದಿಮನಿ ಉಪಸ್ಥಿತರಿದ್ದರು.
ಟ್ರಸ್ಟ ರಾಜ್ಯ ಘಟಕದ ಸಂಚಾಲಕ ಶರೀಫ ನದಾಫ, ತಾಲೂಕ ಘಟಕದ ಅಧ್ಯಕ್ಷ ಬಸವರಾಜ ಹಡಪದ, ಚನ್ನಪ್ಪ ಕುನ್ನೂರ ಶಾಲೆಯ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ, ಎಸ್.ಆರ್.ಜೆ.ವಿ.ಜಿ. ಪಿಯು ಕಾಲೇಜ ಪ್ರಾಚಾರ್ಯ ಎಸ್.ವ್ಹಿ.ಕುಲಕಣರ್ಿ, ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ, ನಿಂಗಪ್ಪ ಬೆಂಚಳ್ಳಿ, ಪ್ರೊ ಶಿವಪ್ರಕಾಶ ಬಳಿಗಾರ, ನಿವೃತ್ತ ಶಿಕ್ಷಕರಾದ ಸಿ.ಎಚ್.ಸೋಮನಕಟ್ಟಿ, ರಾಜೇಶ್ವರಿ ಹಿರೇಮಠ, ಮಲ್ಲಮ್ಮ ಸೋಮನಕಟ್ಟಿ, ರಾಯೇಶ್ವರಿ ರಾಯ್ಕರ್, ಬೆಳಕು ಟ್ರಸ್ಟ ಯುವ ಘಟಕದ ಅಧ್ಯಕ್ಷ ನಾಗಪ್ಪ ಬೆಂತೂರ, ಕನ್ನಡಪರ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಸೇರಿದಂತೆ ಹಲವರು ಇದ್ದರು.